Search
  • Follow NativePlanet
Share
» »ಇದು ಬಡವರ ಊಟಿ... ತಪ್ಪದೆ ನೋಡಿ...

ಇದು ಬಡವರ ಊಟಿ... ತಪ್ಪದೆ ನೋಡಿ...

ಬೇಸಿಗೆಯಲ್ಲೂ ಹಸಿರಾಗಿ ಸದಾ ತಂಪಾದ ವಾತಾವರಣ ನೀಡಬಲ್ಲ ಸ್ಥಳವೆಂದರೆ ಸಕಲೇಶಪುರ. ಸುಂದರವಾದ ಬೆಟ್ಟಗಳ ಇಳಿಜಾರು ಹಾಗೂ ಕಾಫಿ ಬೆಳೆಯ ಹಸಿರು ಸಿರಿ ಪ್ರವಾಸಿಗರನ್ನು ಸದಾ ಆಕರ್ಷಿಸುತ್ತದೆ.

By Divya

ಬೇಸಿಗೆಯಲ್ಲೂ ಹಸಿರಾಗಿ ಸದಾ ತಂಪಾದ ವಾತಾವರಣ ನೀಡಬಲ್ಲ ಸ್ಥಳವೆಂದರೆ ಸಕಲೇಶಪುರ. ಸುಂದರವಾದ ಬೆಟ್ಟಗಳ ಇಳಿಜಾರು ಹಾಗೂ ಕಾಫಿ ಬೆಳೆಯ ಹಸಿರು ಸಿರಿ ಪ್ರವಾಸಿಗರನ್ನು ಸದಾ ಆಕರ್ಷಿಸುತ್ತದೆ. ಸುಂದರವಾದ ಗಿರಿಧಾಮಗಳನ್ನು ಒಳಗೊಂಡಿರುವ ಈ ತಾಣಕ್ಕೆ ಬಡವರ ಊಟಿ ಎಂದು ಕರೆಯುತ್ತಾರೆ. ಬೆಂಗಳೂರಿಗೆ ಸಮೀಪವೇ ಇರುವುದರಿಂದ ವಾರದ ರಜೆಯಲ್ಲಿ ಬರಬಹುದು.

ಸಕಲೇಶಪುರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಲೆನಾಡು ಪ್ರದೇಶದ ಒಂದು ಭಾಗವಾಗಿರುವ ಸಕಲೇಶಪುರ ಹಾಸನ ಜಿಲ್ಲೆಯಲ್ಲಿದೆ. ಪಶ್ಚಿಮ ಘಟ್ಟಗಳ ಸಾಲಿನಿಂದ ಆವೃತ್ತವಾದ ಈ ತಾಣ ಸುಂದರ ಅನುಭವವನ್ನು ನೀಡಬಲ್ಲದು. ಬೆಂಗಳೂರಿನಿಂದ 223 ಕಿ.ಮೀ. ವ್ಯಾಪ್ತಿಯಲ್ಲಿರುವ ಈ ಪ್ರದೇಶದಲ್ಲಿ ಏನೆಲ್ಲಾ ನೋಡಬಹುದು ಎಂಬುವುದನ್ನು ತಿಳಿಯೋಣ ಬನ್ನಿ....

ಮಂಜಾರಾಬಾದ್ ಕೋಟೆ
ನಕ್ಷತ್ರಾಕೃತಿಯಲ್ಲಿ ನಿರ್ಮಾಣ ಗೊಂಡ ಈ ಕೋಟೆ ಸುಂದರವಾದ ಐತಿಹಾಸಿಕ ಇತಿಹಾಸವನ್ನು ತೆರೆದಿಡುತ್ತದೆ. ಇದನ್ನು ಟಿಪ್ಪು ಸುಲ್ತಾನನು 1785-1792ರ ಅವಧಿಯಲ್ಲಿ ನಿರ್ಮಿಸಿದ್ದ. ಶಾಂತವಾದ ಪರಿಸರವನ್ನು ಹೊಂದಿರುವ ಈ ತಾಣಕ್ಕೆ ಒಮ್ಮೆ ಭೇಟಿ ನೀಡಲೇಬೇಕು.

One Day Trip to Sakleshpur

A view of Manjarabad Fort
Photo Courtesy: Chandu6119

ಬಿಸ್ಲೆ ವೀಕ್ಷಣ ಸ್ಥಳ
ಬಿಸ್ಲೆ ಹಳ್ಳಿಯ ಬೆಟ್ಟದ ಮೇಲಿರುವ ಒಂದು ಸ್ಥಳ. ಈ ಸ್ಥಳದಲ್ಲಿ ಬಂದು ನಿಂತರೆ ಮೂರು ಬೆಟ್ಟಗಳಾದ ಕುಮಾರ ಪರ್ವತ, ಪುಷ್ಪಗಿರಿ ಮತ್ತು ದೊಡ್ಡ ಬೆಟ್ಟಗಳ ತುದಿಯನ್ನು ನೋಡಬಹುದು. ಬಿಸ್ಲೆ ಬೆಟ್ಟದ ತುದಿಯಲ್ಲಿ ನಿಂತರೆ ಪ್ರಕೃತಿಯ ರಮ್ಯವಾದ ಸೊಬಗನ್ನು ಸೆರೆಹಿಡಿಯಬಹುದು.

One Day Trip to Sakleshpur

Bisle Ghat View
Point Photo Courtesy: Ashwin Kumar

ಸುಂದರ ರೈಲ್ವೆ ಮಾರ್ಗ
ಸಕಲೇಶಪುರದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ ರೈಲ್ವೆ ಮಾರ್ಗವು ದಟ್ಟವಾದ ಪ್ರಕೃತಿ ಸೌಂದರ್ಯವನ್ನು ಒಳಗೊಂಡಿದೆ. ಕಾಡಿನ ಮಧ್ಯೆ ಸಾಗುವ ಈ ಮಾರ್ಗದಲ್ಲಿ ಜಲಧಾರೆಗಳು ಮತ್ತು ಸುರಂಗ ಮಾರ್ಗಗಳು ಸಿಗುತ್ತವೆ. ಈ ದಾರಿಯಲ್ಲಿ ಒಮ್ಮೆ ಸಾಗಿದರೆ ಸುಂದರ ಅನುಭವ ನಮ್ಮದಾಗುತ್ತದೆ.

One Day Trip to Sakleshpur

Green Route Trek
Photo Courtesy: Rahul Nair

ಜೇನುಕಲ್ಲು ಗುಡ್ಡ
ಸಕಲೇಶಪುರದಲ್ಲಿರುವ ಒಂದು ಪುಟ್ಟಗಿರಿಧಾಮ ಇದು. ಭವ್ಯವಾದ ಹಸಿರು ಸಿರಿ ಹಾಗೂ ಗಿರಿಗಳ ಶ್ರೇಣಿಗಳಿರುವುದರಿಂದ ಚಾರಣ ಪ್ರಿಯರಿಗೆ ಸ್ವರ್ಗತಾಣ ಆಗುವುದರಲ್ಲಿ ಸಂದೇಹವಿಲ್ಲ. ಇಲ್ಲಿ ನಯನ ಮನೋಹರವಾದ ಪ್ರಕೃತಿ ದೃಶ್ಯಗಳನ್ನು ಸೆರೆ ಹಿಡಿಯಬಹುದು.

One Day Trip to Sakleshpur

Jenukal Gudda
Photo Courtesy: L. Shamal

ಮಂಜೇ ಹಳ್ಳಿ ಜಲಪಾತ
ಮಳೆಗಾಲದಲ್ಲಿ ನೋಡಲೇ ಬೇಕಾದ ಮನೋಹರ ಜಲಪಾತ ಇದು. ಬೇಸಿಗೆಯಲ್ಲಿ ನೀರಿನ ಹರಿವು ಅಷ್ಟಾಗಿ ಇರುವುದಿಲ್ಲ.

One Day Trip to Sakleshpur

Chestnut-Headed Bee-Eaters at Sakleshpur
Photo Courtesy: shrikant rao

ಬೆಟ್ಟ ಬೈರವೇಶ್ವರ ದೇಗುಲ
ಈ ದೇಗುಲವು ಬೆಟ್ಟದ ತುದಿಯಲ್ಲಿರುವ ಒಂದು ಪವಿತ್ರ ದೇವಸ್ಥಾನ. 600 ವರ್ಷಗಳ ಇತಿಹಾಸ ಹೊಂದಿರುವ ಈ ದೇಗುಲ ಆಕರ್ಷಕ ವಾಸ್ತುಶಿಲ್ಪಗಳಿಂದ ಕೂಡಿದೆ. ಇಲ್ಲಿಂದ ಪರ್ವತಗಳ ಸಾಲನ್ನು ನೋಡುತ್ತಿದ್ದರೆ ಮನಸ್ಸಿಗೊಂದು ನಿರಾಳ ಭಾವ ಉಂಟಾಗುತ್ತದೆ.

ರಕ್ಷಿದಿ ತೋಟ
ಈ ತೋಟವು ಕಾಫಿ ಹಾಗೂ ಮಸಾಲೆ ಬೆಳೆಗಳಿಂದ ಕೂಡಿದೆ. ಹಸಿರಾದ ತೋಟವು ಇಳಿಜಾರಿನ ಆಕಾರದಲ್ಲಿರುವುದನ್ನು ನೋಡುತ್ತಿದ್ದರೆ ಒಂದು ಬಗೆಯ ಖುಷಿಯುಂಟಾಗುತ್ತದೆ. ಈ ತೋಟದ ಸುತ್ತ ಒಮ್ಮೆ ನಡೆದು ಸಾಗಿದರೆ ಸುಂದರ ಅನುಭವ ನಮ್ಮ ಪಾಲಾಗುವುದರಲ್ಲಿ ಸಂದೇಹವಿಲ್ಲ.

ಸಕಲೇಶಪುರ ದೇಗುಲ
ಈ ದೇಗುಲವು ಹೊಯ್ಸಳರ ಕಾಲದ್ದಾಗಿದ್ದು, ಈಶ್ವರನನ್ನು ಆರಾಧಿಸಲಾಗುತ್ತದೆ. ಸೊಗಸಾದ ವಾಸ್ತುಶಿಲ್ಪವು ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತದೆ.

ಸಕಲೇಶಪುರ ತಲುಪುವುದು ಹೇಗೆ?

Read more about: sakleshpur
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X