Search
  • Follow NativePlanet
Share
» »ಬೆಂಗಳೂರಿನಿಂದ ವರ್ಕಲಾಗೆ ಹೀಗೆ ಪ್ರಯಾಣಿಸಿ

ಬೆಂಗಳೂರಿನಿಂದ ವರ್ಕಲಾಗೆ ಹೀಗೆ ಪ್ರಯಾಣಿಸಿ

By Vijay

ರೈಲಿನಲ್ಲಿ ಪ್ರವಾಸ ಹೊರಡುವುದು ಒಂದು ಬಗೆಯ ಆನಂದ ಉಂಟು ಮಾಡಿದರೆ ರಸ್ತೆಯ ಮೂಲಕ ಪ್ರವಾಸ ಹೊರಡುವುದು ಇನ್ನೊಂದು ಬಗೆಯ ಸಂತಸ ಕರುಣಿಸುತ್ತದೆ. ಅದರಲ್ಲೂ ವಿಶೇಷವಾಗಿ ನಮ್ಮದೆ ಆದ ಸ್ವಂತ ವಾಹನ ಇಲ್ಲವೆ ಬಾಡಿಗೆ ಕಾರಿನ ಮೂಲಕ ಪ್ರವಾಸ ಹೊರಟರೆ ಸಂತೋಷ ಇಮ್ಮಡಿಯಾಗುವುದು ಖಂಡಿತ. ಏಕೆಂದರೆ ನಮಗೆ ಬೇಕಾದ ಹಾಗೆ ನಮ್ಮವರೊಡನೆ ಮಾತ್ರ ಬೆರೆತು ಹಾಯಾಗಿ ಯಾವ ಅಡಚಣೇಗಳೂ ಇಲ್ಲದೆ ನಿರಾಯಾಸವಾಗಿ ಸಾಗಬಹುದು. ಮತ್ತೊಂದು ಉಪಯೋಗವೆಂದರೆ ಸಾಕಷ್ಟು ಸಮಯ ಉಳಿಸಬಹುದು ಹಾಗೂ ಬಸ್ಸುಗಳು ಸಿಗದ ಅಥವಾ ಕಷ್ಟಕರವಾಗಿ ಲಭಿಸುವ ಸ್ಥಳಗಳಿಗೂ ಸಹ ಭೇಟಿ ನೀದಬಹುದು.

ಗುರುವಾರ ವಿಶೇಷ : ಪ್ರವಾಸ ಹಾಗೂ ವಿಮಾನ ಹಾರಾಟಗಳ ಮೇಲೆ 50% ರ ವರೆಗೆ ಕಡಿತ!

ವಿಶೇಷ ಲೇಖನ : ಬೆಂಗಳೂರಿನಿಂದ ಕೊಡಚಾದ್ರಿ ಹೀಗೂ ಪ್ರಯಾಣಿಸಿ

ಹಾಗಾದರೆ ಬನ್ನಿ ಪ್ರಸ್ತುತ ಲೇಖನದ ಮೂಲಕ ಬೆಂಗಳೂರಿನಿಂದ ಕೇರಳದಲ್ಲಿರುವ ಸುಂದರ ಕಡಲ ತೀರ ಹೊಂದಿರುವ ಜನಾಕರ್ಷಣೆಯ ಕಡಲ ತೀರವಾದ ವರ್ಕಲಾಗೆ ಯಾವೆಲ್ಲ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುತ್ತ ತಲುಪಬಹುದೆಂದು ತಿಳಿಯೋಣ. ಬೆಂಗಳೂರಿನಿಂದ ವರ್ಕಲಾ ಸುಮಾರು 715 ಕಿ.ಮೀ ಗಳಷ್ಟು ಅಂತರದಲ್ಲಿದೆ. ಈ ಮಾರ್ಗವು ಕೇರಳ ವರ್ಕಲಾವನ್ನು ತಮಿಳುನಾಡಿನ ಮೂಲಕ ಬೆಸೆಯುತ್ತದೆ. ಹಾಗಾಗಿ ಈ ಒಂದು ಪ್ರವಾಸವು ಮೂರು ರಾಜ್ಯಗಳ ನಡುವೆ ಸಾಗುತ್ತದೆ ಹಾಗೂ ಮಾರ್ಗ ಮಧ್ಯದಲ್ಲಿ ಸಾಕಷ್ಟು ಆಕರ್ಷಣೆಗಳನ್ನೂ ಸಹ ಕಾಣಬಹುದು.

ಬೆಂಗಳೂರಿನಿಂದ ವರ್ಕಲಾ:

ಬೆಂಗಳೂರಿನಿಂದ ವರ್ಕಲಾ:

ಉದ್ಯಾನ ನಗರಿ ಬೆಂಗಳೂರಿನಿಂದ ವರ್ಕಲಾ ಪ್ರವಾಸವನ್ನು ಆರಂಭಿಸೋಣ. ಈ ಮಾರ್ಗವು ಮೊದಲು ತಮಿಳುನಾಡು ರಾಜ್ಯಕ್ಕೆ ಸಲಾಂ ಹೊಡೆದು ಅಲ್ಲಿನ ಕೆಲ ಪ್ರಮುಖ ಆಕರ್ಷಣೆಗಳಲ್ಲಿ ಕಣ್ಣಾಡಿಸುತ್ತ, ಕೇರಳ ರಾಜ್ಯಕ್ಕೆ ಪ್ರವೇಶಿಸಿ ಕೊನೆಯದಾಗಿ ವರ್ಕಲಾಗೆ ತಲುಪುತ್ತದೆ.

ಬೆಂಗಳೂರಿನಿಂದ ವರ್ಕಲಾ:

ಬೆಂಗಳೂರಿನಿಂದ ವರ್ಕಲಾ:

ಮೊದಲನೆಯ ಮಾರ್ಗವಾಗಿ ಬೆಂಗಳೂರಿನಿಂದ ಹೊಸೂರು ಮಾರ್ಗವಾಗಿ ಕೃಷ್ಣಗಿರಿಯನ್ನು ತಲುಪಬೇಕು. ಇದರ ಒಟ್ಟು ದೂರ ಸುಮಾರು 76 ಕಿ.ಮೀ ಗಳು. ಕೃಷ್ಣಗಿರಿಗೆ ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿ ಸಾಕಷ್ಟು ಪುರಾತನ ದೇವಾಲಯಗಳನ್ನು ನೋದಬಹುದು. ಅಲ್ಲದೆ ಹಳೆಯದಾದ ಕೃಷ್ಣಗಿರಿ ಕೋಟೆ ಹಾಗೂ ಕೃಷ್ಣಗಿರಿ ಜಲಾಶಯವು ಜನಪ್ರೀಯ ಆಕರ್ಷಣೆಗಳಾಗಿವೆ.

ಚಿತ್ರಕೃಪೆ: TheZionView

ಬೆಂಗಳೂರಿನಿಂದ ವರ್ಕಲಾ:

ಬೆಂಗಳೂರಿನಿಂದ ವರ್ಕಲಾ:

ಕೃಷ್ಣಗಿರಿಯಿಂದ ರಾಜ್ಯ ಹೆದ್ದಾರಿ ಸಂಖ್ಯೆ 17 ರ ಮೂಲಕ ಸಾಗುತ್ತ ಒಟ್ಟು 70 ಕಿ.ಮೀ ಕ್ರಮಿಸಿ ಧರ್ಮಪುರಿಯನ್ನು ತಲುಪಬೇಕು. ಧರ್ಮಪುರಿಯಲ್ಲಿ ಹೇಳಿಕೊಳ್ಳುವಂತಹ ಅಂತಹ ಆಕರ್ಷಣೆಗಳೇನು ಇಲ್ಲವಾದರೂ ಇಲ್ಲಿಂದ 45 ಕಿ.ಮೀ ಗಳಷ್ಟು ದೂರದಲ್ಲಿರುವ ಹೋಗೆನಕ್ಕಲ್ ಜಲಪಾತ ಮಾತ್ರ ಆಕರ್ಷಕ ತಾಣವಾಗಿದೆ. ಹೋಗೆನಕ್ಕಲ್ ಜಲಪಾತದ ಮೈಸಿರಿ

ಚಿತ್ರಕೃಪೆ: Gowthampavithra

ಬೆಂಗಳೂರಿನಿಂದ ವರ್ಕಲಾ:

ಬೆಂಗಳೂರಿನಿಂದ ವರ್ಕಲಾ:

ಧರ್ಮಪುರಿಯಿಂದ ನಂತರ ಪ್ರಯಾಣ ಮುಂದುವರೆಸುತ್ತ 65 ಕಿ.ಮೀ ಕ್ರಮಿಸಿದಾಗ ದೊರೆಯುವ ಪಾಟಣ ಸೇಲಂ. ಸೇಲಂ, ತಮಿಳುನಾಡಿನ ಬೆಳೆಯುತ್ತಿರುವ ಪಟ್ಟಣವಾಗಿದ್ದು ಸಾಕಷ್ಟು ಕೈಗಾರಿಕೋದ್ಯಮಗಳು, ರಿಟೇಲ್ ಅಂಗಡಿ ಮುಗ್ಗಟ್ಟುಗಳು, ಶಾಪಿಂಗ್ ಮಾಲ್ ಗಳನ್ನು ಇಲ್ಲಿ ಕಾಣಬಹುದು. ಅಲ್ಲದೆ ಸೇಲಂ ನಲ್ಲಿ ಕೊಟ್ಟೈ ಮಾರಯಮ್ಮನವರ ದೇವಾಲಯ, ಸುಗವನೇಶ್ವರರ್ ದೇವಾಲಯ, ಪೆರುಮಾಳ ದೇವಾಲಯ ಮುಂತಾದ ಪ್ರಸಿದ್ಧ ದೇವಾಲಯಗಳನ್ನು ಇಲ್ಲಿ ಕಾಣಬಹುದು.

ಚಿತ್ರಕೃಪೆ: Arulmuru182002

ಬೆಂಗಳೂರಿನಿಂದ ವರ್ಕಲಾ:

ಬೆಂಗಳೂರಿನಿಂದ ವರ್ಕಲಾ:

ಸೇಲಂನಿಂದ ರಾಷ್ಟ್ರೀಯ ಹೆದ್ದಾರಿ 47 ರ ಮೂಲಕ 68 ಕಿ.ಮೀ ಕ್ರಮಿಸಿ ಭವಾನಿ ಎಮ್ಬ ಪುಟ್ಟ ಪಟ್ಟಣವನ್ನು ತಲುಪಬಹುದು. ತಮಿಳುನಾಡಿನ ಎರಡನೆಯ ದೊಡ್ಡ ನದಿಯಾದ ಭವಾನಿಯಿಂದ ಈ ಸ್ಥಳಕ್ಕೆ ಭವಾನಿ ಎಂಬ ಹೆಸರು ಬಂದಿದೆ. ಇದನ್ನು ದಕ್ಷಿಣದ ತ್ರಿವೇಣಿ ಸಂಗಮ ಎಂದು ಕರೆಯಲಾಗುತ್ತದೆ. ಏಕೆಂದರೆ ಈ ಒಂದು ಸ್ಥಳದಲ್ಲಿ ರಹಸ್ಯಮಯ ಸರಸ್ವತಿ, ಕಾವೇರಿ ಹಾಗೂ ಭವಾನಿ ನದಿಗಳು ಒಂದಕ್ಕೊಂದು ಸಂಧಿಸುತ್ತವೆ ಎನ್ನಲಾಗಿದೆ. ಕಾವೇರಿ ಹಾಗೂ ಭವಾನಿ ನದಿಗಳ ಸಂಗಮವನ್ನು ಇಲ್ಲಿ ಕಣ್ಣಾರೆ ಕಾಣಬಹುದು.

ಚಿತ್ರಕೃಪೆ: Rsrikanth05

ಬೆಂಗಳೂರಿನಿಂದ ವರ್ಕಲಾ:

ಬೆಂಗಳೂರಿನಿಂದ ವರ್ಕಲಾ:

ಭವಾನಿಯಿಂದ ಈರೋಡ್ ಪಟ್ಟಣವು ಕೇವಲ 15 ಕಿ.ಮೀ ಗಳಷ್ಟು ಅಂತರದಲ್ಲಿದೆ. ಬೇಕಿದ್ದರೆ ತಂಗಲು ಈರೋಡ್ ಪಟ್ಟಣಕ್ಕೆ ತೆರಳಬಹುದು. ಇಲ್ಲಿ ಹೋಟೆಲುಗಳ ಲಭ್ಯವಿದೆ. ನಂತರ ಭವಾನಿಯಿಂದ ರಾಷ್ಟ್ರೀಯ ಹೆದ್ದಾರಿ 47 ರ ಮೂಲಕ 65 ಕಿ.ಮೀ ಕ್ರಮಿಸಿ ತಮಿಳುನಾಡಿನ ತಿರುಪುರ್ ಜಿಲ್ಲೆಯಲ್ಲಿರುವ ಅವಿನಾಶಿ ತಾಲೂಕನ್ನು ತಲುಪಬೇಕು. ಅವಿನಾಶಿಯು ಅವಿನಾಶಿಯಪ್ಪರರ್ ದೇವಸ್ಥಾನಕ್ಕೆ ಪ್ರಸಿದ್ಧವಾಗಿದ್ದು ಈ ದೇವಸ್ಥಾನದ ತೇರು/ರಥವು ದಕ್ಷಿಣ ಭಾರತದ ಎರಡನೆಯ ದೊಡ್ಡ ತೇರಾಗಿದೆ.

ಚಿತ್ರಕೃಪೆ: Srinivasan R

ಬೆಂಗಳೂರಿನಿಂದ ವರ್ಕಲಾ:

ಬೆಂಗಳೂರಿನಿಂದ ವರ್ಕಲಾ:

ಅವಿನಾಶಿಯಿಂದ ಮುಂದೆ ಪ್ರಯಾಣ ಮುಂದುವರೆಸಿ ಕೋಯಮತ್ತೂರನ್ನು ತಲುಪಬಹುದು. ಹಾಗೆ ನೋಡಿದರೆ ರಾಷ್ಟ್ರೀಯ ಹೆದ್ದಾರಿ 47 ರಲ್ಲಿ ಕೋಯಮತ್ತೂರು ಬೈಪಾಸ್ ಮೂಲಕ ಮುಂದೆ ಸಾಗಿ ಕೇರಳದ ಪಾಲಕ್ಕಾಡ್ ಅನ್ನು ಪ್ರವೇಶಿಸಬಹುದಾಗಿದೆ. ಆದರೆ ಕೋಯಮತ್ತೂರು ತಮಿಳುನಾಡಿನ ಪ್ರಮುಖ ಪಟ್ಟಣಗಳ ಪೈಕಿ ಒಂದಾಗಿದ್ದು ಕೆಲ ಪ್ರೇಕ್ಷಣೀಯ ಸ್ಥಳಗಳನ್ನು ಇಲ್ಲಿ ಆಸ್ವಾದಿಸಬಹುದಾಗಿದೆ. ಅವಿನಾಶಿಯಿಂದ ಕೋಯಮತ್ತೂರು ಕೇವಲ 45 ಕಿ.ಮೀ ಗಳಷ್ಟು ಅಂತರದಲ್ಲಿದೆ.

ಚಿತ್ರಕೃಪೆ: Vijayasarathi R

ಬೆಂಗಳೂರಿನಿಂದ ವರ್ಕಲಾ:

ಬೆಂಗಳೂರಿನಿಂದ ವರ್ಕಲಾ:

ಕೊವೈಕುಟ್ರಾಲಂ, ಕೋಯಮತ್ತೂರು ನಗರದಿಂದ ಸುಮಾರು 35 ಕಿ.ಮೀ ಗಳ ಅಂತರದಲ್ಲಿ ಈ ಕಣ್ಮನ ಸೆಳೆಯುವ ಜಲಪಾತವನ್ನು ದಟ್ಟ ಕಾಡಿನ ಮಧ್ಯದಲ್ಲಿ ಕಾಣಬಹುದಾಗಿದೆ. ಸಿರುವಾನಿ ನದಿಯಿಂದ ರೂಪಿತವಾದ ಈ ಜಲಪಾತ ತಾಣ ಕುಟುಂಬ ಸಮೇತ ಪ್ರವಾಸಕ್ಕೆ ಅದ್ಭುತವಾಗಿದೆ. ನಗರದಿಂದ ಬಾಡಿಗೆ ಟ್ಯಾಕ್ಸಿ ಇಲ್ಲವೆ ಸರ್ಕಾರಿ ಬಸ್ಸುಗಳು ಇಲ್ಲಿಗೆ ತೆರಳಲು ದೊರೆಯುತ್ತವೆ. ಅರಣ್ಯದ ಒಂದು ನಿರ್ದಿಷ್ಟ ಸ್ಥಳದಿಂದ ಕಾಲ್ನಡಿಗೆ ಇಲ್ಲವೆ ಅರಣ್ಯ ಇಲಾಖೆಯ ವಾಹನಗಳ ಮೂಲಕ ಜಲಪಾತ ಕೇಂದ್ರಕ್ಕೆ ತೆರಳಬಹುದು.

ಚಿತ್ರಕೃಪೆ: Ramana

ಬೆಂಗಳೂರಿನಿಂದ ವರ್ಕಲಾ:

ಬೆಂಗಳೂರಿನಿಂದ ವರ್ಕಲಾ:

ಈಶ ಯೋಗ ಧ್ಯಾನ ಕೇಂದ್ರ ಅಥವಾ ಧ್ಯಾನಲಿಂಗ ಎಂದು ಕರೆಯಲ್ಪಡುವ ಈ ಧ್ಯಾನ ಕೇಂದ್ರವು ಕೋಯಮತ್ತೂರು ನಗರದ ಪ್ರಮುಖ ಆಕರ್ಷಣೆಯಾಗಿದೆ. ನಗರ ಪ್ರದೇಶದಿಂದ ಸುಮಾರು 30 ಕಿ.ಮೀ ಗಳಷ್ಟು ದೂರದಲ್ಲಿ ಈ ಧ್ಯಾನ ಕೇಮ್ದ್ರವಿದೆ. ಧ್ಯಾನಕ್ಕೆ ಮೀಸಲಾಗಿರುವ ಈ ಆಲಯದಲ್ಲಿ ಬೃಹತಾದ ಶಿವಲಿಂಗವಿದ್ದು ಸಾಕಷ್ಟು ಜನ ಭಕ್ತಾದಿಗಳು ಇಲ್ಲಿ ಬಂದು ಧ್ಯಾನದಲ್ಲಿ ನಿರತರಾಗುತ್ತಾರೆ. ಅನೇಕರ ಪ್ರಕಾರ, ಇದು ಶಕ್ತಿಶಾಲಿಯಾದ ಶಿವಲಿಂಗವಾಗಿದ್ದು ಸಾಕಷ್ಟು ನೆಮ್ಮದಿ ಶಾಂತಿಯನ್ನು ಕರುಣಿಸುತ್ತದೆ. ಈಶ ಯೋಗ ಕೇಂದ್ರದ ಮುಂದಿರುವ ನಂದಿಯ ಬೃಹತ್ ಪ್ರತಿಮೆ.

ಚಿತ್ರಕೃಪೆ: Natesh Ramasamy

ಬೆಂಗಳೂರಿನಿಂದ ವರ್ಕಲಾ:

ಬೆಂಗಳೂರಿನಿಂದ ವರ್ಕಲಾ:

ಮರುದಮಲೈ, ಕೋಯಮತ್ತೂರು ನಗರದಿಂದ ಸುಮಾರು 12 ಕಿ.ಮೀ ಗಳ ಅಂತರದಲ್ಲಿರುವ, ಹೆಚ್ಚು ಜನರು ಭೇಟಿ ನೀಡುವ, ಜನಪ್ರೀಯವಾದ ಸುಬ್ರಹ್ಮಣ್ಯ ಸ್ವಾಮಿಯ ದೇವಸ್ಥಾನವಾಗಿದೆ. ಮುರುಗನ ಇತರೆ ದೇವಾಲಯಗಳಂತೆ ಈ ದೇವಸ್ಥಾನವೂ ಕೂಡ ಪಶ್ಚಿಮ ಘಟ್ಟಗಳ ಒಂದು ಬೆಟ್ಟದ ತುದಿಯಲ್ಲಿ ನಿರ್ಮಾಣವಾಗಿದೆ. ಈ ದೇವಸ್ಥಾನದ ಬಳಿ ತಾನ್ ತೋಂಡ್ರಿ ವಿನಾಯಕರ್ ದೇವಸ್ಥಾನ ಹಾಗೂ ಪಾಂಬಾಟ್ಟಿ ಸಿತ್ತರ್ ಕುಗೈ ಎಂಬ ಹೆಸರಿನ ಗುಹೆಯನ್ನೂ ಸಹ ಕಾಣಬಹುದಾಗಿದೆ.

ಚಿತ್ರಕೃಪೆ: Simply CVR

ಬೆಂಗಳೂರಿನಿಂದ ವರ್ಕಲಾ:

ಬೆಂಗಳೂರಿನಿಂದ ವರ್ಕಲಾ:

ಕೋಯಮತ್ತೂರಿನ ಆಕರ್ಷಣೆಗಳನ್ನು ಸವಿದ ನಂತರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 47 ರಲ್ಲಿ ಮುಂದೆ ಚಲಿಸುತ್ತ ಕೇರಳ ಪ್ರವೇಶಿಸಿ ಪಾಲಕ್ಕಾಡ್ ಅನ್ನು ತಲುಪಬಹುದು. ಇದು ಕೇವಲ 54 ಕಿ.ಮೀ ಗಳಷ್ಟು ಅಂತರದಲ್ಲಿದೆ. ಪಾಲಕ್ಕಾಡ್ ನಲ್ಲಿ ಪಾಲಕ್ಕಾಡ್ ಕೋಟೆ ಹಾಗೂ ಮಲಂಪುಳಾ ಜಲಾಶಯಗಳು ಆಸಕ್ತಿ ಮೂಡಿಸುವ ಸ್ಥಳಗಳಾಗಿವೆ. ಪಾಲಕ್ಕಾಡ್ ಕೋಟೆಯು ನಗರದ ಹೃದಯ ಭಾಗದಲ್ಲಿ ಸ್ಥಿತವಿದ್ದು ಇದನ್ನು ಟಿಪ್ಪು ಕೋಟೆ ಎಂತಲೂ ಸಹ ಕರೆಯಲಾಗುತ್ತದೆ. ಟಿಪ್ಪುವಿನ ತಂದೆ ಹೈದರ್ ಅಲಿಯಿಂದ ಈ ಕೋಟೆಯ ನಿರ್ಮಾಣ ಮಾಡಲಾಗಿದೆ. ಉತ್ತಮವಾಗಿ ಸಂರಕ್ಷಿಸಲ್ಪಟ್ಟ ಕೋಟೆ ಇದಾಗಿದೆ.

ಚಿತ್ರಕೃಪೆ: Pankajakshan Pangunni

ಬೆಂಗಳೂರಿನಿಂದ ವರ್ಕಲಾ:

ಬೆಂಗಳೂರಿನಿಂದ ವರ್ಕಲಾ:

ಮಲಂಪುಳಾ ಜಲಾಶಯ ಒಂದು ಪ್ರವಾಸಿ ಆಕರ್ಷಣೆಯ ಸ್ಥಳವಾಗಿದ್ದು ಜಲಾಶಯದ ಪಕ್ಕದಲ್ಲಿ ಸುಂದರವಾದ ಉದ್ಯಾನವನ್ನೂ ಸಹ ಹೊಂದಿದೆ. ಪಾಲಕ್ಕಾಡ್ ನಗರದಿಂದ ಏಳು ಕಿ.ಮೀ ದೂರದಲ್ಲಿ ಈ ಜಲಾಶಯವಿದೆ. ಮನರಂಜನ ಉದ್ಯಾನ, ದೋಣಿ ವಿಹಾರ, ರೋಪ್ ವೇ ಹಾಗೂ ಶಿಲಾ ಉದ್ಯಾನ ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ. ಪಶ್ಚಿಮ ಘಟ್ಟಗಳ ಹಿನ್ನಿಲೆ ಹೊಂದಿರುವ ಈ ಜಲಾಶಯ ತಾಣವು ಮನಮೋಹಕವಾಗಿ ಗೋಚರಿಸುತ್ತದೆ.

ಚಿತ್ರಕೃಪೆ: Vinod Sankar

ಬೆಂಗಳೂರಿನಿಂದ ವರ್ಕಲಾ:

ಬೆಂಗಳೂರಿನಿಂದ ವರ್ಕಲಾ:

ಪಾಲಕ್ಕಾಡ್ ನಂತರ ರಾಷ್ಟ್ರೀಯ ಹೆದ್ದಾರಿ 47 ರಲ್ಲಿ ಸುಮಾರು 90 ಕಿ.ಮೀ ಗಳಷ್ಟು ಕ್ರಮಿಸಿ ಚಾಲಾಕುಡಿ ಪಟ್ಟಣವನ್ನು ತಲುಪಬೇಕು. ಚಾಲಾಕುಡಿ ಬಳಿಯಿರುವ ಅದೇ ಹೆಸರಿನ ಚಾಲಾಕುಡಿ ನದಿಯಲ್ಲಿ ಭಾರತದಲ್ಲೆ ಹೆಚ್ಚು ಎನ್ನಬಹುದಾದ ಅಧಿಕ ಪ್ರಭೇದಗಳ ಮೀನುಗಳನ್ನು ಇಲ್ಲಿ ಕಾಣಬಹುದು. ಅಲ್ಲದೆ ಚಾಲಾಕುಡಿ ಬಳಿಯಿರುವ ಅತ್ತಿರಪಲ್ಲಿ ಜಲಪಾತ ರಾಜ್ಯದ ಪ್ರಖ್ಯಾತ ಜಲಪಾತ ಕೇಂದ್ರವಾಗಿದೆ. ಸಾಕಷ್ಟು ದಕ್ಷಿಣದ ಚಲನ ಚಿತ್ರಗಳು ಈ ಸುಂದರ ಜಲಪಾತದ ಬಳಿ ಚಿತ್ರೀಕರಣಗೊಂಡಿವೆ. ಈ ಜಲಪಾತ ಕೇಂದ್ರವು ದಟ್ಟ ಅರಣ್ಯದಲ್ಲಿದ್ದು ಚಾಲಾಕುಡಿಯಿಂದ ಕೇವಲ 30 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: NIHAL JABIN

ಬೆಂಗಳೂರಿನಿಂದ ವರ್ಕಲಾ:

ಬೆಂಗಳೂರಿನಿಂದ ವರ್ಕಲಾ:

ಚಾಲಾಕುಡಿಯಿಂದ ರಾಷ್ಟ್ರೀಯ ಹೆದ್ದಾರಿ 47 ರಲ್ಲಿ ಸುಮಾರು 33 ಕಿ.ಮೀ ಗಳಷ್ಟು ಕ್ರಮಿಸಿ ಆಲುವಾ ನಗರವನ್ನು ತಲುಪಬೇಕು. ಆಲುವಾ ಕೊಚ್ಚಿ ಶಹರಿನ ಉಪನಗರವೆಂದೂ ಸಹ ಹೇಳಬಹುದು. ಇದೊಂದು ಔದ್ಯೋಗಿಕ ಪಟ್ಟಣವಾಗಿದ್ದು ರಾಜ್ಯದ ಎಲ್ಲ ಸ್ಥಳಗಳನ್ನು ಒಂದಕ್ಕೊಂದು ಬೆಸೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ನಗರವು ಕೆಲ ಪ್ರಮುಖ ಸ್ಥಳಗಳನ್ನು ಹೊಂದಿದ್ದು ಭೇಟಿ ನೀಡಲು ಯೋಗ್ಯವಾಗಿವೆ. ಇಲ್ಲಿರುವ ಅದ್ವೈತ ಆಶ್ರಮಗಳು ನಗರದ ಸಂಸ್ಕೃತಿ ಸಂಪ್ರದಾಯಗಳ ಮೇಲೆ ಪ್ರಭಾವ ಬೀರಿದೆ. ಅಲ್ಲದೆ ಆಲುವಾ ಅರಮನೆ, ಪೆರಿಯಾರ್ ನದಿ ದಂಡೆಗಳು, ಶ್ರೀಕೃಷ್ನ ದೇವಾಲಯ ಮೂಂತಾದ ಸ್ಥಳಗಳನ್ನು ನೋಡಬಹುದು.

ಚಿತ್ರಕೃಪೆ: Nagarjun Kandukuru

ಬೆಂಗಳೂರಿನಿಂದ ವರ್ಕಲಾ:

ಬೆಂಗಳೂರಿನಿಂದ ವರ್ಕಲಾ:

ಆಲುವಾದಿಂದ ಮುಂದೆ ಕೇವಲ 18 ಕಿ.ಮೀ ಕ್ರಮಿಸಿದರೆ ಸಾಕು ದೊರೆಯುವ ಪ್ರಮುಖ್ಅ ನಗರ ಎರ್ನಾಕುಲಂ. ಎರ್ನಾಕುಲಂ ಪ್ರಖ್ಯಾತ ನಗರ ಪ್ರದೇಶಗಳಾದ ಕೊಚ್ಚಿ ಹಾಗೂ ಎರ್ನಾಕುಲಂ ಅವಳಿ ನಗರಗಳನ್ನು ಪ್ರತಿನಿಧಿಸುತ್ತದೆ. ಸಾಕಷ್ಟು ಚಟುವಟಿಕೆಗಳಿಂದ ಕೂಡಿರುವ ಈ ನಗರದಲ್ಲಿ ಭವ್ಯ್ವಾದ ಮಾಲ್ ಗಳು, ಹೋಟೆಲುಗಳು ಹಾಗೂ ಮಾರುಕಟ್ಟೆಗಳನ್ನು ಕಾಣಬಹುದು.

ಚಿತ್ರಕೃಪೆ: Adam Jones

ಬೆಂಗಳೂರಿನಿಂದ ವರ್ಕಲಾ:

ಬೆಂಗಳೂರಿನಿಂದ ವರ್ಕಲಾ:

ನಂತರ ಪ್ರಯಾಣ ಮುಂದುವರೆಸುತ್ತ ಚೇರ್ತಲದ ಮೂಲಕ ಸಾಗಿ ಸುಮಾರು 50 ಕಿ.ಮೀ ಗಳಷ್ಟು ಕ್ರಮಿಸಿ ಮರಾರಿಕುಲಂ ಅನ್ನು ತಲುಪಬೇಕು. ಇದು ಪ್ರಖ್ಯಾತ ಪ್ರವಾಸಿ ತಾಣವಾದ ಅಲಪುಳಾ (ಅಲೆಪ್ಪಿ) ಜಿಲ್ಲೆಯ ಕರಾವಳಿ ಹಳ್ಳಿಯಾಗಿದೆ. ಇಲ್ಲಿರುವ ಮರಾರಿ ಕಡಲ ತೀರವು ಆಕರ್ಷಕವಾಗಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: nborun

ಬೆಂಗಳೂರಿನಿಂದ ವರ್ಕಲಾ:

ಬೆಂಗಳೂರಿನಿಂದ ವರ್ಕಲಾ:

ಮರಾರಿಕುಲಂನ ಮರಾರಿ ಕಡಲ ತೀರಕ್ಕೆ ಭೇಟಿ ನೀಡಿ ನಂತರ ಅಲಪುಳಾ-ಅರ್ತಂಕಲ್-ಚೆಲ್ಲನಂ-ಥೊಪ್ಪುಂಪಾಡಿ ರಸ್ತೆಯ ಮೂಲಕ ಸುಮಾರು 15 ಕಿ.ಮೀ ಕ್ರಮಿಸಿ ರಾಜ್ಯದ ಸುಂದರ ಪ್ರವಾಸಿ ಸ್ಥಳಗಳ ಪೈಕಿ ಒಂದಾದ ಅಲಪುಳಾ ಅಥವಾ ಅಲೆಪ್ಪಿಯನ್ನು ತಲುಪಬಹುದು. ಮನಸೆಳೆವ ಹಿನ್ನೀರು ಪ್ರದೇಶಗಳು, ದೋಣಿ ಮನೆಯಲ್ಲಿ ವಿಹಾರ ಇದು ಅಲೆಪ್ಪಿಯ ಅತಿ ಪ್ರಮುಖ ಆಕರ್ಷಣೆಗಳಾಗಿವೆ. ವಿಶೇಷವೆಂದರೆ ಅಲೆಪ್ಪಿಯಲ್ಲಿ ರಸ್ತೆಗಳ ಜಾಲಗಳಿರುವಂತೆ ಹಿನ್ನೀರಿನ ಜಾಲಗಳನ್ನು ಕಾಣಬಹುದು.

ಚಿತ್ರಕೃಪೆ: Sarath Kuchi

ಬೆಂಗಳೂರಿನಿಂದ ವರ್ಕಲಾ:

ಬೆಂಗಳೂರಿನಿಂದ ವರ್ಕಲಾ:

ಪ್ರವಾಸಿಗರನ್ನು ಹಾರ್ದಿಕವಾಗಿ ಸ್ವಾಗತಿಸಲು ನಿಂತಿರುವ ದೋಣಿ ಮನೆಗಳು

ಚಿತ್ರಕೃಪೆ: McKay Savage

ಬೆಂಗಳೂರಿನಿಂದ ವರ್ಕಲಾ:

ಬೆಂಗಳೂರಿನಿಂದ ವರ್ಕಲಾ:

ಅಲೆಪ್ಪಿಯ ಹಿನ್ನೀರಿನಲ್ಲಿ ಸ್ವಲ್ಪ ಸಮಯ ಕಳೆದು ಮತ್ತೆ ಯಥಾವತ್ತಾಗಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 47 ರ ಮೂಲಕ ಸುಮಾರು ಪುರಕ್ಕಾಡ್, ಕರುವಟ್ಟಾ, ಕರುನಾಗಪಳ್ಳಿ, ಚಾವರಾ ಮಾರ್ಗವಾಗಿ ರಾಜ್ಯದ ಮತ್ತೊಂದು ಪ್ರಖ್ಯಾತ ಪ್ರವಾಸಿ ತಾಣವಾದ ಕೊಲ್ಲಂ ಅನ್ನು ತಲುಪಬೇಕು. ಕೊಲ್ಲಂ ಪುರಾತನ ಬಂದರು ಪಟ್ಟಣವಾಗಿದ್ದು ಲಕ್ಕಾಡಿವ್ ಅಥವಾ ಲಕ್ಷದ್ವೀಪ ಸಮುದ್ರದ ತೀರದಲ್ಲಿ ನೆಲೆಸಿರುವ ಪಟ್ಟಣವಾಗಿದೆ. ಲಕ್ಷದ್ವೀಪ ಸಮುದ್ರದ ಉಷ್ಣಾಂಶವು ವರ್ಷಪೂರ್ತಿ ಸ್ಥಿರವಾಗಿದ್ದು ವೈವಿಧ್ಯಮಯ ಜಲ ರಾಶಿಗಳನ್ನು ಇಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Arunvrparavur

ಬೆಂಗಳೂರಿನಿಂದ ವರ್ಕಲಾ:

ಬೆಂಗಳೂರಿನಿಂದ ವರ್ಕಲಾ:

ಕೊಲ್ಲಂ ಕಡಲ ತೀರವು ಬಹು ಪ್ರಖ್ಯಾತವಾದ ಪ್ರವಾಸಿ ಆಕರ್ಷಣೆಯಾಗಿದೆ. ಮಹಾತ್ಮಾ ಗಾಂಧಿ ಬೀಚ್ ಎಂತಲೂ ಕರೆಯಲ್ಪಡುವ ಈ ಕಡಲ ತೀರವು ಕೊಲ್ಲಂನಲ್ಲಿರುವ ಎರಡು ಪ್ರಮುಖ ಕಡಲ ತೀರಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: Arunvrparavur

ಬೆಂಗಳೂರಿನಿಂದ ವರ್ಕಲಾ:

ಬೆಂಗಳೂರಿನಿಂದ ವರ್ಕಲಾ:

ಅಷ್ಟಮುಡಿ ಕೆರೆಯು ಕೊಲ್ಲಂನಲ್ಲಿರು ಪ್ರವಾಸಿ ಆಕರ್ಷಣೆ. ಈ ಕೆರೆಯು ಹೆಚ್ಚು ಭೇಟಿ ನೀಡಲ್ಪಡುವ ಹಿನ್ನೀರಿನ ತಾಣವಾಗಿದೆ. ಮರಕ್ಕಿರುವ ರೆಂಬೆಗಳ ತರಹ ಈ ಕೆರೆಯೂ ಕೂಡ ಎಂಟು ಶಾಖೆಗಳಲ್ಲಿ ಹರಡಿರುವುದರಿಂದ ಇದಕ್ಕೆ ಅಷ್ಟಮುಡಿ ಎಂದು ಕರೆಯಲಾಗಿದೆ.

ಚಿತ್ರಕೃಪೆ: Fotokannan

ಬೆಂಗಳೂರಿನಿಂದ ವರ್ಕಲಾ:

ಬೆಂಗಳೂರಿನಿಂದ ವರ್ಕಲಾ:

ಅಡ್ವೆಂಚರ್ ಪಾರ್ಕ್, ಕೊಲ್ಲಂನಲ್ಲಿ ಯಾವಾಗಲೂ ಜನರಿಂದ ತುಂಬಿರುವ ಅದ್ಭುತವಾದ ಪ್ರದೇಶವಾಗಿದೆ. ಅಷ್ಟಮುಡಿ ಹಿನ್ನೀರಿನ ಕೆರೆಯ ದಡದಲ್ಲಿ ಈ ಪಾರ್ಕಿನ ನಿರ್ಮಾಣ ಮಾಡಲಾಗಿದೆ. ನಗರ ಪ್ರದೇಶದಿಂದ ಸುಮಾರು ಮೂರು ಕಿ.ಮೀ ಗಳಷ್ಟು ದೂರವಿರುವ ಈ ಪಾರ್ಕ್ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ನೆಚ್ಚಿನ ಸ್ಥಳವಾಗಿದೆ.

ಚಿತ್ರಕೃಪೆ: Arunvrparavur

ಬೆಂಗಳೂರಿನಿಂದ ವರ್ಕಲಾ:

ಬೆಂಗಳೂರಿನಿಂದ ವರ್ಕಲಾ:

ಸಮಯಾವಕಾಶವಿದ್ದರೆ ಕೊಲ್ಲಂನಲಿರುವ ತಂಗಚೇರಿ ಕಡಲ ತೀರ, ತಿರುಮುಲ್ಲವರಂ ಕಡಲ ತೀರಗಳಿಗೂ ಸಹ ಭೇಟಿ ನೀಡಬಹುದು. ಇನ್ನು ಕೊಲ್ಲಂ ಭೇಟಿಯ ನಂತರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 47 ರ ಮೂಲಕ ಸೇಲಂ-ಕೊಚ್ಚಿ-ಕನ್ಯಾಕುಮಾರಿ ರಸ್ತೆಯ ಮಾರ್ಗವಾಗಿ 35 ಕಿ.ಮೀ ಕ್ರಮಿಸಿ ಲೇಖನದ ಕೊನೆಯ ತಾಣವಾದ ವರ್ಕಲಾಗೆ ತಲುಪಬೇಕು. ವರ್ಕಲಾ ಸುಂದರ ಕಡಲ ತೀರಕ್ಕೆ ಪ್ರಸಿದ್ಧವಾಗಿರುವುದಲ್ಲದೆ ಧಾರ್ಮಿಕವಾಗಿಯೂ ಮಹತ್ವ ಪಡೆದಿದೆ.

ಚಿತ್ರಕೃಪೆ: Ikroos

ಬೆಂಗಳೂರಿನಿಂದ ವರ್ಕಲಾ:

ಬೆಂಗಳೂರಿನಿಂದ ವರ್ಕಲಾ:

ಇಲ್ಲಿರುವ ಜನಾರ್ಧನ ಸ್ವಾಮಿ ದೇವಾಲಯ, ವರ್ಕಲಾ ಕಡಲ ತೀರ, ಕಾಪಿಲ್ ಕೆರೆ, ವರ್ಕಲಾ ಟನಲ್, ಅಂಜೆಂಗೊ ಕೋಟೆ ಮುಂತಾದ ಪ್ರಸಿದ್ಧ ಆಕರ್ಷಕ ಸ್ಥಳಗಳನ್ನು ನೋಡಬಹುದಾಗಿದೆ. ವರ್ಕಲಾದಲ್ಲಿರುವ ಜನಾರ್ಧನ ಸ್ವಾಮಿ ದೇವಸ್ಥಾನವು ಸುಮಾರು 2000 ವರ್ಷಗಳಷ್ಟು ಪುರಾತನವಾಗಿದ್ದು, ವೈಷ್ಣ ಪಂಥದವರ ಪ್ರಮುಖ ದೇವಾಲಯವಾಗಿದೆ. ಶ್ರೀಮನ್ನಾರಾಯಣನಿಗೆ ಸಮರ್ಪಿತವಾಗಿರುವ ಈ ದೇವಾಲಯಕ್ಕೆ ಸಾಕಷ್ಟು ಜನ ಭಕ್ತಾದಿಗಳು ಭೇಟಿ ನೀಡುತ್ತಾರೆ.

ಚಿತ್ರಕೃಪೆ: Dev

ಬೆಂಗಳೂರಿನಿಂದ ವರ್ಕಲಾ:

ಬೆಂಗಳೂರಿನಿಂದ ವರ್ಕಲಾ:

ವರ್ಕಲಾ ಟನಲ್, ಒಂದು ಜನಪ್ರೀಯವಾದ ಪ್ರವಾಸಿ ಸ್ಥಳವಾಗಿದೆ. ಈ ಸುರಂಗ ಮಾರ್ಗವು 924 ಅಡಿಗಳಷ್ಟು ಉದ್ದವಿದ್ದು 1867 ರಲ್ಲಿ ಅಂದಿನ ತ್ರಾವಣಕೋರ್ ಸಂಸ್ಥಾನದ ದೀವಾನರಾಗಿದ್ದ ಟಿ.ಮಾಧವರಾವ್ ಎಂಬುವರಿಂದ ನಿರ್ಮಿಸಲ್ಪಟ್ಟಿದೆ. ವಿಶೇಷವೆಂದರೆ ನೀರಿನಲ್ಲೆ ದೋಣಿಯ ಮೂಲಕ ಈ ಸುರಂಗ ಮಾರ್ಗದಲ್ಲಿ ಪಯಣಿಸಬಹುದಾಗಿದೆ.

ಬೆಂಗಳೂರಿನಿಂದ ವರ್ಕಲಾ:

ಬೆಂಗಳೂರಿನಿಂದ ವರ್ಕಲಾ:

ವರ್ಕಲಾ ಕಡಲ ತೀರವು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಕೇವಲ ಭಾರತವಲ್ಲದೆ ವಿದೇಶಗಳಿಂದಲೂ ಸಹ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಈ ಸುಂದರ ಕಡಲ ತೀರಕ್ಕೆ ಭೇಟಿ ನೀಡುತ್ತಿರುತ್ತಾರೆ. ಇಲ್ಲಿರುವ ದೀಪ ಗೋಪುರವೂ ಸಹ ಪ್ರೇಕ್ಷಣೀಯ ಸ್ಥಳವಾಗಿದೆ. [ವರ್ಕಲಾದ ಹೆಚ್ಚಿನ ಪ್ರವಾಸಿ ಆಕರ್ಷಣೆಗಳು]

ಚಿತ್ರಕೃಪೆ: Prashant Ram

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X