Search
  • Follow NativePlanet
Share
» »ಸದಾ ಕಂಗೊಳಿಸುವ ಶ್ರೀಮಂತ ಉದ್ಯಾನವನಗಳು

ಸದಾ ಕಂಗೊಳಿಸುವ ಶ್ರೀಮಂತ ಉದ್ಯಾನವನಗಳು

ಭಾರತದ ಹಲವು ಪ್ರವಾಸ ತಾಣಗಳಲ್ಲಿ ಉದ್ಯಾನವನಗಳೇ ಹೆಚ್ಚು ಜನರನ್ನು ಆಕರ್ಷಿಸುತ್ತಿವೆ ಎಂದರೆ ತಪ್ಪಾಗಲಾರದು. ಅಂತಹ ಉದ್ಯಾನಗಳ ಸೃಷ್ಟಿ ನಮ್ಮ ನಾಡಿನ ಜನತೆದು ಎನ್ನುವುದು ಹಿರಿಮೆಯ ವಿಚಾರ.

By Divya

ವಾಹನದ ದಟ್ಟಣೆ, ನಗರೀಕರಣ, ಮನೆಗಳ ಸಾಲು, ಕಸದ ರಾಶಿಯಗಳ ನಡುವೆ ನಿಸರ್ಗದ ಸಿರಿಯನ್ನು ನೋಡುತ್ತೇವೆ ಎನ್ನುವುದು ಕನಸಿನ ಮಾತು. ಕೆಲವೊಂದು ಪ್ರದೇಶದಲ್ಲಿ ಮರಭೂಮಿಯ ಓಯಾಸಿಸ್‍ನಂತೆ ಪುಟ್ಟ ಪುಟ್ಟ ಉದ್ಯಾನಗಳಿರುವುದನ್ನು ನೋಡಬಹುದಷ್ಟೆ. ಮಕ್ಕಳಿಗೆ, ವೃದ್ಧರಿಗೆ ಹಾಗೂ ಪ್ರೇಮಿಗಳಿಗೆ ಇವೇ ಸ್ವರ್ಗ ತಾಣ. ಇತ್ತೀಚೆಗೆ ಮಂದಿಗೂ ಕೊಂಚ ಅರಿವುಂಟಾಗುತ್ತಿರುವುದು ಗಮನಾರ್ಹ. ಪ್ರತಿಯೊಂದು ಬಡಾವಣೆಯಲ್ಲೂ ಉದ್ಯಾನವನಗಳಿರಬೇಕು, ಅಲ್ಲಿ ಗಿಡಮರಗಳನ್ನು ಬೆಳೆಸಬೇಕು, ಮಕ್ಕಳಿಗೆ ಅನುಕೂಲಕರ ವಾತಾವರಣ ಸೃಷ್ಟಿಸಬೇಕು ಎನ್ನುವ ಕಾಳಜಿ ಮನೋಭಾವ ಎದ್ದು ಕಾಣುತ್ತಿದೆ.

ಇಂತಹ ಉತ್ತಮ ಕಲ್ಪನೆ ಹಾಗೂ ಧನಾತ್ಮಕ ಆಲೋಚನೆಯಿಂದ ಅದೆಷ್ಟೋ ಉದ್ಯಾನವನಗಳು ದಾಖಲೆಯನ್ನು ಬರೆದಿವೆ. ಭಾರತದ ಹಲವು ಪ್ರವಾಸ ತಾಣಗಳಲ್ಲಿ ಉದ್ಯಾನವನಗಳೇ ಹೆಚ್ಚು ಜನರನ್ನು ಆಕರ್ಷಿಸುತ್ತಿವೆ ಎಂದರೆ ತಪ್ಪಾಗಲಾರದು. ಅಂತಹ ಉದ್ಯಾನಗಳ ಸೃಷ್ಟಿ ನಮ್ಮ ನಾಡಿನ ಜನತೆದು ಎನ್ನುವುದು ಹಿರಿಮೆಯ ವಿಚಾರ. ವಿಶಾಲ ಪ್ರದೇಶದಲ್ಲಿ ಹರಡಿಕೊಂಡು ಅಮೋಘ ಆಕರ್ಷಣೆಯಿಂದ ಕಂಗೊಳಿಸುವ ಉದ್ಯಾನವನಗಳ ಫೋಟೋ ಪ್ರವಾಸ ಮಾಡೋಣ...

ಶಾಲಿಮಾರ್ ಉದ್ಯಾನ

ಶಾಲಿಮಾರ್ ಉದ್ಯಾನ

ಶ್ರೀನಗರದಲ್ಲಿರುವ ಈ ಉದ್ಯಾನ ದಾಲ್ ಸರೋವರದ ಈಶಾನ್ಯ ಭಾಗದಲ್ಲಿದೆ. ಜಮ್ಮು ಕಾಶ್ಮೀರದ ಅತಿದೊಡ್ಡ ಉದ್ಯಾನ ಎನ್ನುವ ಹಿರಿಮೆ ಇದರದ್ದು. ಮೊಘಲರ ಶೈಲಿಯಲ್ಲಿ ಉದ್ಯಾನ ಕಂಗೊಳಿಸುತ್ತಿದೆ ಎನ್ನಲಾಗುತ್ತದೆ.

ಬೃಂದಾವನ ಉದ್ಯಾನ

ಬೃಂದಾವನ ಉದ್ಯಾನ

ಕರ್ನಾಟಕದ ಮೈಸೂರಿನಲ್ಲಿರುವ ಈ ಉದ್ಯಾನ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಕೃಷ್ಣರಾಜ ಸಾಗರ ಜಲಾಶಯದ ಸಮೀಪದಲ್ಲಿ ಸುಮಾರು 60 ಎಕರೆ ಪ್ರದೇಶವನ್ನು ಹರಡಿಕೊಂಡಿದೆ. ಇಲ್ಲಿಯ ಸಂಗೀತ ಕಾರಂಜಿಗಳು ಎಲ್ಲರ ಮನ ತಣಿಸುತ್ತವೆ. ಪ್ರತಿದಿನ ಬೆಳಗ್ಗೆ 6 ರಿಂದ ರಾತ್ರಿ 8.30ರ ವರೆಗೂ ತೆರೆದಿರುತ್ತದೆ.

ಪಿಂಜೋರೆ ಉದ್ಯಾನ

ಪಿಂಜೋರೆ ಉದ್ಯಾನ

ಹರಿಯಾಣದ ಪಂಚಕುಲೆ ಜಿಲ್ಲೆಯಲ್ಲಿರುವ ಈ ಉದ್ಯಾನವನ್ನು ಯದವಿಂದ್ರ ಉದ್ಯಾನ ಎಂತಲೂ ಕರೆಯುತ್ತಾರೆ. ಪಟಿಯಾಲ ರಾಜಮನೆತನದವರಿಂದ ನಿರ್ಮಾಣಗೊಂಡ ಉದ್ಯಾನದಲ್ಲಿ ಹವಾ ಮಹಲ್, ಶೀಷ್ ಮಹಲ್ ಹಾಗೂ ರಂಗಮಹಲ್ ಎನ್ನುವ ಸ್ಮಾರಕಗಳಿರುವುದನ್ನು ಕಾಣಬಹುದು.

ಮೊಘಲ್ ಉದ್ಯಾನ

ಮೊಘಲ್ ಉದ್ಯಾನ

ದೆಹಲಿಯಲ್ಲಿರುವ ಈ ಉದ್ಯಾನ ಮೊಘಲರ ಶೈಲಿಯಲ್ಲಿದೆ. ರಾಷ್ಟ್ರಪತಿ ಭವನದ ಒಂದು ಭಾಗವಾದ ಈ ಉದ್ಯಾನ 6 ಹೆಕ್ಟೇರ್ ಪ್ರದೇಶಗಳನ್ನು ಒಳಗೊಂಡಿದೆ. ಇಲ್ಲಿ ಸುಮಾರು 250ಕ್ಕೂ ಹೆಚ್ಚು ಬಗೆಯ ಗುಲಾಬಿ ತಳಿಗಳಿವೆ. ಫೆಬ್ರುವರಿ ಹಾಗೂ ಮಾರ್ಚ್ ತಿಂಗಳಲ್ಲಿ ಮಾತ್ರ ಪ್ರವೇಶಕ್ಕೆ ಅವಕಾಶವಿರುತ್ತದೆ.

ಲಾಲ್ ಬಾಗ್ ಉದ್ಯಾನ

ಲಾಲ್ ಬಾಗ್ ಉದ್ಯಾನ

ಬೆಂಗಳೂರಿನಲ್ಲಿರುವ ಈ ಉದ್ಯಾನ ಹೆಸರೇ ಹೇಳುವಂತೆ ಕೆಂಪು ತೋಟ ಎನ್ನುವ ಅರ್ಥವನ್ನು ನೀಡುತ್ತದೆ. 240 ಎಕರೆ ವಿಸ್ತೀರ್ಣ ಹೊಂದಿರು ಈ ಉದ್ಯಾನದಲ್ಲಿ ಗಾಜಿನ ಮನೆ, ಅಕ್ವೇರಿಯಂ, ಬಣ್ಣ ಬಣ್ಣದ ಹೂ ಗಿಡಗಳು ಹಾಗೂ ನೂರಾರು ವರ್ಷ ಹಳೆಯ ಮರಗಳಿರುವುದನ್ನು ಕಾಣಬಹುದು.

ಲಾಯ್ಡ್ಸ್ ಬಟಾನಿಕಲ್ ಗಾರ್ಡನ್

ಲಾಯ್ಡ್ಸ್ ಬಟಾನಿಕಲ್ ಗಾರ್ಡನ್

ಡಾರ್ಜಿಲಿಂಗ್‍ಅಲ್ಲಿರುವ ಈ ಉದ್ಯಾನ ಬಿದಿರು, ಓಕ್, ಮಾಗ್ನೊಲಿಯಾ, ಕಾಡು ಜೆರೇನಿಯಂ ಗುಲ್ಮ ಸೇರಿದಂತೆ ಅನೇಕ ಸ್ಥಳೀಯ ಗಿಡಮರಗಳಿಂದ ಕೂಡಿದೆ. ಗುಡ್ಡಗಾಡು ಪ್ರದೇಶಗಳನ್ನು ಒಳಗೊಂಡಿರುವುದರಿಂದ ವಿಶೇಷವಾದ ಆಕರ್ಷಣೆಯಿಂದ ಕೂಡಿದೆ.

ತೂಗುವ ಉದ್ಯಾನ

ತೂಗುವ ಉದ್ಯಾನ

ಮುಂಬೈನ ಮಲಬಾರ್ ಹಿಲ್ ಪ್ರದೇಶದಲ್ಲಿದೆ. ಇದನ್ನು ಫಿರೋಜ್ ಶಾ ಮೆಹತಾ ಉದ್ಯಾನ ಎಂತಲೂ ಕರೆಯುತ್ತಾರೆ. ಇಲ್ಲಿ ಸಸ್ಯಗಳನ್ನು ವಿವಿಧ ಆಕರ್ಷಕ ಆಕೃತಿಯಲ್ಲಿ ಕತ್ತರಿಸಿ ಬೆಳೆಸಲಾಗಿದೆ. ಅರೇಬಿಯನ್ ಸಮುದ್ರ ಹತ್ತಿರವೇ ಇರುವುದರಿಂದ ಇಲ್ಲಿಯ ಸೂರ್ಯಾಸ್ತ ಹಾಗೂ ಸೂರ್ಯೋದಯವನ್ನು ವೀಕ್ಷಿಸುವುದೇ ಚೆಂದ.
PC: wikipedia.org

ರಾಕ್ ಗಾರ್ಡನ್

ರಾಕ್ ಗಾರ್ಡನ್

ಚಂಡೀಗಡ್‍ನಲ್ಲಿರುವ ಈ ಉದ್ಯಾನ ವಿಭಿನ್ನ ಆಕರ್ಷಣೆಯಿಂದ ಕೂಡಿದೆ. ಇಲ್ಲಿ ಬೇಡದ ವಸ್ತುಗಳಿಂದಲೇ ಕಲಾಕೃತಿಯನ್ನು ಮಾಡಲಾಗಿದೆ. 40 ಎಕರೆ ವಿಸ್ತೀರ್ಣದಲ್ಲಿರುವ ಈ ಉದ್ಯಾನದಲ್ಲಿ ಕೃತಕವಾಗಿ ಧುಮುಕುವ ಜಲಧಾರೆಗಳನ್ನು ಕಣ್ತುಂಬಿಕೊಳ್ಳಬಹುದು.

ಬೊಟಾನಿಕಲ್ ಗಾರ್ಡನ್

ಬೊಟಾನಿಕಲ್ ಗಾರ್ಡನ್

ಊಟಿಯಲ್ಲಿರುವ ಈ ಉದ್ಯಾನವನ 22 ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿದೆ. ಇಳಿಜಾರು ಆಕೃತಿಯನ್ನು ಹೊಂದಿರುವ ಈ ಉದ್ಯಾನದಲ್ಲಿ ಸಾವಿರಕ್ಕೂ ಹೆಚ್ಚು ವಿಭಿನ್ನ ಗಿಡ ಮರಗಳನ್ನು ಕಾಣಬಹುದು.

ಟುಲಿಪ್ ಉದ್ಯಾನ

ಟುಲಿಪ್ ಉದ್ಯಾನ

ಶ್ರೀನಗರದಲ್ಲಿರುವ ಈ ಉದ್ಯಾನ ಏಷ್ಯಾ ಖಂಡದ ಅತಿದೊಡ್ಡ ಟುಲಿಪ್ ಉದ್ಯಾನ ಎನ್ನಲಾಗುತ್ತದೆ. 12 ಹೆಕ್ಟೇರ್ ಪ್ರದೇಶದಲ್ಲಿರುವ ಈ ಉದ್ಯಾನ ಬಣ್ಣ ಬಣ್ಣದ ಹೂಗಳಿಂದ ಕಂಗೊಳಿಸುತ್ತವೆ.
PC: wikitravel.org

Read more about: karnataka kashmir ooty
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X