Search
  • Follow NativePlanet
Share
ಮುಖಪುಟ » ಸ್ಥಳಗಳು » ಯಲ್ಲಾಪುರ » ಹವಾಮಾನ

ಯಲ್ಲಾಪುರ ಹವಾಮಾನ

ಮಳೆಗಾಲದ ನಂತರದ  ಮಾಸಗಳಾದ ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಇಲ್ಲಿನ ವಾತಾವರಣವು ಹಿತವಾಗಿರುವುದರಿಂದ ಯಲ್ಲಾಪುರಕ್ಕೆ ಹೋಗಲು ಸೂಕ್ತ ಸಮಯವಾಗಿದೆ.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ): ಬೇಸಿಗೆಯಲ್ಲಿ ಯಲ್ಲಾಪುರವು  ಬಿಸಿಲಿನ ಶಾಖದಿಂದ  ಕೂಡಿರುತ್ತದೆ. ಆಗ ಇಲ್ಲಿನ  ಉಷ್ಣಾಂಶವು ಹಗಲಿನಲ್ಲಿ 40°ಸೆಲ್ಶಿಯಸ್ ತನಕ ಏರಿಕೆ ಕಾಣುತ್ತದೆ ಮತ್ತು ಇರುಳಿನಲ್ಲಿ 22° ಸೆಲ್ಶಿಯಸ್ ತನಕ ಕುಸಿಯುತ್ತದೆ. ಯಲ್ಲಾಪುರಕ್ಕೆ ಪ್ರವಾಸ ಹೊರಡುವವರು ಬೇಸಿಗೆಯ ಈ ಎರಡು ತಿಂಗಳುಗಳ ಕಾಲ ತಮ್ಮ ಯೋಜನೆಯನ್ನು ಮುಂದೂಡುವುದು ಒಳ್ಳೆಯದು. ಇಲ್ಲವಾದರೆ ಬಿಸಿಲ ಬೇಗೆಯಲ್ಲಿ ಬಳಲಬೇಕಾದೀತು.

ಮಳೆಗಾಲ

(ಜೂನ್ ನಿಂದ ಸೆಪ್ಟೆಂಬರ್): ಮಳೆಗಾಲದ ಸಮಯದಲ್ಲಿ ಯಲ್ಲಾಪುರದಲ್ಲಿ ಅತಿ ಹೆಚ್ಚು ಮಳೆಯಾಗುವ ಕಾರಣ, ಪ್ರವಾಸಿಗರು ಇಲ್ಲಿನ ಪ್ರೇಕ್ಷಣಿಯ ಸ್ಥಳಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ಭಾರಿ ವರ್ಷಧಾರೆಯು ಪ್ರವಾಸಿಗರನ್ನು ಹೊರಗೆ ಬರದಂತೆ ತಡೆಯುತ್ತವೆ. ಆಗ ಇಲ್ಲಿನ ಉಷ್ಣಾಂಶವು ಸಹಾ ಭಾರಿ ಮಟ್ಟದಲ್ಲಿ ಕುಸಿಯುವುದರಿಂದ ಪ್ರವಾಸಿಗರು ಈ ಕಾಲದಲ್ಲಿ ಯಲ್ಲಾಪುರಕ್ಕೆ ಭೇಟಿಕೊಡದಿರುವುದು ಉತ್ತಮ.

ಚಳಿಗಾಲ

(ಡಿಸೆಂಬರ್ ನಿಂದ ಫೆಬ್ರವರಿ): ಚಳಿಗಾಲದ ಅವಧಿಯಲ್ಲಿ ಇಲ್ಲಿ ದಾಖಲಾದ ಕನಿಷ್ಟ ಉಷ್ಣಾಂಶ 10°ಸೆಲ್ಶಿಯಸ್ ಆಗಿದ್ದು, ಗರಿಷ್ಟ ಉಷ್ಣಾಂಶವು 22° ಸೆಲ್ಶಿಯಸ್ ಇರುತ್ತದೆ. ಈ ತಂಪಾದ ಕಾಲವು ಪ್ರವಾಸಿಗರಿಗೆ ಇಲ್ಲಿಗೆ ಭೇಟಿ ಕೊಡಲು ಹೇಳಿ ಮಾಡಿಸಿದ ಕಾಲವಾಗಿದೆ.