Search
  • Follow NativePlanet
Share
» »ಹುಬ್ಬಳ್ಳಿ ಮೇಲೆ ಹೋಗಿ, ಧಾರವಾಡದ ಮೇಲೆ ಬನ್ನಿ...

ಹುಬ್ಬಳ್ಳಿ ಮೇಲೆ ಹೋಗಿ, ಧಾರವಾಡದ ಮೇಲೆ ಬನ್ನಿ...

ಹುಬ್ಬಳ್ಳಿ ಮತ್ತು ಧಾರವಾಡ ಅವಳಿ-ಜವಳಿ ಇದ್ದಂತೆ. ಇವು ಕೇವಲ 20 ಕಿ.ಮೀ. ಅಂತರದಲ್ಲಿ ಪ್ರತ್ಯೇಕಗೊಂಡಿವೆ. ಈ ಎರಡು ಪ್ರದೇಶವು ಉದ್ಯಮ ಕ್ಷೇತ್ರದಲ್ಲಿ ಉತ್ತಮ ಸ್ಥಾನ ಪಡೆದ ಹಾಗೆ ಪ್ರವಾಸೋದ್ಯಮದಲ್ಲೂ ತನ್ನದೇ ಹಿರಿಮೆಯನ್ನು ಹೊಂದಿವೆ.

By Divya

ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ಜವಳಿ ಇದ್ದಂತೆ. ಇವೆರಡು ಕೇವಲ 20 ಕಿ.ಮೀ. ಅಂತರದಲ್ಲಿ ಪ್ರತ್ಯೇಕಗೊಂಡಿವೆ. ಈ ಎರಡು ಪ್ರದೇಶವು ಕೈಗಾರಿಕೆ, ಉದ್ಯಮ, ಶಿಕ್ಷಣ ಕ್ಷೇತ್ರದಲ್ಲಿ ಹೇಗೆ ಉತ್ತಮ ಸ್ಥಾನ ಪಡೆದುಕೊಂಡಿದೆಯೋ ಹಾಗೆಯೇ ಪ್ರವಾಸೋದ್ಯಮ ವಿಚಾರದಲ್ಲೂ ತನ್ನದೇ ಆದ ಹಿರಿಮೆಯನ್ನು ಹೊಂದಿವೆ. ಬೆಂಗಳೂರಿನಿಂದ 410-423 ಕಿ.ಮೀ. ದೂರದಲ್ಲಿರುವ ಈ ಸಿಟಿಗಳಲ್ಲಿ ನೋಡಬಹುದಾದ ಪ್ರದೇಶಗಳು ಯಾವವು ಎಂಬುದನ್ನು ತಿಳಿಯೋಣ ಬನ್ನಿ.

ನೃಪತುಂಗಾ ಬೆಟ್ಟ

ನೃಪತುಂಗಾ ಬೆಟ್ಟ

ನೃಪತುಂಗಾ ಬೆಟ್ಟವು ಹುಬ್ಬಳ್ಳಿಯಲ್ಲಿ ಬರುವ ಒಂದು ಚಿಕ್ಕ ಬೆಟ್ಟ. ಇದು ಹುಬ್ಬಳ್ಳಿ ಹಾಗೂ ಧಾರವಾಡದ ಮಂದಿಗಳಿಗೆ ಸುಂದರವಾದ ವಿಹಾರದ ಸ್ಥಳವೂ ಹೌದು. ಈ ಬೆಟ್ಟದಲ್ಲಿ ಮಕ್ಕಳಿಗಾಗಿ ನಿರ್ಮಿಸಿರುವ ಸುಂದರವಾದ ಪಾರ್ಕ್ ಇದೆ. ದೊಡ್ಡವರು ಬೆಟ್ಟದ ಸೌಂದರ್ಯವನ್ನು ಕಣ್ತುಂಬಿಕೊಂಡರೆ, ಮಕ್ಕಳು ಮನಸ್ಸಿಗೆ ಇಷ್ಟವಾದ ಆಟಗಳನ್ನು ಆಡಿ ಖುಷಿಪಡಬಹುದು. ಇಲ್ಲಿಯ ವಾತಾವರಣ ಶುಚಿಯಾಗಿಡುವ ಉದ್ದೇಶದಿಂದ ಟಿಕೆಟ್ ಪಡೆಯುತ್ತಾರೆ. ಹಾಗಾಗಿ 5-10 ರೂಪಾಯಿ ದರದ ಟಿಕೆಟ್ ಪ್ರತಿಯೊಬ್ಬರು ಪಡೆಯಬೇಕು.
PC: flickr.com

ಬನಶಂಕರಿ ದೇಗುಲ

ಬನಶಂಕರಿ ದೇಗುಲ

13ನೇ ಶತಮಾನದಲ್ಲಿ ನಿರ್ಮಿಸಲಾದ ಬನಶಂಕರಿ ದೇಗುಲ ಚಾಲುಕ್ಯರ ಕಾಲದ್ದು. ಚಾಲುಕ್ಯರ ಕಲೆಯ ವೈಭವಕ್ಕೆ ಕನ್ನಡಿ ಹಿಡಿಯುವ ಈ ದೇಗುಲದಲ್ಲಿ ವಿಭಿನ್ನವಾದ ಕೆತ್ತನೆಯ ಹಲವಾರು ಕಂಬಗಳನ್ನು ಕಾಣಬಹುದು. ವಿಶಾಲವಾದ ಜಾಗ, ಜನ ಜಂಗುಳಿ ಇಲ್ಲದ ಈ ಜಾಗದಲ್ಲಿ ಬೇಕಾದಷ್ಟು ಸಮಯದವರೆಗೆ ಕಾಲಕಳೆಯಬಹುದು.
PC: wikipedia.org

ಚಂದ್ರಮೌಳೀಶ್ವರ ದೇಗುಲ

ಚಂದ್ರಮೌಳೀಶ್ವರ ದೇಗುಲ

ಗೋಪುರ ಇಲ್ಲದ ಈ ದೇಗುಲ 900 ವರ್ಷಗಳಷ್ಟು ಹಳೆಯದ್ದು. ನಂದಿಯ ಎರಡು ವಿಗ್ರಹ ಇರುವುದನ್ನು ಇಲ್ಲಿ ನೋಡಬಹುದು. ದೇವಾಲಯದ ಸುತ್ತ 12 ಬಾಗಿಲು, ಅದಕ್ಕೆ ಸುಂದರವಾದ ಕೆತ್ತನೆಗಳಿರುವುದನ್ನು ನೋಡಬಹುದು. ಈಗಲೂ ಇಲ್ಲಿ ಪೂಜೆ ನಡೆಯುವುದು ವಿಶೇಷ.
PC: wikipedia.org

ನವಗ್ರಹ ತೀರ್ಥ

ನವಗ್ರಹ ತೀರ್ಥ

ಜೈನರ ಒಂದು ಪವಿತ್ರ ಕ್ಷೇತ್ರ ನವಗ್ರಹ ತೀರ್ಥ. ಇಲ್ಲಿ ಜೈನ ತೀರ್ಥಂಕರರ ವಿಗ್ರಹಗಳನ್ನು ಇಡಲಾಗಿದೆ. 61 ಅಡಿ ಎತ್ತರದ ಪಾಶ್ರ್ವನಾಥ ವಿಗ್ರಹವೇ ಪ್ರಮುಖವಾದದ್ದು. ಇದು ಸುಮಾರು 185 ಟನ್ ತೂಕವನ್ನು ಹೊಂದಿದೆ. 45 ಎಕರೆ ವಿಸ್ತೀರ್ಣ ಹೊಂದಿರುವ ನವಗ್ರಹ ತೀರ್ಥ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.

ಇಂದಿರಾ ಗಾಂಧಿ ಗ್ಲಾಸ್ ಹೌಸ್

ಇಂದಿರಾ ಗಾಂಧಿ ಗ್ಲಾಸ್ ಹೌಸ್

ಇಂದಿರಾ ಗಾಂಧಿ ಗ್ಲಾಸ್ ಹೌಸ್ ಮುನಸಿಪಾಲಿಟಿಯ ಅಧೀನದಲ್ಲಿದೆ. ಬೆಂಗಳೂರಿನಲ್ಲಿರುವ ಗ್ಲಾಸ್ ಹೌಸ್‍ಅನ್ನೇ ಹೋಲುವ ಇದು ಅನೇಕ ಸಾಮಾಜಿಕ ಕಾರ್ಯಕ್ರಮಗಳಿಗೆ ಹಾಗೂ ವಿಶೇಷ ವಸ್ತುಪ್ರದರ್ಶನ ಕಾರ್ಯಕ್ರಮಗಳಿಗೆ ವೇದಿಕೆಯನ್ನು ಕಲ್ಪಿಸಿ ಕೊಡುತ್ತದೆ.

Read more about: hubli
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X