Search
  • Follow NativePlanet
Share
» »ಬೆಂಗಳೂರಿನ ಬಂಡೆ ಪಾರ್ಕ್‌ನ್ನು ನೋಡಿದ್ದೀರಾ?

ಬೆಂಗಳೂರಿನ ಬಂಡೆ ಪಾರ್ಕ್‌ನ್ನು ನೋಡಿದ್ದೀರಾ?

ಬೆಂಗಳೂರಿನಲ್ಲಿರುವವರು ಈ ಬಂಡೆ ಉದ್ಯಾನವನವನ್ನು ನೋಡಿರಲೂ ಬಹುದು. ಯಾಕೆಂದರೆ ಇದು ಇರುವುದು ಬೆಂಗಳೂರಿನಲ್ಲೇ.

ಉದ್ಯಾನವನ ಎಂದರೆ ಗಿಡ, ಮರಗಳಿಂದ ಕೂಡಿದ್ದು ಹಸಿರಾಗಿರುತ್ತದೆ, ಅಲ್ಲಿ ಕಾಲಕಳೆಯಲು ಅನುಕೂಲಕರ ವ್ಯವಸ್ಥೆ ಇರುತ್ತದೆ. ಸಾಮಾನ್ಯವಾಗಿ ಪಾರ್ಕ್ ಅಂದರೆ ಹೇಗಿರುತ್ತದೆ ಎನ್ನುವುದು ನಿಮಗೆ ಗೊತ್ತೇ ಇದೆ. ಆದರೆ ನೀವು ಬಂಡೆ ಉದ್ಯಾನವನವನ್ನು ನೋಡಿದ್ದೀರಾ? ಈ ಬಗ್ಗೆ ಕೇಳಿದ್ದೀರಾ? ಬೆಂಗಳೂರಿನಲ್ಲಿರುವವರು ಈ ಬಂಡೆ ಉದ್ಯಾನವನವನ್ನು ನೋಡಿರಲೂ ಬಹುದು. ಯಾಕೆಂದರೆ ಇದು ಇರುವುದು ಬೆಂಗಳೂರಿನಲ್ಲೇ. ದೇಶದ ಬೇರೆಲ್ಲೂ ಇಂತಹ ಉದ್ಯಾನವನವನ್ನು ಕಾಣಲು ಸಾಧ್ಯವಾಗೋದಿಲ್ಲ. ಹಾಗಾದರೆ ಬನ್ನಿ ಈ ಬಂಡೆ ಪಾರ್ಕ್‌ನ ಬಗ್ಗೆ ಸ್ವಲ್ಪ ತಿಳಿಯೋಣ.

ಎಲ್ಲಿದೆ ಈ ಬಂಡೆ ಉದ್ಯಾನವನ

ಎಲ್ಲಿದೆ ಈ ಬಂಡೆ ಉದ್ಯಾನವನ

PC:oneindia

ಈ ಬಂಡೆ ಉದ್ಯಾನವನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬೊಮ್ಮನಹಳ್ಳಿ ವಾರ್ಡಿನ ದೇವರ ಚಿಕ್ಕನಹಳ್ಳಿಯಲ್ಲಿದೆ. ಡಿಸಿ ಹಳ್ಳಿ ಎಂದೇ ಕರೆಯಲಾಗುವ ದೇವರ ಚಿಕ್ಕನ ಹಳ್ಳಿ ದಕ್ಷಿಣ ಬೆಂಗಳೂರಿನ ಒಂದು ಹಳ್ಳಿ ಯಾಗಿದೆ. ಇದು ಬಿಲೆಕಾಹಳ್ಳಿನಿಂದ ಸ್ವಲ್ಪ ದೂರದಲ್ಲಿರುವ ಬನ್ನೇರುಘಟ್ಟ ರಸ್ತೆಯಲ್ಲಿದೆ. ಈ ಗ್ರಾಮವು ಬನ್ನೇರುಘಟ್ಟ ರಸ್ತೆಯನ್ನು ಬೇಗೂರಿನೊಂದಿಗೆ ಸಂಪರ್ಕಿಸುತ್ತದೆ.

ಚಿಕ್ಕಮಗಳೂರಿನ ತರಿಕೆರೆಯ ಸೌಂದರ್ಯವನ್ನೊಮ್ಮೆ ನೋಡಿಚಿಕ್ಕಮಗಳೂರಿನ ತರಿಕೆರೆಯ ಸೌಂದರ್ಯವನ್ನೊಮ್ಮೆ ನೋಡಿ

ಕಸದ ರಾಶಿಯ ಕೇಂದ್ರವಾಗಿತ್ತು

ಕಸದ ರಾಶಿಯ ಕೇಂದ್ರವಾಗಿತ್ತು

ದೇವರ ಚಿಕ್ಕನ ಹಳ್ಳಿಯಲ್ಲಿನ ಈ ಜಾಗ ಹಿಂದೊಮ್ಮೆ ಕಸದ ರಾಶಿಯ ಕೇಂದ್ರವಾಗಿತ್ತು. ಸ್ಥಾನ ಮತ್ತು ಹಾವು, ಹುಳ ಹುಪ್ಪಡಿಗಳ ಆವಾಸಸ್ಥಾನವಾಗಿತ್ತು. ಇಲ್ಲಿನ ಗಬ್ಬು ವಾಸನೆ ತಡೆಯಲಾರದೇ ಸಾರ್ವಜನಿಕರು ಮೂಗಿಗೆ ಬಟ್ಟೆ ಕಟ್ಟಿಕೊಂಡು ಓಡಾಡುತ್ತಿದ್ದರು. ಆದರೆ ಇದೀಗ ಜನರು ಅಲ್ಲಿಗೆ ಮನಸ್ಸೋಇಚ್ಛೆಯಿಂದ ಹೋಗುವಂತಾಗಿದೆ. ಇಲ್ಲೊಂದು ಅದ್ಭುತ ಉದ್ಯಾನವನವೇ ಸೃಷ್ಠಿಯಾಗಿದೆ.

ಏನಿದರ ವಿಶೇಷ

ಏನಿದರ ವಿಶೇಷ

PC: oneindia
ಇಲ್ಲಿನ ವಿಶೇಷವೆಂದರೆ ಒಂದೂವರೆ ಎಕರೆ ಜಾಗದಲ್ಲಿ ಕೇವಲ ಬಂಡೆಗಳಿಂದಲೇ ಉದ್ಯಾನವನವನ್ನು ನಿರ್ಮಿಸಲಾಗಿದೆ. ಬಂಡೆ ಉದ್ಯಾನವನ ಎಂದಾಕ್ಷಣ ಇಲ್ಲಿ ಗಿಡ ಮರಗಳು ಇಲ್ಲವೆಂದಿಲ್ಲ. ಹಚ್ಚ ಹಸಿರಿನ ಗಿಡಮರಗಳನ್ನೂ ಇಲ್ಲಿ ಬೆಳೆಸಲಾಗಿದೆ. ವಿಶೇಷವಾಗಿ ಮಹಾಬಲಿಪುರದಿಂದ ಕಪ್ಪು ಕಲ್ಲುಗಳನ್ನು ತಂದು ನಿರ್ಮಾಣಮಾಡಲಾಗಿದೆ. ಆರಂಭದಲ್ಲಿ ಬಿಬಿಎಂಪಿ ಲೋಗೋ ಇರುವ ಬಂಡೆ ಎಲ್ಲರನ್ನೂ ಸ್ವಾಗತಿಸಲಿದೆ.

10 ಸಾವಿರ ರೂ.ಗೆ ಐಫೋನ್ ಸಿಗುತ್ತಂತೆ ಇಲ್ಲಿನ ಮಾರ್ಕೇಟ್‌ನಲ್ಲಿ ! 10 ಸಾವಿರ ರೂ.ಗೆ ಐಫೋನ್ ಸಿಗುತ್ತಂತೆ ಇಲ್ಲಿನ ಮಾರ್ಕೇಟ್‌ನಲ್ಲಿ !

 ಫೆನ್ಸಿಂಗ್ ಸಿಸ್ಟಮ್

ಫೆನ್ಸಿಂಗ್ ಸಿಸ್ಟಮ್

PC: oneindia
ಬುದ್ಧನ ಪ್ರತಿಕೃತಿ, ಮಕ್ಕಳಿಗೆ ಮುದ ನೀಡುವ ಹತ್ತು ವಿಧಾನಸೌಧದಲ್ಲಿ ಅಳವಡಿಸಿರುವಂತಹ ಆರ್ನಮೆಂಟಲ್ ಫೆನ್ಸಿಂಗ್ ಸಿಸ್ಟಮ್ ಇಲ್ಲಿ ಅಳವಡಿಸಲಾಗಿದೆ. ಸಂಜೆ ಹೊತ್ತಿನಲ್ಲಿ ಪ್ರತಿಯೊಂದು ಬಂಡೆಯಲ್ಲೂ ಲೈಟ್‌ ಅಳವಡಿಸಲಾಗಿದ್ದು ಸಂಜೆಯಾಗುತ್ತಿದ್ದಂತೆ ಆಕರ್ಷಕ ನೋಟವನ್ನು ನೀಡುತ್ತದೆ.

ಹಲವು ಪ್ರತಿಕೃತಿಗಳು

ಹಲವು ಪ್ರತಿಕೃತಿಗಳು

PC: oneindia
ಇಲ್ಲಿ 12-ಅಡಿ ಎತ್ತರದ ಒಂದು ಬೃಹತ್ ಬುದ್ಧನ ಪ್ರತಿಮೆ ಇದೆ. ಮಕ್ಕಳಿಗೆ ಮುದ ನೀಡುವ ಹಲವಾರು ಪ್ರಾಣಿಗಳ ಪ್ರತಿಕೃತಿಗಳು ಇಲ್ಲಿವೆ. ರೈತರು ವ್ಯವಸಾಯಕ್ಕೆ ಬಳಸುವ ಹಲವಾರು ವಸ್ತುಗಳನ್ನು ಇಲ್ಲಿ ನೋಡಬಹುದಾಗಿದೆ. ಸಂಜೆಯ ಹೊತ್ತಿನಲ್ಲಿ ಕಾಲಕಳೆಯಲು ಸೂಕ್ತವಾದ ತಾಣವಾಗಿದೆ. ನಿಜಕ್ಕೂ ಇದೊಂದು ವಿಭಿನ್ನ ಯೋಜನೆಯಾಗಿದೆ. ನೀವೂ ಫ್ರಿ ಇದ್ದಾಗ ಸಂಜೆಯ ಹೊತ್ತಿನಲ್ಲೋ ಅಥವಾ ವಾರಾಂತ್ಯದ ರಜೆಯಲ್ಲಿ ಈ ಬಂಡೆ ಪಾರ್ಕ್‌ಗೆ ಭೇಟಿ ನೀಡಿ. ಮಕ್ಕಳಿಗಂತೂ ಈ ಪಾರ್ಕ್ ತುಂಬಾನೇ ಇಷ್ಟವಾಗುತ್ತದೆ.

ಗುಂಡ್ಲುಪೇಟೆ ಸುತ್ತಮುತ್ತಲಿನ ಈ ತಾಣಗಳಿಗೊಮ್ಮೆ ಭೇಟಿ ನೀಡಿಗುಂಡ್ಲುಪೇಟೆ ಸುತ್ತಮುತ್ತಲಿನ ಈ ತಾಣಗಳಿಗೊಮ್ಮೆ ಭೇಟಿ ನೀಡಿ

ತಲುಪುವುದು ಹೇಗೆ?

ತಲುಪುವುದು ಹೇಗೆ?

ದೇವರ ಚಿಕ್ಕನ ಹಳ್ಳಿ ಬನ್ನೇರುಘಟ್ಟ ರಸ್ತೆಯಿಂದ ಸುಮಾರು 5 ಕಿ.ಮೀ. ದೂರದಲ್ಲಿದೆ. ಬೆಂಗಳೂರು, ಯೆಲಹಂಕಾ, ಬೊಮ್ಮನಹಳ್ಳಿ, ಕೃಷ್ಣರಾಜಪುರ, ಕೆಂಗೇರಿ, ಹೊಸಕೋಟೆ, ದಾಸರಾಹಳ್ಳಿ, ದೇವನಹಳ್ಳಿ, ಡಾಡ್ ಬಲ್ಲಾಪುರ್, ಮಾಗಡಿ, ನೆಲಮಾಂಗಲ ಬೆಂಗಳೂರಿಗೆ ರಸ್ತೆ ಸಂಪರ್ಕವನ್ನು ಹೊಂದಿರುವ ಬೆಂಗಳೂರು ಮತ್ತು ದೇವರ ಚಿಕ್ಕನಹಳ್ಳಿ ಮುಖ್ಯ ರಸ್ತೆ ಮೂಲಕ ದೇವರ ಚಿಕ್ಕನ ಹಳ್ಳಿಯನ್ನು ತಲುಪಬಹುದು

ಬಸವನಗುಡಿ ದೊಡ್ಡ ಗಣೇಶ

ಬಸವನಗುಡಿ ದೊಡ್ಡ ಗಣೇಶ

PC: Rkrish67
ಬೆಂಗಳೂರಿನಲ್ಲಿರುವ ಹಲವು ಪುರಾತನ ದೇವಾಲಯಗಳ ಪೈಕಿ ಬಸವನಗುಡಿಯ ದೊಡ್ಡ ಗಣೇಶನ ದೇವಾಲಯ ಪ್ರಮುಖವಾದದ್ದು.ಕಹಳೆ ಬಂಡೆ ಅಥವಾ ಬ್ಯೂಗಲ್ ರಾಕ್ ಉದ್ಯಾನಕ್ಕೆ ಹೊಂದಿಕೊಂಡಿರುವ ವಿಶಾಲ ಪ್ರದೇಶದಲ್ಲಿ ದೊಡ್ಡ ಗಣೇಶನ ಸುಂದರ ದೇವಾಲಯವಿದೆ. ಗರ್ಭಗುಡಿಯಲ್ಲಿ ಏಕಶಿಲೆಯಲ್ಲಿ ಕಡೆದ 8 ಅಡಿ ಎತ್ತರ ಹಾಗೂ 12 ಅಡಿ ಅಗಲ ಇರುವ ಸುಂದರವಾದ ಗಣೇಶನ ವಿಗ್ರಹವಿದೆ. ಇದನ್ನು ಸ್ವಯಂಭೂ ಗಣಪ ಎನ್ನಲಾಗುತ್ತದೆ. ಸುಮಾರು 450 ವರ್ಷಗಳಷ್ಟು ಹಳೆಯದಾದ ಈ ದೇವಾಲಯವನ್ನು 1537 ರಲ್ಲಿ ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ಕೆಂಪೇ ಗೌಡರು ನಿರ್ಮಿಸಿದರು ಎನ್ನಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X