Search
  • Follow NativePlanet
Share
ಮುಖಪುಟ » ಸ್ಥಳಗಳು» ಯುಸ್ಮಾರ್ಗ್

ಯುಸ್ಮಾರ್ಗ್ - ಹಿತಮಿತ ಬಿಸಿ, ಸಖತ್ ಸ್ನೋಫಾಲ್

6

ಬಡ್ಗಮ್ ಜಿಲ್ಲೆಯಲ್ಲಿರುವ ಯುಸ್ಮಾರ್ಗ್ ಪ್ರಾಕೃತಿಕ ಸೊಬಗಿನ ಭಂಡಾರವಾಗಿದ್ದು, ಶ್ರೀನಗರದಿಂದ ಕೇವಲ 50 ಕಿ.ಮೀ ದೂರದಲ್ಲಿದೆ. ಪೀರ್ ಪಾಂಜಾಲ್ ಪರ್ವತ ಶ್ರೇಣಿಗಳಲ್ಲಿ ನೆಲೆಸಿರುವ ಈ ಪ್ರದೇಶವು ಸಮುದ್ರ ಮಟ್ಟದಿಂದ 7500 ಅಡಿ ಎತ್ತರದಲ್ಲಿದೆ. ಪ್ರಕೃತಿ ಪ್ರಿಯರಿಗೆ ಆದರ್ಶಪ್ರಾಯವಾಗಿರುವ ಈ ಸ್ಥಳವು ತನ್ನ ಸುತ್ತಮುತ್ತಲಿರುವ ಕಣಿವೆಗಳು, ಶೃಂಗಗಳು ಮತ್ತು ಹಸಿರು ಹುಲ್ಲುಗಾವಲುಗಳ ಅದ್ಭುತ ಹಾಗು ವಿಹಂಗಮ ನೋಟಗಳನ್ನು ಒದಗಿಸುತ್ತದೆ. ಪ್ರವಾಸಿಗರು ಇಲ್ಲಿ ಪೋನಿ ರೈಡಿಂಗ್, ಟ್ರೆಕ್ಕಿಂಗ್ ಮತ್ತು ಸ್ಕೀಯಿಂಗ್ ನಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು. ಇಲ್ಲಿಂದ ನಾಲ್ಕು ಕಿ.ಮೀ ದೂರದಲ್ಲಿರುವ ನೀಲ್ನಾಗ್ ಚಾರಣ ಮಾರ್ಗದ ಪ್ರಾರಂಭಿಕ ಹಂತವಾಗಿದೆ.

ಯುಸ್ಮಾರ್ಗ್ ನಲ್ಲಿರುವ ಕೆಲವು ಪ್ರಮುಖ ಆಕರ್ಷಣೆಗಳೆಂದರೆ, ನೀಲ್ನಾಗ್ ಕೆರೆ, ತಾತಾಕುಟಿ ಶಿಖರ ಮತ್ತು ಸಂಗ್-ಎ-ಸಫೇದ್. ತನ್ನಲ್ಲಿಯ ನೀಲ ವರ್ಣದ ನೀರಿನಿಂದಾಗಿ ಹೆಸರುವಾಸಿಯಾಗಿರುವ ನೀಲ್ನಾಗ್ ಕೆರೆಯು ಪ್ರದೇಶದ ಅತ್ಯಂತ ಆಕರ್ಷಕ ಪಿಕ್ನಿಕ್ ತಾಣವಾಗಿದೆ. ಸಮುದ್ರಮಟ್ಟದಿಂದ 15500 ಅಡಿ ಎತ್ತರದಲ್ಲಿ ನೆಲೆಸಿರುವ ತಾತಾಕುಟಿ ಶಿಖರವನ್ನು ಕಾಲ್ನಡಿಗೆಯಲ್ಲಿ ಅಥವಾ ಪೋನಿ ರೈಡ್ ಗಳ ಮೂಲಕವಾಗಿ ತಲುಪಬಹುದಾಗಿದೆ. ಯುಸ್ಮಾರ್ಗ್ ನಲ್ಲಿರುವ ಸಂಗ್ - ಎ - ಸಫೇದ್ ಒಂದು ಅಂಡಾಕಾರದ ಹುಲ್ಲುಗಾವಲಿನ ಪ್ರದೇಶವಾಗಿದ್ದು, ಪಿಕ್ನಿಕ್ ನಂತಹ ಚಟುವಟಿಕೆಗೆ ಆದರ್ಶಮಯವಾದ ಸ್ಥಳವಾಗಿದೆ. ಈ ತಲುಪುವ ಮಾರ್ಗದಲ್ಲಿ ಪ್ರವಾಸಿಗರು ಇನ್ನೆರಡು ಆಕರ್ಷಕ ಹುಲ್ಲುಗಾವಲಿನ ಪ್ರದೇಶಗಳಾದ ಹೈಗಿನ್ ಮತ್ತು ಲಿಡ್ಡರ್ಮಾರ್ ಗಳನ್ನು ಕಾಣಬಹುದು.

ಯುಸ್ಮಾರ್ಗ್ ಅನ್ನು ಸಂಚಾರದ ಮೂರು ಪ್ರಮುಖ ಮಾಧ್ಯಮಗಳಾದ ವಾಯು, ರೈಲು ಮತ್ತು ರಸ್ತೆ ಮಾರ್ಗಗಳ ಮುಖಾಂತರ ಸುಲಭವಾಗಿ ತಲುಪಬಹುದಾಗಿದೆ. ಯುಸ್ಮಾರ್ಗ ಗೆ ಹತ್ತಿರದಲ್ಲಿರುವ ವಾಯುನೆಲೆ ಎಂದರೆ ಶ್ರೀನಗರ ವಿಮಾನ ನಿಲ್ದಾಣ. ಈ ವಿಮಾನ ನಿಲ್ದಾಣವು ಭಾರತದ ಪ್ರಮುಖ ನಗರಗಳದ ಶಿಮ್ಲಾ, ಚಂಡೀಗಢ, ಮುಂಬೈ ಮತ್ತು ದೆಹಲಿಗಳೊಂದಿಗೆ ಉತ್ತಮ ವೈಮಾನಿಕ ಸಂಪರ್ಕವನ್ನು ಹೊಂದಿದೆ. ಇನ್ನು ಇದಕ್ಕೆ ಹತ್ತಿರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆಂದರೆ ದೆಹಲಿ. ಯುಸ್ಮಾರ್ಗ್ ಗೆ ಹತ್ತಿರದಲ್ಲಿರುವ ರೈಲುತುದಿ ಎಂದರೆ ಜಮ್ಮುತಾವಿ. ಅಲ್ಲದೆ, ಶ್ರೀನಗರದಿಂದ ನಿರಂತರವಾದ ಬಸ್ಸುಗಳ ಸಂಚಾರ ಯುಸ್ಮಾರ್ಗಿಗಿದೆ.

ಈ ಪ್ರದೇಶವು ಉಷ್ಣವಲಯದ ವಾತಾವರಣವನ್ನು ಒಳಗೊಂಡಿದೆ. ಮಧ್ಯಮ ಪ್ರಮಾಣದ ಬೇಸಿಗೆ, ಮೈ ಕೊರೆಯುವ ಚಳಿ ಮತ್ತು ಆಗಾಗ್ಗೆ ಮಿತವಾದ ಹಿಮಪಾತವನ್ನೂ ಈ ಸ್ಥಳವು ಅನುಭವಿಸುತ್ತದೆ. ಯುಸ್ಮಾರ್ಗ್ ಗೆ ಭೇಟಿ ನೀಡಲು ಬೇಸಿಗೆ ಸಮಯವಾದ ಮೇ ಯಿಂದ ಅಗಸ್ಟ್ ವರೆಗಿನ ಕಾಲ ಹಾಗು ಚಳಿಗಾಲದ ಸಮಯವಾದ ಅಕ್ಟೊಬರ್ ಹಾಗು ಮಾರ್ಚ್ ಮಧ್ಯದ ಅವಧಿಯು ಪ್ರಶಸ್ತವಾಗಿದೆ.

ಯುಸ್ಮಾರ್ಗ್ ಪ್ರಸಿದ್ಧವಾಗಿದೆ

ಯುಸ್ಮಾರ್ಗ್ ಹವಾಮಾನ

ಉತ್ತಮ ಸಮಯ ಯುಸ್ಮಾರ್ಗ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಯುಸ್ಮಾರ್ಗ್

  • ರಸ್ತೆಯ ಮೂಲಕ
    ಕೇವಲ 47 ಕಿ.ಮೀ ದೂರದಲ್ಲಿರುವ ಶ್ರೀನಗರದಿಂದ ಯುಸ್ಮಾರ್ಗ್ ಗೆ ನಿರಂತರವಾದ ಬಸ್ಸುಗಳ ಸಂಪರ್ಕವಿದೆ. ಇನ್ನು ಶ್ರೀನಗರವನ್ನು ತಲುಪಲು ಪ್ರವಾಸಿಗರು ಪ್ರಮುಖ ತಾಣಗಳಾದ ಲೇಹ್, ದೆಹಲಿ, ಜಮ್ಮು, ಚಂಡೀಗಢ್ ಮತ್ತು ಪಹಲ್ಗಾಮ್ ಗಳಿಂದ ನೆರವಾಗಿ ಬಸ್ಸುಗಳನ್ನು ಪಡೆಯಬಹುದಾಗಿದೆ. ಜಮ್ಮು ಮತ್ತು ಕಾಶ್ಮೀರ ಸ್ಟೇಟ್ ರೋಡ್ ಟ್ರಾನ್ಸ್ಪೋರ್ಟ್ ಕಾರ್ಪೋರೇಷನ್ (J&KSRTC) ನ ಬಸ್ಸುಗಳೂ ಕೂಡ ಶ್ರೀನಗರಕ್ಕೆ ಕಡಿಮೆ ದರಗಳಲ್ಲಿ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಜಮ್ಮುವಿನಲ್ಲಿರುವ ಜಮ್ಮುತಾವಿ ರೈಲು ನಿಲ್ದಾಣವು ಯುಸ್ಮಾರ್ಗ್ ಗೆ ಹತ್ತಿರದಲ್ಲಿರುವ ರೈಲು ತುದಿಯಾಗಿದೆ. ಈ ರೈಲು ನಿಲ್ದಾಣವು ಭಾರತದಲ್ಲಿರುವ ಬೆಂಗಳೂರು, ದೆಹಲಿ ಮತ್ತು ಚೆನ್ನೈ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಸಾಧಿಸುತ್ತದೆ. ನಿಲ್ದಾಣದಿಂದ ಯುಸ್ಮಾರ್ಗ್ ಗೆ ತಲುಪಲು ಟ್ಯಾಕ್ಸಿ ಅಥವಾ ಕ್ಯಾಬ್ ಸುಲಭವಾಗಿ ದೊರೆಯುತ್ತವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಶ್ರೀನಗರ ಏರ್ಪೋರ್ಟ್ ಎಂದೆ ಜನಪ್ರಿಯವಾಗಿರುವ ಶೆಖ್-ಉಲ್-ಅಲಮ್ ವಾಯುನೆಲೆ ಯುಸ್ಮಾರ್ಗ್ ಗೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣ. ಈ ವಿಮಾನ ನಿಲ್ದಾಣವು ಭಾರತದ ಪ್ರಮುಖ ನಗರಗಳದ ಶಿಮ್ಲಾ, ಚಂಡೀಗಢ, ಮುಂಬೈ ಮತ್ತು ದೆಹಲಿಗಳೊಂದಿಗೆ ಉತ್ತಮ ವೈಮಾನಿಕ ಸಂಪರ್ಕವನ್ನು ಹೊಂದಿದೆ. ಇನ್ನು ಇದಕ್ಕೆ ಹತ್ತಿರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆಂದರೆ ದೆಹಲಿ. ಈ ನಿಲ್ದಾಣವು ಶ್ರೀನಗರದಿಂದ 876 ಕಿ.ಮೀ ದೂರದಲ್ಲಿದೆ. ಈ ಎರಡೂ ನಿಲ್ದಾಣಗಳಿಂದ ಯುಸ್ಮಾರ್ಗ್ ಗೆ ತಲುಪಲು ಟ್ಯಾಕ್ಸಿ ಅಥವಾ ಕ್ಯಾಬ್ ಸುಲಭವಾಗಿ ದೊರೆಯುತ್ತವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed