Search
  • Follow NativePlanet
Share
» »ಬೆಂಗಳೂರಿನಿಂದ ಕೊಡಚಾದ್ರಿ ಈ ರೀತಿ ಪಯಣಿಸಿ

ಬೆಂಗಳೂರಿನಿಂದ ಕೊಡಚಾದ್ರಿ ಈ ರೀತಿ ಪಯಣಿಸಿ

By Vijay

ಬೆಂಗಳೂರಿಗರಲ್ಲಿ ಬಹುತೇಕರು ಪ್ರವಾಸಿ ಪ್ರೀಯರು. ಸಮಯ ಸಿಕ್ಕ ತಕ್ಷಣವೆ ಸಾಕು, ಎಲ್ಲಿಗಾದರೂ ಹೊರಡಲು ಸಿದ್ಧ. ಅದಕ್ಕೆ ಪೂರಕವೆಂಬಂತೆ ಬೆಂಗಳೂರು ಸಹ ಕರ್ನಾಟಕ ಮಾತ್ರವಲ್ಲದೆ ಪಕ್ಕದ ತಮಿಳುನಾಡು, ಆಂಧ್ರ ಹಾಗೂ ಕೇರಳ ರಾಜ್ಯಗಳ ಮುಖ್ಯ ಪ್ರವಾಸಿ ಸ್ಥಳಗಳಿಗೆ ಸುಲಭವಾದ ಸಂಪರ್ಕವನ್ನು ಸಾಧಿಸುತ್ತದೆ. ರೈಲಿನಲ್ಲಾಗಲಿ, ಬಸ್ಸಿನಲ್ಲಾಗಲಿ ಅಥವಾ ಸ್ವಂತ ಇಲ್ಲವೆ ಬಾಡಿಗೆ ಕಾರುಗಳಿಂದಾಗಲಿ ಬೆಂಗಳೂರಿನಿಂದ ಸುಲಭವಾಗಿ ಹೊರಡಬಹುದು.

ವಾರಾಂತ್ಯ ಕೊಡುಗೆ : ಹೋಟೆಲ್ ಬುಕ್ಕಿಂಗ್ ಮೇಲೆ 50% ಕಡಿತ ಪಡೆಯಿರಿ, ತ್ವರೆ ಮಾಡಿ!

ಕೊಡಚಾದ್ರಿಯು ಕರ್ನಾಟಕದಲ್ಲಿರುವ ಪ್ರವಾಸಿ ಖ್ಯಾತಿಯ ಸ್ಥಳಗಳಲ್ಲಿ ಒಂದಾಗಿದೆ. ಸ್ವತಃ ಕೊಡಚಾದ್ರಿಯೆ ಆಕರ್ಷಕ ತಾಣವಾಗಿದ್ದರೂ ಕೂಡ ಬೆಂಗಳೂರಿನಿಂದ ಅಲ್ಲಿಯವರೆಗೆ ಹೋಗುವುದೂ ಒಂದು ಅದ್ಭುತವಾದ ಪ್ರವಾಸಿ ಪ್ರಯಾಣವಾಗಿದೆ. ಪ್ರಸ್ತುತ ಲೇಖನದ ಮೂಲಕ ಕೊಡಚಾದ್ರಿಯನ್ನು ಬೆಂಗಳೂರಿನಿಂದ ಪ್ರಯಾಣ ಮಾಡುತ್ತ ಮಾರ್ಗದ ಮಧ್ಯೆ ಯಾವೆಲ್ಲ ಅದ್ಭುತ ಸ್ಥಳಗಳಿಗೆ ಭೇಟಿ ನೀಡುತ್ತ ತಲುಪಬಹುದೆಂಬುದರ ಕುರಿತು ತಿಳಿಯಬಹುದು.

ಬೆಂಗಳೂರಿನಿಂದ ಕೊಡಚಾದ್ರಿ ಈ ರೀತಿ ಪಯಣಿಸಿ

ಸಾಮಾನ್ಯವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರವಾಸ ಮಾಡುವಾಗ ಆ ಮಾರ್ಗದ ಬಳಿಯಲ್ಲೆ ಸ್ವಲ್ಪ ದೂರದಲ್ಲಿ ಇತರೆ ಪ್ರವಾಸಿ ಆಕರ್ಷಣೆಗಳಿರುತ್ತವೆ. ಈ ವಿಷಯ ತಿಳಿಯದೆ ನಾವು ಪ್ರವಾಸ ಮಾಡಿ ನಂತರ ಆ ಮಾರ್ಗದ ಹತ್ತಿರವಿದ್ದ ಆಕರ್ಷಣೆಗಳ ಕುರಿತು ಗೊತ್ತಾದಾಗ ಖಂಡಿತ ಬೇಸರವಾಗದೆ ಇರಲಾರದು. ಆದ್ದರಿಂದ ಒಂದೊಮ್ಮೆ ಪ್ರವಾಸ ಮಾಡಲು ಹೊರಟರೆ ಒಂದು ನಿರ್ದಿಷ್ಟ ಮಾರ್ಗದಲ್ಲಿ ಗರಿಷ್ಠ ಸ್ಥಳಗಳಿಗೆ ಭೇಟಿ ನೀಡುವುದು ಉತ್ತಮ.

ಕೊಡಚಾದ್ರಿಯನ್ನು ಬೆಂಗಳೂರಿನಿಂದ ತುಮಕೂರು, ತಿಪಟೂರು, ಅರಸೀಕೆರೆ, ತರಿಕೆರೆ, ಶಿವಮೊಗ್ಗ ಹಾಗೂ ತೀರ್ಥಹಳ್ಳಿ ಮಾರ್ಗವಾಗಿಯೂ ಸಾಕಷ್ಟು ಆಕರ್ಷಕ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸುತ್ತ ಪ್ರಯಾಣಿಸಬಹುದಾಗಿದೆ.

ಬೆಂಗಳೂರಿನಿಂದ ಕೊಡಚಾದ್ರಿ ಈ ರೀತಿ ಪಯಣಿಸಿ

ಅಮೃತೇಶ್ವರ ದೇವಸ್ಥಾನ
ಚಿತ್ರಕೃಪೆ: Dineshkannambadi

ಅಮೃತಪುರ: ಮೊದಲಿಗೆ ತರಿಕೆರೆಗೆ ಬಂದಾಗ ಇಲ್ಲಿರುವ ಅಮೃತೇಶ್ವರ ದೇವಸ್ಥಾನವನ್ನು ಮರೆಯದೆ ನೋಡಿರಿ. ಚಿಕ್ಕಮಗಳೂರು ಜಿಲ್ಲೆಯ ಅಮೃತಪುರ ಎಂಬ ಪಟ್ಟಣದಲ್ಲಿರುವ ಈ ದೇವಸ್ಥಾನವು ತರಿಕೆರೆಯಿಂದ ಕೇವಲ 8 ಕಿ.ಮೀ ಗಳಷ್ಟು ದೂರದಲ್ಲಿದೆ. ಶಿವನಿಗೆ ಮುಡಿಪಾದ ಈ ದೇವಾಲಯವು 12 ನೇಯ ಶತಮಾನದಲ್ಲಿ ನಿರ್ಮಿಸಲ್ಪಟ್ಟಿದ್ದು, ಹೊಯ್ಸಳ ಶೈಲಿಯ ವಾಸ್ತು ಶಿಲ್ಪ ಕಲೆಗೆ ಅಪಾರ ಖ್ಯಾತಿಯನ್ನು ಪಡೆದಿದೆ. ಈ ದೇವಾಲಯಕ್ಕೆ ಭೇಟಿ ನೀಡಿದಾಗಲೇ ಇದರ ಸುಂದರತೆಯು ನಿಮ್ಮ ಕಣ್ಣುಗಳಲ್ಲಿ ಅಚ್ಚಳಿಯದಂತೆ ಉಳಿಯುತ್ತದೆ.

ವಿಶೇಷ ಲೇಖನ : ಬೆರುಗುಗೊಳಿಸುವ ಚಿಕ್ಕಮಗಳೂರು

ಬೆಂಗಳೂರಿನಿಂದ ಕೊಡಚಾದ್ರಿ ಈ ರೀತಿ ಪಯಣಿಸಿ

ಶೃಂಗೇರಿಯ ತುಂಗಾ ತಟದಲ್ಲಿ ಸಂರಕ್ಷಿತ ಮೀನುಗಳು
ಚಿತ್ರಕೃಪೆ: Philanthropist 1

ಶೃಂಗೇರಿ: ಅಮೃತಪುರದಿಂದ ಮತ್ತೆ ತರಿಕೆರೆಗೆ ಬಂದು ಅಲ್ಲಿಂದ ಭದ್ರಾವತಿ, ನರಸಿಂಹರಾಜಪುರ, ಕೊಪ್ಪ, ಹರಿಹರಪುರ ಮಾರ್ಗವಾಗಿ ಆದಿ ಶಂಕರರ ಮೊದಲ ಜಗತ್ಪೀಠವಾದ ಶಾರದಾಂಬೆಯು ನೆಲೆಸಿರುವ ಶೃಂಗೇರಿಗೆ ಭೇಟಿ ನೀಡಬಹುದು. ಶೃಂಗೇರಿಯು ಪ್ರಮುಖ ತೀರ್ಥ ಕ್ಷೇತ್ರಗಳ ಪೈಕಿ ಒಂದಾಗಿದೆ. ಇಲ್ಲಿನ ವಿದ್ಯಾಶಂಕರ ದೇವಸ್ಥಾನವು ಅಪರೂಪದ ಶಿಲ್ಪ ಕಲೆಯನ್ನು ಹೊಂದಿದ್ದು 12 ರಾಶಿಗಳನ್ನು ಪ್ರತಿನಿಧಿಸುವ 12 ಮುಖ್ಯ ಖಂಬಗಳನ್ನು ಹೊಂದಿದೆ. ಅಲ್ಲದೆ ತುಂಗಾ ನದಿಯ ತಟದಲ್ಲಿ ನೆಲೆಸಿರುವ ಈ ಕ್ಷೇತ್ರವು ಆದಿಗುರು ಶಂಕರರು ಸ್ಥಾಪಿಸಿದ ಪೀಠಗಳಲ್ಲಿ ಮೊದಲನೇಯದಾಗಿದೆ.

ವಿಶೇಷ ಲೇಖನ : ಶೃಂಗೇರಿಯ ಸುತ್ತಮುತ್ತಲು

ಬೆಂಗಳೂರಿನಿಂದ ಕೊಡಚಾದ್ರಿ ಈ ರೀತಿ ಪಯಣಿಸಿ

ಸುಂದರವಾಗಿ ಕಾಣುವ ಸಿರಿಮನೆ ಫಾಲ್ಸ್
ಚಿತ್ರಕೃಪೆ: Subramanya Prasad

ಸಿರಿಮನೆ ಜಲಪಾತ: ಒಂದೊಮ್ಮೆ ಶೃಂಗೇರಿಯಲ್ಲಿ ಸಮಯ ಕಳೆದು ಶಾರದಾದೇವಿಯ ದರುಶನ ಪಡೆದ ನಂತರ ಅಲ್ಲಿಂದ ಕೇವಲ 11 ಕಿ.ಮೀ ಗಳಷ್ಟು ದೂರದಲ್ಲಿರುವ ಸಿರಿಮನೆ ಎಂಬ ಸ್ಥಳಕ್ಕೆ ತೆರಳಬಹುದು. ಸಿರಿಮನೆಯು ಸಿರಿಮನೆ ಜಲಪಾತದಿಂದಲೆ ಪ್ರಸಿದ್ಧಿ ಪಡೆದಿದೆ. ಕಾಡು ಪ್ರದೇಶಗಳಲ್ಲಿ ಸಾಗುತ್ತ ಒಂದು ಯೋಗ್ಯವಾದ ಸ್ಥಳದಲ್ಲಿ ನಿಮ್ಮ ವಾಹನವನ್ನು ನಿಲ್ಲಿಸಿ ಜಲಪಾತದ ಹತ್ತಿರ ಕೆಳಗೆ ನಡೆದುಕೊಂಡೆ ತೆರಳಬೇಕಾಗುತ್ತದೆ. ಇಳಿಯುವಾಗ ಜಲಪಾತದ ಸದ್ದು ಇಂಪಾಗಿ ಕೇಳುತ್ತಲೆ ಇರುತ್ತದೆ. ಮತ್ತೊಂದು ವಿಷಯವೆಂದರೆ ಇಲ್ಲಿ ಸಾಕಷ್ಟು ಜಿಗಣೆಗಳಿರುವುದರಿಂದ ಎಚ್ಚರವಹಿಸುವುದು ಅವಶ್ಯ.

ವಿಶೇಷ ಲೇಖನ : ದಕ್ಷಿಣ ಭಾರತದ ಪ್ರಮುಖ ಜಲಪಾತಗಳು

ಬೆಂಗಳೂರಿನಿಂದ ಕೊಡಚಾದ್ರಿ ಈ ರೀತಿ ಪಯಣಿಸಿ

ಕುಂದಾದ್ರಿ ಬೆಟ್ಟದ ಮೇಲಿರುವ ಜೈನ ಬಸದಿ
ಚಿತ್ರಕೃಪೆ: Manjeshpv

ಕುಂದಾದ್ರಿ ಬೆಟ್ಟ: ಸಿರಿಮನೆ ಜಲಪಾತದಲ್ಲಿ ಆನಂದಮಯ ಸಮಯ ಕಳೆದು ನಂತರ ಅಲ್ಲಿಂದ ಮತ್ತೆ ಶೃಂಗೇರಿ ಮಾರ್ಗವಾಗಿ ಕುಂದಾದ್ರಿ ಬೆಟ್ಟಕ್ಕೆ ತೆರಳಬಹುದು. ಕುಂದಾದ್ರಿ ಬೆಟ್ಟಕ್ಕೆ ತೆರಳಲು ಆಗುಂಬೆಯ ರಸ್ತೆಯ ಮೂಲಕ ಸಾಗುತ್ತ ಗುಡ್ಡೆಕೇರಿ ಎಂಬ ಸ್ಥಳದಿಂದ ಬಲ ತಿರುವು ಪಡೆದು ಕುಂದಾದ್ರಿ ಬೆಟ್ಟವನ್ನು ತಲುಪಬಹುದು. ಈ ರಸ್ತೆಯ ಅಗಲವು ಚಿಕ್ಕದಾಗಿದ್ದು ಘಾಟ್ ಗಳಿಂದ ಕೂಡಿರುವುದರಿಂದ ಸಾಕಷ್ಟು ಜಾಗರೂಕತೆಯಿಂದ ವಾಹನ ಚಲಾಯಿಸುವುದು ಅವಶ್ಯ. ಇಲ್ಲಿಗೆ ಕ್ರಮಿಸಲು ಒಟ್ಟು ದೂರ 38 ಕಿ.ಮೀ. ಒಂದೊಮ್ಮೆ ಬೆಟ್ಟ ತಲುಪಿದಾಗ ರಮಣೀಯ ನೋಟ ನಿಮಗಾಗಿ ಕಾದಿರುತ್ತದೆ. ಇಲ್ಲಿ ಪ್ರಮುಖವಾಗಿ ಪುರಾತನ ಜೈನ ಬಸದಿಯಿದೆ.

ವಿಶೇಷ ಲೇಖನ : ನಂದಿ ಬೆಟ್ಟದ ಸೌಂದರ್ಯ

ಬೆಂಗಳೂರಿನಿಂದ ಕೊಡಚಾದ್ರಿ ಈ ರೀತಿ ಪಯಣಿಸಿ

ವಿಸ್ಮಯಗೊಳಿಸುವ ಜೋಗ ಜಲಪಾತ
ಚಿತ್ರಕೃಪೆ: Vmjmalali

ಜೋಗ ಜಲಪಾತ: ಕುಂದಾದ್ರಿ ಬೆಟ್ಟದ ರಮಣಿಯ ನೋಟ, ಹಿತಕರವಾದ ಪರಿಸರದಲ್ಲಿ ಕೆಲಸಮಯ ಕಳೆದ ನಂತರ ವಿಶ್ವ ವಿಖ್ಯಾತಿ ಪಡೆದ ಜೋಗದ ಗುಂಡಿಯ ಕಡೆಗೆ ತೆರಳಬಹುದು. ಏಕೆಂದರೆ ಜೋಗ ಜಲಪಾತ ತಾಣವು ಇಲ್ಲಿಂದ 135 ಕಿ.ಮೀ ಗಳಷ್ಟು ಅಂತರದಲ್ಲಿದೆ. ಜೋಗವನ್ನು ಕುಂದಾದ್ರಿ ಬೆಟ್ಟದಿಂದ ತೀರ್ಥಹಳ್ಳಿ ಮಾರ್ಗವಾಗಿ ಸಾಗರಕ್ಕೆ ತೆರಳಿ ಅಲ್ಲಿಂದ ತಲುಪಬಹುದು. ಜುಲೈನಿಂದ ಡಿಸೆಂಬರ್ ವರೆಗಿನ ಅವಧಿಯು ಜೋಗ ಜಲಪಾತದ ಅಂದ ಚೆಂದಗಳನ್ನು ನೋಡಲು ಆದರ್ಶಮಯವಾಗಿರುತ್ತದೆ.

ವಿಶೇಷ ಲೇಖನ : ಭಾರತದಲ್ಲಿರುವ ಅತಿ ಎತ್ತರದ ಜಲಪಾತಗಳು

ಬೆಂಗಳೂರಿನಿಂದ ಕೊಡಚಾದ್ರಿ ಈ ರೀತಿ ಪಯಣಿಸಿ

ವಿಂಡೋ ಪರದೆಯ ಹಾಗೆ ಗೋಚರಿಸುವ ಕೊಡಚಾದ್ರಿ ಶಿಖರದ ನೋಟ
ಚಿತ್ರಕೃಪೆ: Premnath Thirumalaisamy

ಕೊಡಚಾದ್ರಿ: ಜೋಗ ಜಲಪಾತದ ಅದ್ಭುತ ದೃಶ್ಯವನ್ನು ಕಣ್ಣಾರೆ ಸವಿದು ಕೊನೆಗೆ ಅಂತಿಮ ತಾಣವಾದ ಕೊಡಚಾದ್ರಿಯ ಕಡೆಗೆ ತೆರಳಬಹುದು. ಈ ಸಂದರ್ಭದಲ್ಲಿ ಕೊಡಚಾದ್ರಿಗೆ ತೆರಳಲು ಎರಡು ಆಯ್ಕೆಗಳಿವೆ ಒಂದು ರಾಜ್ಯ ಹೆದ್ದಾರಿ ಸಂಖ್ಯೆ 50. ಇದು ಏನೀಲ್ಲವೆಂದರೂ ಎರಡು ಮುಕ್ಕಾಲು ಘಂಟೆಗಳಷ್ಟು ಸಮಯ ತೆಗೆದುಕೊಳ್ಳುತ್ತದೆ ಹಾಗೂ ರಸ್ತೆಯು ಅಷ್ಟೊಂದು ಉತ್ತಮವಾಗಿಲ್ಲ. ಇನ್ನೊಂದು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 206, ಸಾಗರ - ಹೊಸನಗರ ರಸ್ತೆ. ಅಂದರೆ ಜೋಗದಿಂದ ಸಾಗರಕ್ಕೆ ಬಂದು ಅಲ್ಲಿಂದ ಹೊಸನಗರ ಮಾರ್ಗವಾಗಿ ಕೊಡಚಾದ್ರಿಗೆ ತೆರಳಬಹುದು. ಇದರ ಒಟ್ಟು ದೂರ 116 ಕಿ.ಮೀ ಗಳು.

ವಿಶೇಷ ಲೇಖನ : ಕೊಡಚಾದ್ರಿ ಟ್ರೆಕ್ಕಿಂಗ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X