ಡೊಯಾಂಗ್ ನದಿಯು ವೊಖಾ ಜಿಲ್ಲೆಯಲ್ಲಿ ವೊಖಾ ನಗರದಿಂದ ಸುಮಾರು 21 ಕಿ.ಮೀ ದೂರದಲ್ಲಿ ಹರಿಯುತ್ತದೆ. ಇದು ಕೇವಲ ವೊಖಾದಲ್ಲಿ ಅಲ್ಲದೆ ನಾಗಾಲ್ಯಾಂಡ್ ನಲ್ಲಿಯೇ ಅತ್ಯಂತ ಮಹತ್ವದ ನದಿಯಾಗಿದೆ. ಇದನ್ನು ಜ಼ು ಅಥವಾ ಜ಼ುಲ್ಲು ಎಂದು ಇಲ್ಲಿನ ಸ್ಥಳೀಯ ಬುಡಕಟ್ಟಿನ ಜನರು ಕರೆಯುತ್ತಾರೆ. ಈ ನದಿಗೆ ಅನೇಕ ಉಪನದಿಗಳೂ ಇವೆ ಅವುಗಳೆಂದರೆ ತ್ಸುಯಿ, ಟುಲ್ಲೋ ಮತ್ತು ತಿಷಿ ಇವುಗಳಲ್ಲಿ ತಿಷಿಯು ಅತ್ಯಂತ ದೊಡ್ಡ ಉಪನದಿಯಾಗಿದೆ. ಇದು ಜಿಲ್ಲೆಯ ಉತ್ತರ ಭಾಗದಲ್ಲಿ ಉಗಮವಾಗುತ್ತಿದ್ದು ನಂತರ ಪೂರ್ವಾಭಿಮುಖವಾಗಿ ಹರಿದು ನಂತರ ಕೊನೆಗೆ ಸಾಜು ನದಿಯನ್ನು ಸೇರುತ್ತದೆ.
ಈ ನದಿಯು ಜಿಲ್ಲೆಯ ನಾನಾ ಭಾಗದ ಜನರಿಗೆ ನೀರಿನ ಮುಖ್ಯ ಮೂಲವಾಗಿದೆ. ಈ ನದಿಯು ತನ್ನ ಮೂಲಕ ತೆಗೆದುಕೊಂಡು ಹೋಗುವ ಮೆಕ್ಕಲು ಮಣ್ಣಿನಿಂದ ಸಾಜು ನದಿಯ ತೀರಗಳ ಭೂಮಿ ಬಹಳ ಫಲವತ್ತಾಗಿದೆ ಇಲ್ಲಿ ತರಕಾರಿ ಮತ್ತು ಬಾಳೆಹಣ್ಣು, ಅನಾನಸು ಮತ್ತು ಪಪ್ಪಾಯಿ ಮುಂತಾದ ಹಣ್ಣುಗಳನ್ನು ಬೆಳೆಯುತ್ತಾರೆ. ಈ ನದಿ ಕಣಿವೆಗಳಲ್ಲಿ ಪ್ರಕೃತಿ ಪ್ರಿಯರು ಇಷ್ಟ ಪಡುವ ಹಲವು ಸ್ಥಳಗಳಿವೆ. ಈ ನದಿಯು ಮುಂದೆ ಜ಼ುನ್ ಹೆಬೆಟೊ ಜಿಲ್ಲೆಯನ್ನು ತಲುಪುತ್ತದೆ ಹಾಗೂ ಮುಂದೆ ಸಾಗಿ ಅಸ್ಸಾಂ ನಲ್ಲಿ ಧನ್ಸಿರಿ ನದಿಯನ್ನು ಸೇರುತ್ತದೆ.