ಯಲ್ಲಾಪುರಕ್ಕೆ ಭೇಟಿಕೊಡುವ ಪ್ರವಾಸಿಗರು ಸಮಯಾವಕಾಶವಿದ್ದರೆ ಅಲ್ಲಿಗೆ ಸಮೀಪದ ಮಾಗೋಡು ಜಲಪಾತಕ್ಕೆ ಒಮ್ಮೆ ಭೇಟಿಕೊಡಬಹುದು. ಇದು ಯಲ್ಲಾಪುರದಿಂದ 19 ಕಿ.ಮೀ ದೂರದಲ್ಲಿದೆ. ಬೆಡ್ಥಿ ನದಿಯು, ಈ ಜಲಪಾತವನ್ನು ಸೃಷ್ಟಿಸುತ್ತದೆ.
ಈ ಜಲಪಾತವು 650 ಅಡಿಗಳಿಂದ ಎರಡು ಹಂತಗಳಲ್ಲಿ ಧುಮ್ಮಿಕ್ಕುತ್ತದೆ. ಈ ರುದ್ರ ರಮಣೀಯವಾದ ನೋಟವನ್ನು ನೋಡುವುದೆ ಒಂದು ರೋಮಾಂಚನಕಾರಿ ಅನುಭವ. ಪ್ರವಾಸಿಗರು ಈ ಸ್ಥಳವನ್ನು ಸುಲಭವಾಗಿ ಗುರುತಿಸಬಹುದು. ಇದು ಇಲ್ಲಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಜೇನುಕಲ್ಲು ಗುಡ್ಡದ ಸೂರ್ಯಸ್ತಮಾನ ವೀಕ್ಷಣಾ ಸ್ಥಳಕ್ಕೆ ಸಮೀಪದಲ್ಲಿ ಇದೆ. ಪ್ರವಾಸಿಗರು ಮಾಗೋಡು ಜಲಪಾತಕ್ಕೆ ಭೇಟಿಕೊಟ್ಟಾಗ ಅಲ್ಲಿ ಒತ್ತೊತ್ತಾಗಿ ಬೆಳೆದ ದಟ್ಟ ಕಾಡಿನ ಸೌಂದರ್ಯವನ್ನು ಆಸ್ವಾದಿಸಬಹುದು. ಅಲ್ಲದೆ ಪ್ರವಾಸಿಗರು ಇದೇ ಹಾದಿಯಲ್ಲಿ ಕವಡಿಕೆರಿಯೆಂಬ ಸುಂದರವಾದ ಕೆರೆಯನ್ನೂ ವೀಕ್ಷಿಸಬಹುದು. ಈ ತಾಣಕ್ಕೆ ಭೇಟಿಕೊಡಲು ಮಳೆಗಾಲದ ಕಡೆಯ ದಿನಗಳು ಮತ್ತು ಚಳಿಗಾಲದ ಆರಂಭದ ದಿನಗಳು ಸಕಾಲವಾಗಿದೆ.