ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿರುವ ಬರ್ಕೊಟ್ ಒಂದು ನಗರ ಪಂಚಾಯತ್ ಆಗಿದ್ದು,1220 ಮೀ ಎತ್ತರದಲ್ಲಿದೆ. ಇದು ಯಮುನೋತ್ರಿಯಿಂದ 49 ಕಿಮೀ ದೂರದಲ್ಲಿದೆ. ಪ್ರವಾಸಿಗರು ಇಲ್ಲಿಂದ ಬಂದಾರ್ ಪೂಂಚ್ ಪರ್ವತವನ್ನೊಳಗೊಂಡಂತೆ ಹಿಮಾಲಯ ಶ್ರೇಣಿಯ ಇತರ ಶಿಖರಗಳ ಭವ್ಯ ವೀಕ್ಷಣೆಗಳನ್ನು ಆನಂದಿಸಬಹುದು. ಇಲ್ಲಿಯ ಆಕರ್ಷಣೆಗಳಲ್ಲಿ ಕೆಲವಾದ ಯಮುನಾ ನದಿ, ಸಮೃದ್ಧ ಹಸಿರು ಭೂದೃಶ್ಯ ಮತ್ತು ಸೇಬು ಹಣ್ಣಿನ ತೋಟಗಳು ಯಮುನೋತ್ರಿಯ ಮಾರ್ಗವನ್ನು ಶ್ರೀಮಂತಗೊಳಿಸುವದಲ್ಲದೇ ಅನೇಕ ಪ್ರವಾಸಿಗರ ವಿಶ್ರಾಂತಿ ತಾಣಗಳೂ ಆಗಿವೆ.