Search
  • Follow NativePlanet
Share
» »ಹಂಪಿಯಲ್ಲಿರುವ ಈ ಬಡವಿಲಿಂಗ ದೇವಸ್ಥಾನ ನೋಡಿದ್ದೀರಾ?

ಹಂಪಿಯಲ್ಲಿರುವ ಈ ಬಡವಿಲಿಂಗ ದೇವಸ್ಥಾನ ನೋಡಿದ್ದೀರಾ?

ಬಡವಿಲಿಂಗ ದೇವಸ್ಥಾನವು ಶಿವನಿಗೆ ಅರ್ಪಿತವಾದ ಹಂಪಿಯಲ್ಲಿರುವ ಅದ್ಭುತ ದೇವಸ್ಥಾನ. ಹಿಂದೂ ದೇವತೆ ಶಿವನನ್ನು ಈ ದೇವಸ್ಥಾನದ ಲಿಂಗ ರೂಪದಲ್ಲಿ ಪೂಜಿಸಲಾಗುತ್ತದೆ. ಲಕ್ಷ್ಮೀ ನರಸಿಂಹ ದೇವಸ್ಥಾನದ ಸಮೀಪ ಬಡವಿಲಿಂಗ ದೇವಸ್ಥಾನವಿದೆ. ವರ್ಷಪೂರ್ತಿ ಪ್ರವಾಸಿಗರು ಮತ್ತು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಮೂರು ಕಣ್ಣು

ಮೂರು ಕಣ್ಣು

PC: Snivas1008
ಹಂಪಿಯಲ್ಲಿನ ಬಡವಿಲಿಂಗ ದೇವಸ್ಥಾನವು ಏಕಶಿಲೆಯ ಶಿವಲಿಂಗವನ್ನು ಹೊಂದಿದೆ. ಶಿವಲಿಂಗವು ಮೂರು ಕಣ್ಣಿನ ಗುರುತುಗಳನ್ನು ಹೊಂದಿದೆ. ಮೂರು ಕಣ್ಣುಗಳು ಶಿವನ ಮೂರು ಕಣ್ಣುಗಳನ್ನು ಪ್ರತಿನಿಧಿಸುತ್ತದೆ.

200 ರೂ.ಗೆ ಕೊಡೈಕೆನಾಲ್‌ನಲ್ಲಿ ವಸತಿ, 20ರೂ.ಗೆ ಚಿಕನ್ ಫ್ರೈ200 ರೂ.ಗೆ ಕೊಡೈಕೆನಾಲ್‌ನಲ್ಲಿ ವಸತಿ, 20ರೂ.ಗೆ ಚಿಕನ್ ಫ್ರೈ

3 ಮೀಟರ್ ಎತ್ತರದ ಶಿವಲಿಂಗ

3 ಮೀಟರ್ ಎತ್ತರದ ಶಿವಲಿಂಗ

PC: Gopan Nair
ಸುಂದರವಾದ ಲಿಂಗವನ್ನು ಕಪ್ಪು ಕಲ್ಲಿನಿಂದ ತಯಾರಿಸಲಾಗಿದೆ. ಇದು 3 ಮೀಟರ್ ಎತ್ತರವನ್ನು ಹೊಂದಿದೆ. ವಿಜಯನಗರ ಸಾಮ್ರಾಜ್ಯದ ಕಾಲದಿಂದ ಈ ದೇವಾಲಯ ಅಸ್ತಿತ್ವದಲ್ಲಿದೆ ಎಂದು ನಂಬಲಾಗಿದೆ. ಶಿವಲಿಂಗವನ್ನು ಆರಾಧಿಸಲು ಭಕ್ತರು ಇಲ್ಲಿಗೆ ಬರುತ್ತಾರೆ.

ಬಡವಿಲಿಂಗ ಹೆಸರು ಬಂದಿದ್ದು ಹೇಗೆ?

ಬಡವಿಲಿಂಗ ಹೆಸರು ಬಂದಿದ್ದು ಹೇಗೆ?

PC: Snivas1008

ಬಡವಿಲಿಂಗ ಎಂಬ ಹೆಸರು ಎರಡು ಪದದ ಸಂಯೋಜನೆಯಿಂದ ಬಂದಿದೆ. ಬಡ ಹಾಗೂ ಲಿಂಗ ಶಿವವನ್ನು ಪ್ರತಿನಿಧಿಸುತ್ತದೆ. ದೇವಸ್ಥಾನದೊಳಗೆ ಶಿವಲಿಂಗವನ್ನು ಬಡತನದಿಂದ ಬೆಳೆದ ರೈತ ಮಹಿಳೆ ಇರಿಸಿದ್ದು ಎಂದು ಪುರಾಣವಿದೆ. ಆದ್ದರಿಂದ ದೇವಾಲಯವು ಬಡವಿಲಿಂಗ ದೇವಸ್ಥಾನ ಎಂದು ಕರೆಯಲ್ಪಟ್ಟಿತು.

ದಂಪತಿ ಸಮೇತರಾಗಿ ಬಂದು ಇಲ್ಲಿ ಬುಟ್ಟಿ ತುಂಬಾ ಬಾಳೆಹಣ್ಣು ಅರ್ಪಿಸ್ತಾರೆ ಯಾಕೆ?ದಂಪತಿ ಸಮೇತರಾಗಿ ಬಂದು ಇಲ್ಲಿ ಬುಟ್ಟಿ ತುಂಬಾ ಬಾಳೆಹಣ್ಣು ಅರ್ಪಿಸ್ತಾರೆ ಯಾಕೆ?

ಶಿವಲಿಂಗಕ್ಕೆ ಸೂರಿಲ್ಲ

ಶಿವಲಿಂಗಕ್ಕೆ ಸೂರಿಲ್ಲ

PC: Snivas1008

ಬಡವಿಲಿಂಗ ದೇವಾಲಯದ ಬೃಹತ್ ಶಿವಲಿಂಗವು ಒಂದು ಸಣ್ಣ ಕಲ್ಲಿನ ಕೋಣೆಯಲ್ಲಿದೆ. ಭಕ್ತರು ಒಳಹೋಗಲಯ ಒಂದು ದ್ವಾರವಿದೆ. ಇಲ್ಲಿನ ಆಸಕ್ತಿದಾಯಕ ವಿಷಯವೆಂದರೆ ಈ ದೇವಾಲಯಕ್ಕೆ ಸೂರಿಲ್ಲ. ಹಗಲಿನಲ್ಲಿ ಬೆಳಕು ನೇರವಾಗಿ ಶಿವಲಿಂಗದ ಮೇಲೆ ಬೀಳುತ್ತದೆ. ಹಾಗೆಯೇ ಮಳೆಗಾಲದಲ್ಲಿ ಮಳೆ ನೀರು ಒಳಬೀಳುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಹಂಪಿಯಲ್ಲಿ ವಿಮಾನ ನಿಲ್ದಾಣವಿಲ್ಲ. ಹಂಪಿಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಬಳ್ಳಾರಿ ವಿಮಾನ ನಿಲ್ದಾಣ. ಬಳ್ಳಾರಿಯು ಹಂಪಿಯಿಂದ ೬೪ ಕಿ.ಮೀ ದೂರದಲ್ಲಿದೆ.

ರೈಲಿನಲ್ಲಿ ಪ್ರಯಾಣಿಸುವುದಾದರೆ ಹೊಸಪೇಟೆ ಜಂಕ್ಷನ್ ರೈಲು ನಿಲ್ದಾಣದಲ್ಲಿ ಇಳಿದು ಅಲ್ಲಿಗೆ ಹೋಗಬಹುದು.

ಇನ್ನು ಬಸ್‌ನಲ್ಲಿ ಹೋಗುವುದಾದರೆ ಹಂಪಿ ಸಾಕಷ್ಟು ಕೆಎಸ್‌ಆರ್‌ಟಿಸಿ ಬಸ್‌ಗಳಿವೆ.

ಈ ಸರಸ್ವತಿ ದೇವಸ್ಥಾನದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ್ರೆ ವಿದ್ಯೆ ಚೆನ್ನಾಗಿ ಹತ್ತತ್ತೆಈ ಸರಸ್ವತಿ ದೇವಸ್ಥಾನದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ್ರೆ ವಿದ್ಯೆ ಚೆನ್ನಾಗಿ ಹತ್ತತ್ತೆ

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

ಬೆಳಗ್ಗೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಈ ಶಿವಲಿಂಗದ ದರ್ಶನಕ್ಕೆ ಅವಕಾಶವಿದೆ. ಇನ್ನು ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ನವಂಬರ್‌ನಿಂದ ಫೆಬ್ರವರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X