ಖರ್ಸಲಿ ಗ್ರಾಮವು ಯಮುನೋತ್ರಿಯಿಂದ ಕೇವಲ 1 ಕಿಮೀ ದೂರದಲ್ಲಿದೆ. ಜಂಕಿ ಚಟ್ಟಿಗೆ ಹತ್ತಿರದಲ್ಲಿರುವ ಈ ಪ್ರದೇಶವು ತನ್ನ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಸಮೃದ್ಧ ಹುಲ್ಲುಗಾವಲುಗಳು, ಜಲಪಾತಗಳು ಮತ್ತು ಹಲವು ಬಿಸಿನೀರಿನ ಬುಗ್ಗೆಗಳು ಪ್ರವಾಸಿಗರ ಕಣ್ಮನ ತಣಿಸುತ್ತವೆ. ಅಲ್ಲದೆ ಪ್ರವಾಸಿಗರು ಇಲ್ಲಿ ಮೂರು ಮಹಡಿಯ ಪ್ರಾಚೀನ ದೇವಸ್ಥಾನವನ್ನೂ ಕಾಣಬಹುದು. ಭಗವಾನ ಶಂಕರನ ದೇವಾಲಯವಾದ ಇದು ತನ್ನ ಸುಂದರ ಮರಗೆಲಸ ಮತ್ತು ಕಲ್ಲು ಕೆತ್ತನೆಗೆ ಹೆಸರುವಾಸಿಯಾಗಿದೆ.