Search
  • Follow NativePlanet
Share
» » ಪಾಟ್ನಿಟಾಪ್‌ನಲ್ಲಿ ಏನೆಲ್ಲಾ ಆಕರ್ಷಣೆಗಳಿವೆ ನೋಡಿ

ಪಾಟ್ನಿಟಾಪ್‌ನಲ್ಲಿ ಏನೆಲ್ಲಾ ಆಕರ್ಷಣೆಗಳಿವೆ ನೋಡಿ

ಅಂತ್ಯವಿಲ್ಲದ ಹುಲ್ಲುಗಾವಲುಗಳು ಮತ್ತು ಹಿಮಾಲಯ ಪರ್ವತಗಳ ಹಿಮಾವೃತ ಶಿಖರಗಳ ವಿಹಂಗಮ ನೋಟಗಳೊಂದಿಗೆ, ಪಾಟ್ನಿಟಾಪ್ ತನ್ನ ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ಪ್ರಕೃತಿಯ ಸೌಂದರ್ಯವನ್ನು ಅನುಭವಿಸಲು ಒಂದು ಪರಿಪೂರ್ಣ ಸ್ಥಳವಾಗಿದೆ.

ಎಲ್ಲಿದೆ ಪಾಟ್ನಿಟಾಪ್

ಕಾಶ್ಮೀರ ಕಣಿವೆಯ ಸುಂದರ ಪರ್ವತ ಪ್ರದೇಶವಾದ ಪಾಟ್ನಿಟಾಪ್ ಜಮ್ಮುವಿನಿಂದ 112 ಕಿ.ಮೀ ದೂರದಲ್ಲಿದೆ. ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿರುವ ಉದಯ್‌ಪುರ ಜಿಲ್ಲೆಯ ಜಮ್ಮುವಿನಿಂದ ರಾಷ್ಟ್ರೀಯ ಹೆದ್ದಾರಿ 44 112 ಕಿಮೀ (70 ಮೈಲಿ) ದೂರದಲ್ಲಿರುವ ಪಟ್ನಿಟಾಪ್ ಅಥವಾ ಪಟ್ನಿ ಟಾಪ್ ಎಂಬುದು ಉಧಮ್ಪುರದಿಂದ ಶ್ರೀನಗರಕ್ಕೆ ಹೋಗುವ ದಾರಿಯಲ್ಲಿದೆ.

ಪಿಕ್ನಿಕ್ ತಾಣ

ಸುಂದರವಾದ ಪ್ರಸ್ಥಭೂಮಿಯ ಮೇಲಿರುವ ಮತ್ತು ದಟ್ಟ ಕಾಡುಗಳಿಂದ ಸುತ್ತುವರಿದ ಇದು 2024 ಮೀಟರ್ ಎತ್ತರದಲ್ಲಿದೆ. ಪಾಟ್ನಿಟಾಪ್, ಕಾಶ್ಮೀರದ ಕೆಲವು ಆಕರ್ಷಣೀಯ ತಾಣಗಳಲ್ಲೊಂದಾಗಿದ್ದು, ಪಿಕ್ನಿಕ್ ತಾಣವೂ ಆಗಿದೆ. ಚೆನಾಬ್ ಜಲಾನಯನ ಹಿನ್ನೆಲೆಯುಳ್ಳ ಪರ್ವತಗಳ ಭವ್ಯವಾದ ವೀಕ್ಷಣೆ ಮಾಡಬಹುದು.

ಯಾವಾಗ ಭೇಟಿಗೆ ಸೂಕ್ತ

ಮೇ ಜೂನ್ ಹಾಗೂ ಸೆಪ್ಟೆಂಬರ್ ಅಕ್ಟೋಬರ್ ಇಲ್ಲಿಗೆ ಭೇಟಿ ನೀಡಲು ಸೂಕ್ತವಾಗಿದೆ. ಚಳಿಗಾಲದಲ್ಲಂತೂ ಮಂಜಿನಿಂದ ಇಡೀ ರಸ್ತೆ ಮುಚ್ಚಿಹೋಗಿರುತ್ತದೆ.

ಇತರ ಪ್ರೇಕ್ಷಣೀಯ ಸ್ಥಳಗಳು

ಪಾಟ್ನಿಟಾಪ್‌ ಸಮೀಪದಲ್ಲಿ ಸಾಕಷ್ಟು ಆಕರ್ಷಣೀಯ ತಾಣಗಳಿವೆ. ಪಾಟ್ನಿಟಾಪ್‌ನಿಂದ 17 ಕಿ.ಮೀ ದೂರದಲ್ಲಿ ಸನಾಸರ್ ಇದೆ. ಪ್ಯಾರಾಗ್ಲೈಡಿಂಗ್ ಬೇಸ್, ಗಾಲ್ಫ್ ಕೋರ್ಟ್‌ಗಳು ಮತ್ತು ವಿಸ್ತೃತ ದೃಶ್ಯವೀಕ್ಷಣೆಯ ಆಯ್ಕೆಗಳಿಗಾಗಿ ಜನಪ್ರಿಯವಾಗಿದೆ.

ಬಯೋಟೆ

125 ಕಿ.ಮೀ. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ 1560 ಮೀಟರ್ ಎತ್ತರದಲ್ಲಿದೆ. ಜಮ್ಮುವಿನಿಂದ ಪಾಟ್ನಿಟಾಪ್‌ಗೆ ಹೋಗುವ ಮಾರ್ಗದಲ್ಲಿ, ಈ ರೆಸಾರ್ಟ್ ಪ್ಯಾಟ್ನಿಟಾಪ್ ಪರ್ವತ ಶ್ರೇಣಿಯ ಅರಣ್ಯ ಇಳಿಜಾರುಗಳನ್ನು ವ್ಯಾಪಿಸಿದೆ.

ಬಿಲ್ಲೂ ಕಿ ಪೌರಿ

ಪಾಟ್ನಿಟಾಪ್‌ನಿಂದ ಸ್ವಲ್ಪ ದೂರದಲ್ಲಿ270 ಮೆಟ್ಟಿಲುಗಳನ್ನು ಹೊಂದಿರುವ ಬೆಟ್ಟವಿದೆ. ಇದನ್ನು ಬಿಲ್ಲೂ ಕಿ ಪೌರಿ ಎಂಬ ಹೆಸರಿನಿಂದ ಕರೆಯಲಾಗುತ್ತಿದ್ದು ಇದು ದಾವರಿಯೈ ಪಟ್ಟಣದಲ್ಲಿ ಬರುತ್ತದೆ.

ಸುಧ್ ಮಹದೇವ್

ಪಾಟ್ನಿಟಾಪ್ ಸಮೀಪವಿರುವ ಈ ಪವಿತ್ರ ಸ್ಥಳವು ಜಮ್ಮುವಿನಿಂದ ಸುಮಾರು 1225 ಮೀಟರ್ ಮತ್ತು 120 ಕಿ.ಮೀ ದೂರದಲ್ಲಿದೆ. ಸುಮಾರು 80 ವರ್ಷಗಳ ಹಿಂದೆಯೇ ಈ ದೇವಾಲಯವನ್ನು ನಿರ್ಮಿಸಲಾಯಿತು. ಪಾರ್ವತಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾಗ ಆಕಸ್ಮಿಕವಾಗಿ ತ್ರಿಶೂಲದಿಂದ ಶಿವ ಭಕ್ತರು ಕೊಲ್ಲಲ್ಪಟ್ಟ ಸ್ಥಳ ಇದಾಗಿದೆ.

ಗೌರಿಕುಂಡ

ಸುಧ್‌ ಮಹದೇವ್‌ನ ಸ್ವಲ್ಪ ದೂರದಲ್ಲಿ ಗೌರಿಕುಂಡವಿದೆ. ಇಲ್ಲಿ ಪಾರ್ವತಿ ದೇವಿಯು ಶಿವನನ್ನು ಕುರಿತಾಗಿ ತಪಸ್ಸು ಮಾಡುತ್ತಿದ್ದಾಗ ಸ್ನಾನ ಮಾಡುತ್ತಿದ್ದ ನೀರಿನ ಕುಂಡ ಇದಾಗಿದೆ.

ಇತರ ಸ್ಥಳಗಳು

ಪಾಟ್ನಿಟಾಪ್‌ನಿಂದ ಒಂದು ಸಣ್ಣ ಚಾರಣದ ನಂತರ ನಥಾಟೋಪ್ ತಲುಪಬಹುದು. ಈ ಗಿರಿಧಾಮವನ್ನು ಚಳಿಗಾಲದಲ್ಲಿ ಹಿಮದಿಂದ ಮುಚ್ಚಲಾಗುತ್ತದೆ. ಈ ಪರ್ವತಗಳಲ್ಲಿ ಸ್ಕೀಯಿಂಗ್‌ಗೆ ಹೋಗಬಹುದು. ಪ್ಯಾರಾಗ್ಲೈಡಿಂಗ್‌ಗಾಗಿ ನಾಥಾಟೋಪ್ ಬಹಳ ಪ್ರಸಿದ್ಧವಾಗಿದೆ.

ತಲುಪುವುದು ಹೇಗೆ?

ರಾಜ್ಯದ ರಸ್ತೆ ಸಾರಿಗೆ ಮೂಲಕ ಜಮ್ಮು ಮತ್ತು ಕಾಶ್ಮೀರದ ಎಲ್ಲಾ ಪ್ರಮುಖ ನಗರಗಳೊಂದಿಗೆ ಪಾಟ್ನಿಟಾಪ್ ಸಂಪರ್ಕ ಹೊಂದಿದೆ. ಜಮ್ಮುವಿನಿಂದ ವಿಶೇಷವಾಗಿ ಪಾಟ್ನಿಟಾಪ್‌ಗೆ ಬಸ್ಸುಗಳು ಲಭ್ಯವಿದೆ. ಬಾಡಿಗೆಗೆ ಟ್ಯಾಕ್ಸಿಗಳು ಮತ್ತು ಖಾಸಗಿ ವಾಹನಗಳು ಲಭ್ಯವಿದೆ.

ರೈಲು ನಿಲ್ದಾಣ

ಜಮ್ಮು ಮತ್ತು ಉಧಮ್ಪುರದಲ್ಲಿ ಹತ್ತಿರದ ರೈಲು ನಿಲ್ದಾಣಗಳಾಗಿವೆ. ದೆಹಲಿ ಮತ್ತು ಚಂಡೀಗಢದಿಂದ ಜಮ್ಮು ತಾವಿಗೆ ಹಲವಾರು ರೈಲುಗಳು ಓಡಾಡುತ್ತವೆ. ದೇಶದ ಇತರೆ ಭಾಗಗಳಿಂದ ಜಮ್ಮು ತಾವಿಗೆ ರೈಲುಗಳು ಇವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X