Search
  • Follow NativePlanet
Share
» »ಬಿಟ್ಟ ಕಣ್ಣು ಬಿಟ್ಟಂತೆ ಮಾಡುವ ಔಲಿ ಮೈಸಿರಿ

ಬಿಟ್ಟ ಕಣ್ಣು ಬಿಟ್ಟಂತೆ ಮಾಡುವ ಔಲಿ ಮೈಸಿರಿ

By Vijay

ಹೌದು, ಈ ಲೇಖನದಲ್ಲಿ ತಿಳಿಸಲಾಗಿರುವ ಸ್ಥಳದ ಮಹಿಮೆಯೆ ಹಾಗೆ. ಇಲ್ಲಿ ಕಂಡು ಬರುವ ದೃಶ್ಯಗಳು ಒಂದಕ್ಕೊಂದು ಸ್ಪರ್ಧೆ ಏರ್ಪಡಿಸಿಕೊಳ್ಳುತ್ತವೆ. ನೋಡುಗರಿಗೆ ಯಾವ ದೃಶ್ಯ ತುಂಬ ಸುಂದರ ಎಂದು ನಿರ್ಧರಿಸಲು ಕಷ್ಟವಾಗುತ್ತದೆ. ಒಂದೆಡೆ ತಂಪು ತಂಪಾದ ಶ್ವೇತಮಯ ಹಾಸಿಗೆ, ಇನ್ನೊಂದೆಡೆ ದೂರದ ಶ್ವೇತ ಪ್ರಭಾವಳಿಯ ಬೆಟ್ಟ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.

ಇದು ಹಿಮಜಾರು ಬಂಡಿ ಆಟಗಳಿಗೆ (ಸ್ಕೀಯಿಂಗ್) ಜನಪ್ರಿಯವಾಗಿರುವ ಔಲಿ ಎಂಬ ಸುಂದರ ಗಿರಿಧಾಮ. ಈ ಮಾದಕತೆಯ ಗಿರಿಧಾಮವು ಉತ್ತರಾಖಂಡ ರಾಜ್ಯದ ಹಿಮಾಲಯ ಪರ್ವತ ಪ್ರದೇಶಗಳಲ್ಲಿ ನೆಲೆಸಿದೆ. ಉತ್ತರಾಖಂಡ ರಾಜ್ಯ ರೂಪಗೊಂಡ ನಂತರ ಚಮೋಲಿ ಜಿಲ್ಲೆಯಲ್ಲಿರುವ ಔಲಿ ಗಿರಿಧಾಮವು ರಾಜ್ಯದ ಪ್ರವಾಸಿ ಆಕರ್ಷಣೆಯಾಗಿ ಹೆಸರುವಾಸಿಯಾಗುತ್ತಿದೆ.

ದೇವಭೂಮಿ ಎಂದು ಕರೆಯಲ್ಪಡುವ ಉತ್ತರಾಖಂಡ ರಾಜ್ಯದಲ್ಲಿರುವ ಔಲಿ ಗಿರಿಧಾಮವು ಪ್ರಖ್ಯಾತ ಧಾರ್ಮಿಕ ಕೇಂದ್ರ ಬದರಿನಾಥಕ್ಕೆ ಹೋಗುವ ಮಾರ್ಗದಲ್ಲಿ ನೆಲೆಸಿದೆ.

ಔಲಿ:

ಔಲಿ:

ಔಲಿ ಗಿರಿಧಾಮ ಪ್ರದೇಶವು ತನ್ನ ಸುತ್ತಲೂ ಓಕ್ ಮರಗಳ ಕಾಡಿನಿಂದ ಕೂಡಿದೆ. ಅಷ್ಟೆ ಅಲ್ಲ ಪ್ರದೇಶವು ಹತ್ತಿರದಲ್ಲೆ ಗೋಚರಿಸುವ ಹಿಮಾಲಯದ ಅದ್ಭುತ, ರೋಮಾಂಚನಗೊಳಿಸುವಂತಹ ದೃಶ್ಯಾವಳಿಗಳನ್ನು ಕರುಣಿಸುತ್ತದೆ.

ಚಿತ್ರಕೃಪೆ: Michael Scalet

ಔಲಿ:

ಔಲಿ:

ಔಲಿಯಲ್ಲಿ ಕಂಡುವ ಇಳಿಜಾರು, ತಗ್ಗು ಪ್ರದೇಶಗಳು ಹಿಮದಲ್ಲಿ ಜಾರುವ ಆಟಗಳಿಗೆ ಹೆಚ್ಚಿನ ಉತ್ತೇಜನವನ್ನು ನೀಡಿದೆ. ಈ ಒಂದು ಹಿಮಜಾರು (ಸ್ಕೀಯಿಂಗ್) ಆಟವನ್ನು ಭಾರತದಲ್ಲಿ ಜನಪ್ರಿಯಗೊಳಿಸುವ ದೃಷ್ಟಿಯಿಂದ ರಾಜ್ಯದ ಪ್ರವಾಸೋದ್ಯಮ ಇಲಾಖೆಯು ಚಳಿಗಾಲದಲ್ಲಿ ವಿಶೇಷ ಸ್ಕೀಯಿಂಗ್ ಸ್ಪರ್ಧೆಗಳನ್ನು ಏರಪಡಿಸುತ್ತದೆ.

ಚಿತ್ರಕೃಪೆ: Anuj Kumar Garg

ಔಲಿ:

ಔಲಿ:

ಔಲಿಯು ತನ್ನಲ್ಲಿರುವ ಕೇಬಲ್ ಕಾರ್ ಗೂ ಸಹ ಪ್ರಖ್ಯಾತಿ ಗಳಿಸಿದೆ. ನಾಲ್ಕು ಕಿ.ಮೀ ಉದ್ದವಿರುವ ಈ ಕೇಬಲ್ ಕಾರ್ ಏಷಿಯಾ ಖಂಡದಲ್ಲೆ ಉದ್ದವಾಗಿದೆ. ಇದರಲ್ಲಿ ಕುಳಿತು ಸಾಗುವಾಗ ರೋಮಾಂಚನ ಉಂಟಾಗುವುದು ಖಂಡಿತ ಹಾಗೂ ಜೊತೆ ಜೊತೆಗೆ ಪ್ರದೇಶದ ಅವಿಸ್ಮರಣೀಯ ಸೌಂದರ್ಯವನ್ನೂ ಸಹ ಆಸ್ವಾದಿಸಬಹುದು. ಇದಕ್ಕೆ ಗೊಂಡೋಲಾ ಸವಾರಿ ಎಂತಲೂ ಸಹ ಕರೆಯುತ್ತಾರೆ.

ಚಿತ್ರಕೃಪೆ: Anuj Kumar Garg

ಔಲಿ:

ಔಲಿ:

ಈ ಪ್ರದೇಶದ ಇತಿಹಾಸವು 8ನೇ ಶತಮಾನದಿಂದ ಆರಂಭವಾಗುತ್ತದೆ. ಗುರು ಆದಿಶಂಕರಾಚಾರ್ಯರು ಈ ಪ್ರದೇಶಕ್ಕೆ ಭೇಟಿ ನೀಡಿದ್ದರು ಎಂದು ನಂಬಲಾಗಿದೆ. ಬುಗ್ಯಲ್ ಎಂಬ ಹೆಸರೂ ಈ ಪ್ರದೇಶಕ್ಕಿದ್ದು, ಇದರ ಅರ್ಥ ಸ್ಥಳೀಯ ಭಾಷೆಯಲ್ಲಿ 'ಹುಲ್ಲುಗಾವಲು/ಹುಲ್ಲು' ಎಂಬುದಾಗಿ.

ಚಿತ್ರಕೃಪೆ: Joginder Pathak

ಔಲಿ:

ಔಲಿ:

ಇಳಿಜಾರು ಪ್ರದೇಶದಲ್ಲಿ ಪ್ರವಾಸಿಗರು ನಡೆಯುತ್ತಾ ಹೋದರೆ ನಂದಾ ದೇವಿ, ಮನ ಪರ್ವತ ಮತ್ತು ಸುಂದರವಾದ ಕಾಮತ್ ಬೆಟ್ಟಗಳ ಸಾಲುಗಳನ್ನು ನೋಡಬಹುದು. ಪ್ರವಾಸಿಗರು ಇಲ್ಲಿನ ಸೇಬು ಹಣ್ಣಿನ ತೋಟ ಹಾಗೂ ಹಸಿರಾದ ಸುಂದರ ಪರ್ವತಗಳ ಸೌಂದರ್ಯವನ್ನು ಇಳಿಜಾರು ಪ್ರದೇಶಗಳಿಂದ ನೋಡಿ ಆನಂದಿಸಬಹುದು.

ಚಿತ್ರಕೃಪೆ: Rick McCharles

ಔಲಿ:

ಔಲಿ:

ಔಲಿಯ ಅತ್ಯಂತ ಹೆಸರಾಂತ ಪ್ರದೇಶ ನಂದಪ್ರಯಾಗ್, ಇದು ಅಲಕ್ ನಂದಾ ಹಾಗೂ ನಂದಾಕಿನಿ ನದಿಗಳು ಸೇರುವ ಸ್ಥಳದಲ್ಲಿದೆ. ನದಿಗಳ ಸಂಗಮವಾಗುವ ಈ ಸ್ಥಳದಲ್ಲಿ ಒಮ್ಮೆ ಮುಳುಗಿ ಏಳ ಬೇಕೆನ್ನುವುದು ಅನೇಕ ಪಕ್ಕಾ ಹಿಂದೂ ಸಂಪ್ರದಾಯವಾದಿಗಳ ಅಭಿಪ್ರಾಯ. ಪ್ರವಾಸಿಗರು ನೋಡಿ ಸಂತೋಷಪಡುವ ಹಿಮಪರ್ವತಗಳಾದ ಬದರೀನಾಥ್ ಹಾಗೂ ಕೇದಾರನಾಥ್ ಗೆ ಹೋಗಲು ಇದೇ ಮೂಲ ದ್ವಾರವಾಗಿದೆ.

ಚಿತ್ರಕೃಪೆ: Anirban Biswas

ಔಲಿ:

ಔಲಿ:

ಹಿಮಾಲಯಾದ ಬೆಟ್ಟ ಪ್ರದೇಶಗಳಲ್ಲಿ ಟ್ರೆಕ್ಕಿಂಗ್ ಮಾಡಲು ಇದು ಹೆಸರಾಂತ ಪ್ರದೇಶವಾಗಿದೆ. ಪ್ರವಾಸಿಗರು ಇಲ್ಲಿನ ಜೋಶಿಮಠ ಟ್ರೆಕ್ಕಿಂಗ್ ಮಾರ್ಗ ಅತ್ಯಂತ ಹೆಸರುವಾಸಿಯಾಗಿದ್ದು ಒಂದು ಸಲ ಪ್ರಯತ್ನಿಸಬಹುದಾಗಿದೆ. ಎತ್ತರವಾದ ಪ್ರದೇಶಗಳಾದ ಕಾಮಿಟ್, ನಂದಾ ದೇವಿ, ಮನ ಪರ್ವತ ಹಾಗೂ ದುನಗಿರಿ ಪ್ರದೇಶಗಳನ್ನು ಈ ಟ್ರೆಕ್ಕಿಂಗ್ ಸಮುಯದಲ್ಲಿ ಕಾಣಬಹುದು.

ಚಿತ್ರಕೃಪೆ: Michael Scalet

ಔಲಿ:

ಔಲಿ:

ಪ್ರವಾಸಿಗರು ರಸ್ತೆ, ರೈಲು ಹಾಗೂ ವಿಮಾನ ಮಾರ್ಗಗಳ ಮೂಲಕ ಈ ನಗರವನ್ನು ತಲುಪಬಹುದು. ಡೆಹರಾಡೂನ್ ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣ ಹಾಗೂ ಹರಿದ್ವಾರದ ರೈಲು ನಿಲ್ದಾಣ, ಔಲಿ ತಲುಪಲು ಹತ್ತಿರದ ನಿಲ್ದಾಣಗಳಾಗಿವೆ. ಔಲಿಗೆ ಹತ್ತಿರದಲ್ಲಿರುವ ನಗರಗಳಿಂದ ಅನೇಕ ಬಸ್ ಸೌಕರ್ಯಗಳಿವೆ.

ಚಿತ್ರಕೃಪೆ: Ishan Manjrekar

ಔಲಿ:

ಔಲಿ:

ಬೇಸಿಗೆಯಲ್ಲಿ (ಮಾರ್ಚ್ ನಿಂದ ಜೂನ್ ವರೆಗೆ)ಔಲಿಯ ಹವಾಮಾನವು ಹಿತಕರವಾಗಿರುವುದರಿಂದ ಪ್ರವಾಸಿಗರು ಬೇಸಿಗೆಯು ಇಲ್ಲಿಗೆ ಭೇಟಿ ನೀಡಲು ಸೂಕ್ತ ಕಾಲವಾಗಿದೆ. ಸ್ಕೀಯಿಂಗ್ ಮಾಡಲು ಬಯಸಿದ್ದರೆ ಚಳಿಗಾಲ ಪ್ರಶಸ್ತವಾಗಿರುತ್ತದೆ (ಜುಲೈನಿಂದ ಅಕ್ಟೋಬರ್).

ಚಿತ್ರಕೃಪೆ: smerikal

ಔಲಿ:

ಔಲಿ:

ಔಲಿಯ ಪರಿಸರ ಅನಾವರಣಗೊಳಿಸುವ ಸುಂದರ ಚಿತ್ರಗಳು.

ಚಿತ್ರಕೃಪೆ: Michael Scalet

ಔಲಿ:

ಔಲಿ:

ಔಲಿಯ ಪರಿಸರ ಅನಾವರಣಗೊಳಿಸುವ ಸುಂದರ ಚಿತ್ರಗಳು.

ಚಿತ್ರಕೃಪೆ: Rick McCharles

ಔಲಿ:

ಔಲಿ:

ಔಲಿಯ ಪರಿಸರ ಅನಾವರಣಗೊಳಿಸುವ ಸುಂದರ ಚಿತ್ರಗಳು.

ಚಿತ್ರಕೃಪೆ: Ishan Manjrekar

ಔಲಿ:

ಔಲಿ:

ಔಲಿಯ ಪರಿಸರ ಅನಾವರಣಗೊಳಿಸುವ ಸುಂದರ ಚಿತ್ರಗಳು.

ಚಿತ್ರಕೃಪೆ: Ishan Manjrekar

ಔಲಿ:

ಔಲಿ:

ಔಲಿಯ ಪರಿಸರ ಅನಾವರಣಗೊಳಿಸುವ ಸುಂದರ ಚಿತ್ರಗಳು.

ಚಿತ್ರಕೃಪೆ: Michael Scalet

ಔಲಿ:

ಔಲಿ:

ಔಲಿಯ ಪರಿಸರ ಅನಾವರಣಗೊಳಿಸುವ ಸುಂದರ ಚಿತ್ರಗಳು.

ಚಿತ್ರಕೃಪೆ: Ishan Manjrekar

ಔಲಿ:

ಔಲಿ:

ಔಲಿಯ ಪರಿಸರ ಅನಾವರಣಗೊಳಿಸುವ ಸುಂದರ ಚಿತ್ರಗಳು.

ಚಿತ್ರಕೃಪೆ: Michael Scalet

ಔಲಿ:

ಔಲಿ:

ಔಲಿಯ ಪರಿಸರ ಅನಾವರಣಗೊಳಿಸುವ ಸುಂದರ ಚಿತ್ರಗಳು.

ಚಿತ್ರಕೃಪೆ: Michael Scalet

ಔಲಿ:

ಔಲಿ:

ಔಲಿಯ ಪರಿಸರ ಅನಾವರಣಗೊಳಿಸುವ ಸುಂದರ ಚಿತ್ರಗಳು.

ಚಿತ್ರಕೃಪೆ: Michael Scalet

ಔಲಿ:

ಔಲಿ:

ಔಲಿಯ ಪರಿಸರ ಅನಾವರಣಗೊಳಿಸುವ ಸುಂದರ ಚಿತ್ರಗಳು.

ಚಿತ್ರಕೃಪೆ: Michael Scalet

ಔಲಿ:

ಔಲಿ:

ಔಲಿಯ ಪರಿಸರ ಅನಾವರಣಗೊಳಿಸುವ ಸುಂದರ ಚಿತ್ರಗಳು.

ಚಿತ್ರಕೃಪೆ: Michael Scalet

ಔಲಿ:

ಔಲಿ:

ಔಲಿಯ ಪರಿಸರ ಅನಾವರಣಗೊಳಿಸುವ ಸುಂದರ ಚಿತ್ರಗಳು.

ಚಿತ್ರಕೃಪೆ: Michael Scalet

ಔಲಿ:

ಔಲಿ:

ಔಲಿಯ ಪರಿಸರ ಅನಾವರಣಗೊಳಿಸುವ ಸುಂದರ ಚಿತ್ರಗಳು.

ಚಿತ್ರಕೃಪೆ: Michael Scalet

ಔಲಿ:

ಔಲಿ:

ಔಲಿಯ ಪರಿಸರ ಅನಾವರಣಗೊಳಿಸುವ ಸುಂದರ ಚಿತ್ರಗಳು.

ಚಿತ್ರಕೃಪೆ: Michael Scalet

ಔಲಿ:

ಔಲಿ:

ಔಲಿಯ ಪರಿಸರ ಅನಾವರಣಗೊಳಿಸುವ ಸುಂದರ ಚಿತ್ರಗಳು.

ಚಿತ್ರಕೃಪೆ: netlancer2006

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X