ಯೇರ್ಕಾಡ್ನ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸಲು ಬರುವಂತಹವರ ಪಾಲಿಗೆ ವೇದಿಕೆಯಾಗಿರುವುದು ತಿಪ್ಪರೇರಿ ವೀಕ್ಷಣಾ ತಾಣ. ಈ ಜಾಗದಲ್ಲಿ ನಿಂತುಕೊಂಡರೆ ಯೇರ್ಕಾಡ್ನ ದಕ್ಷಿಣಾಭಿಮುಖವಾದ ಸೌಂದರ್ಯವನ್ನು ಮನಸೋ ಇಚ್ಛೆ ಸವಿಯಬಹುದು. ಪಕ್ಕದಲ್ಲೇ ಇರುವ ಆನೆಯ ದಂತವನ್ನು ಹೋಲುವ ಬಂಡೆಗಳ ಸಾಲು ಸೇರಿದಂತೆ ಗಿರಿಶಿಖರಗಳ ಚಿತ್ರಾತ್ಮಕ ಸೌಂದರ್ಯವನ್ನು ಸವಿಯಲು ಹೇಳಿಮಾಡಿಸಿದ ಜಾಗವೆಂದರೆ ಇದೇ. ಈ ತಾಣದಲ್ಲಿ ಪರಿಶುದ್ಧ ಬಿಳಿಯಾದ ಶಿಲಾಬಂಡೆಗಳಿದ್ದು, ಉಲ್ಕಾಪಾತದಿಂದ ನಿರ್ಮಾಣಗೊಂಡಿವೆ ಎಂದು ನಂಬಲಾಗಿದೆ. ನೆನಪಿನಂಗಳದಲ್ಲಿ ಅಚ್ಚಳಿಯದೇ ಉಳಿಯುವಂತಹ ನೂರಾರು ತಾಣಗಳ ವೀಕ್ಷಣೆಗೆ ಇದೊಂದು ಉತ್ತಮ ವೇದಿಕೆ.