Search
  • Follow NativePlanet
Share
» »ಕಾರಿನಲ್ಲಿ ಕೋಲಾರ ತಿರುಪತಿ ಪುಲಿಕಟ್ ಪ್ರವಾಸ

ಕಾರಿನಲ್ಲಿ ಕೋಲಾರ ತಿರುಪತಿ ಪುಲಿಕಟ್ ಪ್ರವಾಸ

By Vijay

ನಮ್ಮ ಕೆಲ ಹಿಂದಿನ ಲೇಖನಗಳಂತೆ "ಬೆಂಗಳೂರಿನಿಂದ ಕಾರಿನ ಮೂಲಕ" ಸರಣಿಯನ್ನು ಮುಂದುವರೆಸುತ್ತ ಇಂದಿನ ಲೇಖನದಲ್ಲಿ ಪುಲಿಕಟ್ ಕೆರೆಯವರೆಗೆ ಪ್ರಯಾಣಿಸೋಣ. ಪುಲಿಕಟ್ ಕೆರೆ ಒಂದು ಲಗೂನಾಗಿದ್ದು ಆಕರ್ಷಕ ಪ್ರವಾಸಿ ತಾಣವಾಗಿಯೂ ಸಹ ಜನರನ್ನು ಸೆಳೆಯುತ್ತದೆ. ಮೂಲತಃ ಲವಣಯುಕ್ತ ನೀರಿನಿಂದ ಕೂಡಿದ ಕೆರೆ ಅದರಲ್ಲೂ ವಿಶೇಷವಾಗಿ ಸಮುದ್ರದಿಂದ ತುಸು ಬೇರ್ಪಟ್ಟು ರೂಪಿತಗೊಂಡಿರುವ ನೀರಿನ ಮೂಲಕ್ಕೆ ಲಗೂನುಗಳೆನ್ನುತ್ತಾರೆ. ಪುಲಿಕಟ್ ಸಹ ದೇಶದ ಎರಡನೇಯ ದೊಡ್ಡ ಲಗೂನು ಆಗಿದೆ.

ವಿಶೇಷ ಲೇಖನ : ಭಾರತದ ಎರಡು ದೊಡ್ಡ ಲಗೂನುಗಳು

ಇನ್ನು ಈ ಪ್ರಯಾಣವಂತೂ ಸಾಕಷ್ಟು ಉತ್ತಮ ಹಾಗೂ ಪ್ರಸಿದ್ಧ ಸ್ಥಳಗಳ ಮೂಲಕ ಹಾದು ಹೋಗುವುದರಿಂದ ಕುಟುಂಬ ಪ್ರವಾಸಕ್ಕೆ ಯೋಗ್ಯವಾದ ಪ್ರವಾಸವೆಂದೇ ಹೇಳಬಹುದು. ಈ ಪ್ರವಾಸದಲ್ಲಿ ಸಾಹಸದಿಂದ ಹಿಡಿದು ಧಾರ್ಮಿಕ ಹಾಗೂ ಸಂತಸಮಯವಾಗಿ ಸಮಯ ಕಳೆಯಲು ಎಲ್ಲ ರೀತಿಯ ಸ್ಥಳಗಳು ದೊರಕುತ್ತವೆ. ಅಲ್ಲದೆ ಈ ಪ್ರವಾಸದ ಒಟ್ಟಾರೆ ಉದ್ದವು (ಕೆಲ ಸ್ಥಳಗಳ ಬಳಿಯಿರುವ ಆಕರ್ಷಣೆಗಳ ದೂರವನ್ನು ಹೊರತುಪಡಿಸಿ) ಸುಮಾರು 350 ಕಿ.ಮೀ ಗಳಷ್ಟು ಮಾತ್ರವಿರುವುದರಿಂದ ಹೆಚ್ಚಿನ ಸಮಯವನ್ನು ವ್ಯಯಿಸುವ ಆಗತ್ಯವಿಲ್ಲ.

ವಿಶೇಷ ಲೇಖನ : ಬೆಂಗಳೂರಿನಿಂದ ಕನ್ಯಾಕುಮಾರಿಗೆ ಹೀಗೆ ಪ್ರಯಾಣಿಸಿ

ಹಾಗಾದರೆ ಬನ್ನಿ ನಮ್ಮ ಪ್ರಯಾಣ ಆರಂಭಿಸೋಣ.

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ಬೆಂಗಳೂರಿನ ಯಾವುದೆ ಭಾಗಳಿಂದಾಗಲಿ ಈ ಪ್ರಯಾಣ ಮಾಡಲು ಮೊದಲಿಗೆ ಕೆ ಆರ್ ಪುರಂ ನೆಡೆ ತೆರಳಿ ಅಲ್ಲಿಂದ ಹೊಸಕೋಟೆಯೆಡೆ ಪ್ರಯಾಣ ಬೆಳೆಸಬೇಕು.

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ಬೆಂಗಳೂರಿನಿಂದ ಬೆಂಗಳೂರು - ತಿರುಪತಿ ಹೆದ್ದಾರಿಯನ್ನು ಹಿಡಿದು ಮೊದಲಿಗೆ ಹೊಸಕೋಟೆಯೆಡೆ ತೆರಳಬೇಕು. ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ನಾಲ್ಕರ ಮೂಲಕ ಹೊಸಕೋಟೆಯನ್ನು ಕೇವಲ 28 ಕಿ.ಮೀ ಗಳಷ್ಟು ಕ್ರಮಿಸಿ ತಲುಪಬಹುದು. ಹೊಸಕೋಟೆಯಲ್ಲಿ ಹೊಸಕೋಟೆ ಕೆರೆ ಹಾಗೂ ಖಾಸಗಿ ರಿಸಾರ್ಟುಗಳಿದ್ದು ಬೇಕಿದ್ದರೆ ಪ್ಯಾರಾಗ್ಲೈಡಿಂಗ್ ಚಟುವಟಿಕೆಯನ್ನೂ ಸಹ ಆನಂದಿಸಬಹುದು. ಪ್ಯಾರಾಗ್ಲೈಡಿಂಗ್ ಚಟುವಟಿಕೆಯ ಕುರಿತು ಖಾಸಗಿ ರಿಸಾರ್ಟುಗಳಲ್ಲಿ ವಿಚಾರಿಸಬಹುದು.

ಚಿತ್ರಕೃಪೆ: Sankara Subramanian

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ನಂತರ ಹೊಸಕೋಟೆಯಿಂದ ನಮ್ಮ ಪ್ರಯಾಣ ಮುಂದುವರೆಸುತ್ತ ಬೆಂಗಳೂರು - ತಿರುಪತಿ ಹೆದ್ದಾರಿ ಮಾರ್ಗವಾಗಿ ಹಾಲು - ರೇಷ್ಮೆ - ಬಂಗಾರದ ಭೂಮಿಯೆಂದೆ ಖ್ಯಾತಿ ಪಡೆದ ಕೋಲಾರದೆಡೆ ಸಾಗಬೇಕು. ಹೊಸಕೋಟೆಯಿಂದ ಕೋಲಾರವು ಕೇವಲ 44 ಕಿ.ಮೀ ಗಳಷ್ಟು ದೂರದಲ್ಲಿದೆ. ಕೋಲಾರದಲ್ಲಿ ಕೆಲ ಧಾರ್ಮಿಕ ಪ್ರವಾಸಿ ಆಕರ್ಷಣೆಗಳಿಗೆ ಭೇಟಿ ನೀಡಬಹುದು. ಚಿತ್ರದಲ್ಲಿರುವುದು ಕೋಲಾರದಲ್ಲಿರುವ ಅಂತರಗಂಗೆ.

ಚಿತ್ರಕೃಪೆ: Ganesha1

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ಕೋಲಾರದಲ್ಲಿರುವ ಶಿವನಿಗೆ ಮುಡಿಪಾದ ಸೋಮೇಶ್ವರ ದೇವಸ್ಥಾನವು ಪ್ರಖ್ಯಾತಿ ಪಡೆದಿದೆ. ವಿಜಯನಗರ ಸಾಮ್ರಾಜ್ಯದಾಡಳಿತಾವಧಿಯಲ್ಲಿ ನಿರ್ಮಿತವಾದ ಈ ದೇವಾಲಯವು ದ್ರಾವಿಡ ಶೈಲಿಯ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಇದೊಂದು ರಾಷ್ಟ್ರೀಯ ಮಹತ್ವ ಪಡೆದ ಸ್ಮಾರಕಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: Shailesh.patil

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ಕೋಲಾರಮ್ಮ ದೇವಸ್ಥಾನವೂ ಸಹ ಸಾಕಷ್ಟು ಪ್ರಖ್ಯಾತಿಗಳಿಸಿದ ಕೋಲಾರ ಪಟ್ಟಣದ ಮುಖ್ಯ ದೇವಾಲಯವಾಗಿದೆ. ಚೋಳರಿಂದ ನಿರ್ಮಿತವಾದ ಸಾವಿರ ವರ್ಷಗಳಷ್ಟು ಪುರಾತನವಾದ ದೇವಾಲಯ ಇದಾಗಿದೆ. ಶಕ್ತಿ ಸ್ವರೂಪಿಣಿ ಪಾರ್ವತಿ ದೇವಿಯನ್ನು ಇಲ್ಲಿ ಕೋಲಾರಮ್ಮನ ರೂಪದಲ್ಲಿ ಪೂಜಿಸಲಾಗುತ್ತದೆ.

ಚಿತ್ರಕೃಪೆ: Hariharan Arunachalam

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ಕೋಲಾರದಲ್ಲಿರುವ ಅಂತರಗಂಗೆಯೂ ಕೂಡ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ದಕ್ಷಿಣ ಕಾಶಿ ಕ್ಷೇತ್ರ ಎಂದು ಕರೆಯಲ್ಪಡುವ ಅಂತರಗಂಗೆಯು ಒಂದು ದೇವಸ್ಥಾನ ಕೊಳವಾಗಿದ್ದು ನಿರಂತರವಾಗಿ ಹರಿಯುವ ನೀರಿನ ಮೂಲವನ್ನು ಹೊಂದಿದೆ. ಬಸವ ಅಥವಾ ನಂದಿ ವಿಗ್ರಹದ ಬಾಯಿಯಿಂದ ನೀರು ಯಾವಾಗಲೂ ಬೀಳುತ್ತಿರುವುದನ್ನು ಇಲ್ಲಿ ಕಾಣಬಹುದು. ಕೋಲಾರ ನಗರದಿಂದ ಅಂತರಗಂಗೆಯು ಕೇವಲ 3.5 ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: Vedamurthy J

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ಕೋಲಾರದಲ್ಲಿ ಧಾರ್ಮಿಕ ಆಕರ್ಷಣೆಗಳನ್ನು ದರ್ಶಿಸಿದ ಬಳಿಕ ಬೆಂಗಳೂರು - ತಿರುಪತಿ ಹೆದ್ದಾರಿಯಲ್ಲಿ (ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4) ಪ್ರಯಾಣ ಮುಂದುವರೆಸಿ ಸುಮಾರು 33 ಕಿ.ಮೀ ಗಳಷ್ಟು ಕ್ರಮಿಸಿ ಮುಳುಬಾಗಲನ್ನು ತಲುಪಬೇಕು. ಮುಳುಬಾಗಲು ತನ್ನಲ್ಲಿರುವ ವಿವಿಧ ಎತ್ತರಗಳುಳ್ಳ ಬೆಟ್ಟಗಳಲ್ಲಿ ಟ್ರೆಕ್ಕಿಂಗ್ ಹೊರಡುವುದಕ್ಕ್ರ್ ಪ್ರಸಿದ್ಧವಾಗಿದೆ. ಅಲ್ಲದೆ ಇಲ್ಲಿಂದ ಕೇವಲ ಎಂಟು ಕಿ.ಮೀ ಗಳಷ್ಟು ದೂರದಲ್ಲಿ ಕುರುಡುಮಲೈ ಕ್ಷೇತ್ರಕ್ಕೆ ಭೇಟಿ ನೀಡಬಹುದು. ಇದು ದೇವತೆಗಳು ಸಂಧಿಸುವ ಪವಿತ್ರ ಸ್ಥಳ ಎನ್ನಲಾಗಿದೆ. ಇಲ್ಲಿರುವ ಗಣೇಶ ಹಾಗೂ ಸೋಮೇಶ್ವರ ದೇವಸ್ಥಾನಗಳು ಪ್ರಸಿದ್ಧಿ ಪಡೆದಿದೆ. ಅದರಲ್ಲೂ ವಿಶೇಷವಾಗಿ ಗಣೇಶನ ದೇವಸ್ಥಾನವು ಶಕ್ತಿಶಾಲಿಯಾಗಿದ್ದು ಇಲ್ಲಿ ದರುಶನ ಪಡೆದ ನಂತರವೆ ಹೊಸ ಕೆಲಸಗಳನ್ನು ಪ್ರಾರಂಭಿಸಲಾಗುತ್ತದೆ.

ಚಿತ್ರಕೃಪೆ: Ganesha1

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ಕುರುಡುಮಲೈನ ಗಣಪತಿ ಹಾಗೂ ಸೋಮೇಶ್ವರ ದೇವಸ್ಥಾನಗಳನ್ನು ದರ್ಶಿಸಿದ ನಂತರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ನಾಲ್ಕರಲ್ಲಿ ತಿರುಪತಿಯೆಡೆ ಪ್ರಯಾಣ ಮುಂದುವರೆಸುತ್ತ ಪಲಮನೇರ ಮಾರ್ಗವಾಗಿ 82 ಕಿ.ಮೀ ಪ್ರಯಾಣಿಸಿ ಆಂಧ್ರಪ್ರದೇಶದ ಚಿತ್ತೂರನ್ನು ತಲುಪಬೇಕು. ಚಿತ್ತೂರಿನಲ್ಲಿ ವರಸಿದ್ಧಿ ವಿನಾಯಕ ದೇವಸ್ಥಾನ ಹಾಗೂ ಪಟ್ಟಣದಿಂದ ಎಂಟು ಕಿ.ಮೀ ದೂರದಲ್ಲಿರುವ ಕಲವಗುಂಟ ಪ್ರದೇಶಕ್ಕೆ ಭೇಟಿ ನೀಡಬಹುದು. ಇದು ಕೆಲ ಪುರಾತನ ದೇವಾಲಯಗಳಿಗೆ ಪ್ರಸಿದ್ಧಿ ಪಡೆದಿದೆ.

ಚಿತ್ರಕೃಪೆ: Gopal Venkatesan

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ಚಿತ್ತೂರಿನಿಂದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 18 ಹಾಗೂ 18A ಹಿಡಿದು ಪಾಕಲ ಮಾರ್ಗವಾಗಿ ಸುಮಾರು 68 ಕಿ.ಮೀ ಕ್ರಮಿಸಿ ವಿಶ್ವ ವಿಖ್ಯಾತ ದೇವಾಲಯ ತಾಣವಾದ ತಿರುಪತಿಯನ್ನು ತಲುಪಬೇಕು. ತಿರುಪತಿಯು ಶ್ರೀ ವೆಂಕಟೇಶ್ವರನ ದೇವಸ್ಥಾನಕ್ಕೆ ಅಂತಾರಾಷ್ಟ್ರೀಯ ವಲಯದಲ್ಲಿ ಪ್ರಖ್ಯಾತಿ ಗಳಿಸಿದೆ. ಕೇವಲ ವೆಂಕಟರಮಣನ ಮುಖ್ಯ ದೇವಾಲಯವಲ್ಲದೆ ಇತರೆ ಅನೇಕ ಮಹತ್ವ ಪಡೆದ ದೇವರ ಸನ್ನಿಧಿಗಳನ್ನು ಇಲ್ಲಿ ಕಾಣಬಹುದು.
ತಿರುಪತಿ ತಿರುಮಲ ದರ್ಶನ ತಿರುಪತಿಯ ಇತರೆ ಪ್ರಮುಖ ದೇವಾಲಯಗಳು

ಚಿತ್ರಕೃಪೆ: Ashok Prabhakaran

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ತಿರುಪತಿ ತಿರುಮಲದ ಬೆಟ್ಟಗಳಲ್ಲಿ ಗರುಡ ಬಂಡೆಯನ್ನು ಕಾಣಬಹುದು. ನಿರ್ದಿಷ್ಟ ಒಂದು ಸ್ಥಳದಿಂದ ನೋಡಿದಾಗ ಈ ಬೆಟ್ಟದ ಬಂಡೆಯು ಗರುಡನ ಹಾಗೆ ಗೋಚರಿಸುವುದರಿಂದ ಇದಕ್ಕೆ ಗರುಡ ಬಂಡೆ ಎಂಬ ಹೆಸರು ಬಂದಿದೆ.

ಚಿತ್ರಕೃಪೆ: Jayashree B

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ತಿರುಪತಿಯಿಂದ ತಿರುಮಲ ಮಾರ್ಗವಾಗಿ ಆಕಾಶಗಂಗಾ ತಾಣವನ್ನು 26 ಕಿ.ಮೀ ಕ್ರಮಿಸಿ ತಲುಪಬಹುದು. ಆಕಾಶ ಗಂಗೆ ಪವಿತ್ರವಾದ ಸ್ಥಳವಾಗಿದ್ದು ವಿಶೇಷವಾದ ಸೇವೆಗೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Chandrashekhar Basumatary

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ಶಿಲಾತೋರಣ, ತಿರುಮಲದಲ್ಲಿ ಕಂಡುಬರುವ ಮತ್ತೊಂದು ಪ್ರಾಕೃತಿಕ ವಿಸ್ಮಯಕಾರಿ ರಚನೆ. ಇಲ್ಲಿ ಶಿಲೆಗಳೆ ತೋರಣದ ಹಾಗೆ ಪ್ರಾಕೃತಿಕವಾಗಿ ರೂಪಗೊಂಡಿದೆ. ಇದೂ ಕೂಡ ಒಂದು ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: Mydhili Bayyapunedi

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ತಿರುಮಲದ ಆಕಶಗಂಗಾ ಹಾಗೂ ದೇವಾಲಯದ ದರುಶನದ ನಂತರ ತಿರುಪತಿಗೆ ಮರಳಿ ಅಲ್ಲಿಂದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 205 ಅನ್ನು ಹಿಡಿದು ಕಾಲೂರು, ಚಿಟ್ಟೆಚೆರಾ ಮಾರ್ಗವಾಗಿ ಸುಮಾರು 58 ಕಿ.ಮೀ ಕ್ರಮಿಸಿ ತಲಕೋನ ಜಲಪಾತ ತಾಣಕ್ಕೆ ಭೇಟಿ ನೀಡಬಹುದು. ಈ ಸುಂದರ ಜಲಪಾತವು ಶ್ರೀ ವೆಂಕಟೇಶ್ವರ ರಾಷ್ಟ್ರೀಯ ಉದ್ಯಾನದ ಭಾಗವಾಗಿದ್ದು ದಟ್ಟನೆಯ ಹಸಿರುಗಾಡಿನಲ್ಲಿ ನಳ ನಳಿಸುತ್ತ ಧುಮುಕುತ್ತದೆ.

ಚಿತ್ರಕೃಪೆ: Vinoth Chandar

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ತಲಕೋನ ಜಲಪಾತದ ಅದ್ಭುತ ನೋಟವನ್ನು ಸವಿದ ನಂತರ ಮತ್ತೆ ತಿರುಪತಿಗೆ ಮರಳಿ ಅಲ್ಲಿಂದ ರಾಜ್ಯ ಹೆದ್ದಾರಿ ಸಂಖ್ಯೆ 61 ರ ಮೂಲಕ ಪ್ರಯಾಣ ಮುಂದುವರೆಸುತ್ತ 37 ಕಿ.ಮೀ ಕ್ರಮಿಸಿ ಮತ್ತೊಂದು ಪ್ರಖ್ಯಾತ ಧಾರ್ಮಿಕ ಕ್ಷೇತ್ರವಾದ ಶ್ರೀಕಾಳಹಸ್ತಿಯನ್ನು ತಲುಪಬೇಕು. ಇದು ಸ್ವರ್ಣಮುಖಿ ನದಿ ತಟದ ಮೇಲೆ ಸ್ಥಿತವಿದೆ.

ಚಿತ್ರಕೃಪೆ: Kalyan Kanuri

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ದಕ್ಷಿಣ ಭಾರತದಲ್ಲಿರುವ ಶಿವನ ಅತಿ ಪ್ರಮುಖ ದೇವಸ್ಥಾನಗಳ ಪೈಕಿ ಶ್ರೀಕಾಳಹಸ್ತಿಯ ಶಿವನ ದೇವಸ್ಥಾನವೂ ಸಹ ಒಂದಾಗಿದೆ. ಅಲ್ಲದೆ ಈ ಒಂದು ಸ್ಥಳದಲ್ಲೆ ಪರಮ ಶಿವ ಭಕ್ತನಾಗಿದ್ದ ಬೇಡರ ಕಣ್ಣಪ್ಪನು ತನ್ನ ಎರಡೂ ಕಣ್ಣುಗಳನ್ನು ಶಿವನಿಗೋಸ್ಕರ ತ್ಯಾಗ ಮಾಡಲು ಸಿದ್ಧಿನಿದ್ದವೆನ್ನಲಾಗಿದೆ. ಅಲ್ಲದೆ ಪಂಚಭೂತಗಳ ಪೈಕಿ ಇದು ವಾಯು ಲಿಂಗವನ್ನು ಪ್ರತಿನಿಧಿಸುತ್ತದೆ.

ಚಿತ್ರಕೃಪೆ: రవిచంద్ర

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ಮತ್ತೊಂದು ವಿಷಯವೆಂದರೆ ಶ್ರೀಕಾಳಹಸ್ತಿಯನ್ನು "ರಾಹು ಕೇತು ಕ್ಷೇತ್ರ" ಎಂತಲೂ ಸಹ ಕರೆಯಲಾಗುತ್ತದೆ. ರಾಹು, ಕೇತು ದೋಷವಿದ್ದವರು, ಸರ್ಪ ದೋಷವಿದ್ದವರು ಇಲ್ಲವೆ ಕಂಕಣ ಭಾಗ್ಯ, ಸಂತಾನ ಭಾಗ್ಯ, ಸಕಲ ಕಷ್ಟ ನಿವಾರಣೆ ಬಯಸುವವರು ಇಲ್ಲಿನ ದೇವಸ್ಥಾನದಲ್ಲಿ ರಾಹು ಕೇತು ಸರ್ಪ ದೋಷ ನಿವಾರಣ ಪೂಜೆಯನ್ನು ಆಚರಿಸಿದರೆ ಎಲ್ಲವೂ ಸರಿಯಾಗುತ್ತದೆ ಎಂದು ಹೇಳಲಾಗುತ್ತದೆ.

ಚಿತ್ರಕೃಪೆ: రవిచంద్ర

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ಶ್ರೀಕಾಳಹಸ್ತಿಯಲ್ಲಿ ದೇಗುಲದ ದರುಶನ ಪಡೆದ ನಂತರ ಪ್ರಯಾಣ ಮುಂದುವರೆಸುತ್ತ ರಾಷ್ಟ್ರೀಯ ಹೆದ್ದಾರಿ ಐದರ ಮೂಲಕ ಬಿ ಎನ್ ಕಂದ್ರಿಗ ಮಾರ್ಗವಾಗಿ ಸುಮಾರು 52 ಕಿ.ಮೀ ಗಳಷ್ಟು ಕ್ರಮಿಸಿ ಈ ಪ್ರವಾಸದ ಕೊನೆಯ ಗಮ್ಯ ತಾಣವಾದ ಪುಲಿಕಟ್ ಕೆರೆ ಪಕ್ಷಿ ಧಾಮಕ್ಕೆ ತಲುಪಬೇಕು.

ಚಿತ್ರಕೃಪೆ: Srisez

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ಪುಲಿಕಟ್ ಕೆರೆಯು ಆಂಧ್ರ ಹಾಗೂ ತಮಿಳುನಾಡು ರಾಜ್ಯಗಳೆರಡರಲ್ಲೂ ಚಾಚಿದ್ದು ಆಯಾ ರಾಜ್ಯಗಳ ಅರಣ್ಯ ಇಲಾಖೆಗಳು ತಮಗೆ ಸಂಬಂಧಿಸಿದ ಪ್ರದೇಶಗಳನ್ನು ನಿಯಂತ್ರಿಸುತ್ತವೆ. ವೈವಿಧ್ಯಮಯ ಹಕ್ಕಿಗಳು ಹಾಗೂ ಜೀವ ಸಂಕುಲಕ್ಕೆ ಈ ಲವಣಯುಕ್ತ ಕೆರೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Srikaanth Sekar

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ಬೆಂಗಳೂರಿನಿಂದ ಪುಲಿಕಟ್ ವರೆಗೆ:

ಮುಖ್ಯವಾಗಿ ಈ ಕೆರೆ ಪ್ರದೇಶವು ತನ್ನಲ್ಲಿರುವ ವಿವಿಧ ಬಗೆಯ ಪಕ್ಷಿಗಳೆಗೆ ಜನಪ್ರೀಯ ತಾಣವಾಗಿದೆ. ದೋಣಿ ವಿಹಾರ ಮಾಡುತ್ತ ಬಣ್ಣ ಬಣ್ಣದ ಪಕ್ಷಿಗಳು ಹಾಗೂ ಫ್ಲೆಮಿಂಗೊ ಹಕ್ಕಿಗಳ ಸುಂದರ ದೃಶ್ಯಾವಳಿಗಳನ್ನು ನಿಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿಯಬಹುದು.

ಚಿತ್ರಕೃಪೆ: Srikaanth Sekar

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X