Search
  • Follow NativePlanet
Share
ಮುಖಪುಟ » ಸ್ಥಳಗಳು» ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳ ಪ್ರವಾಸೋದ್ಯಮ : ಕಲೆ, ಸಂಸ್ಕೃತಿ, ಮತ್ತು ಪರಂಪರೆಗಳ ಭೂಮಿ

ಪಶ್ಚಿಮ ಬಂಗಾಳ ರಾಜ್ಯವು ಭಾರತದ ಪೂರ್ವ ಭಾಗದಲ್ಲಿದ್ದು, ಈ ರಾಜ್ಯವು ಉತ್ತರದಲ್ಲಿ ಹಿಮಾಲಯ ಪರ್ವತದಿಂದ ಆರಂಭಗೊಂಡು, ದಕ್ಷಿಣದಲ್ಲಿ ಬಂಗಾಳ ಕೊಲ್ಲಿಯ ಕರಾವಳಿಯವರೆಗೂ ಚಾಚಿಕೊಂಡಿದೆ.  ಒಂದಾನೊಂದು ಕಾಲದಲ್ಲಿ ಪಶ್ಚಿಮ ಬಂಗಾಳವು, ಬ್ರಿಟಿಷ್ ಸಾಮ್ರಾಜ್ಯದ ದೇಶೀಯ ಚಟುವಟಿಕೆಗಳ ಕರಾಳ ಕೇಂದ್ರವಾಗಿದ್ದು, ಇಂದಿಗೂ ಕೂಡ ಬ್ರಿಟಿಷರ ಕಾಲದ ಅಲ್ಪ ಪ್ರಮಾಣದ ಕುರುಹುಗಳು ಇಲ್ಲಿನ ವಾಸ್ತುಶಿಲ್ಪ ಮತ್ತು ಹಳೆಯ ಪಾರಂಪರಿಕ ಕಟ್ಟಡಗಳಲ್ಲಿ ಪ್ರತಿಪಲಿತಗೊಂಡಿವೆ.  ಪಶ್ಚಿಮ ಬಂಗಾಳದ ಪ್ರವಾಸೋದ್ಯಮವು ತನ್ನ ಸಂಸ್ಕೃತಿಯಲ್ಲಿ ಸಾಂಪ್ರದಾಯಿಕ ಮತ್ತು ಆಧುನಿಕತೆಯ ಸಂಗಮವನ್ನು ವ್ಯಾಪಕವಾಗಿ ಹೊಂದಿದ್ದು, ಇತ್ತೀಚಿಗಿನ ಕೆಲವು ವರ್ಷಗಳಿಂದ ಸಾಕಷ್ಟು ಅಭಿವೃದ್ಧಿಯನ್ನು  ಸಾಧಿಸಿದೆ ಮತ್ತು ಅನೇಕ ಪ್ರವಾಸೀ ಆಕರ್ಷಣೆಗಳನ್ನು ಒಳಗೊಂಡಿದೆ.

ಭೌಗೋಳೀಕ ಲಕ್ಷಣಗಳು

ಪಶ್ಚಿಮ ಬಂಗಾಳದ ಮೇಲ್ಮೈ ಲಕ್ಷಣಗಳು ವೈವಿಧ್ಯತೆಯಿಂದ ಕೂಡಿದೆ.  ರಾಜ್ಯದ ಉತ್ತರ ಭಾಗದಲ್ಲಿರುವ ಹಿಮಾಲಯ ಪರ್ವತ ಶ್ರೇಣಿಗಳು ಸ್ಥಳದ ಔನ್ನತ್ಯವನ್ನು ಪ್ರತಿನಿಧಿಸಿದ್ದು, ಈ ಭಾಗದ ರಾಜ್ಯದ ಗಡಿಯನ್ನು ಅಸ್ಸಾಂ ಮತ್ತು ಸಿಕ್ಕಿಂ ರಾಜ್ಯಗಳು ಹಂಚಿಕೊಂಡಿವೆ.  ಅತೀ ವಿಶಾಲವಾದ ಬಯಲು ಸೀಮೆ ಪ್ರದೇಶಗಳು ಪಶ್ಚಿಮ ಬಂಗಾಳದ ಬಹು ಭಾಗವನ್ನು ಆವರಿಸಿದ್ದು ಇದನ್ನನುಸರಿಸಿ, ದಕ್ಷಿಣ ಭಾಗದಲ್ಲಿ ಸುಂದರಬನ್ಸ್  ಮುಖಜಭೂಮಿಯನ್ನು ಹೊಂದಿದೆ.     

ಸುಂದರಬನ್ಸ್  ವಿಶಾಲ ಶ್ರೇಣಿಯ ವನ್ಯಜೀವಿ ಪ್ರವಾಸೀ ತಾಣವಾಗಿದ್ದು, ಬಂಗಾಳದ ತುದಿ ಭಾಗವು ಬಂಗಾಳಕೊಲ್ಲಿಯಲ್ಲಿ ಕೊನೆಗೊಳ್ಳುತ್ತದೆ. ಪಶ್ಚಿಮ ಬಂಗಾಳವು, ಉತ್ತರ ಭಾಗದಲ್ಲಿ  ನೆರೆಯ ರಾಷ್ಟ್ರಗಳಾದ ನೇಪಾಳ ಮತ್ತು ಭೂತಾನ್ ಅನ್ನು ಮತ್ತು ಪೂರ್ವದಲ್ಲಿ ಬಾಂಗ್ಲಾದೇಶ್ ಅನ್ನು ಹೊಂದಿದೆ.  ಇಲ್ಲಿನ ವೈವಿಧ್ಯಮಯವಾದ ಮೇಲ್ಮೈ ಲಕ್ಷಣದ ಕಾರಣದಿಂದಾಗಿ, ಈ ಪ್ರದೇಶವು ಪ್ರವಾಸಿಗರಿಗೆ ಅತ್ಯುತ್ತಮ ರೀತಿಯಲ್ಲಿ ಪ್ರಕೃತಿ ಸೌಂದರ್ಯವನ್ನು ಉಣಬಡಿಸುತ್ತದೆ.

ಕೊಲ್ಕತ್ತಾ - ಮೂರು ಗ್ರಾಮಗಳ ಕಥೆ

ಕಾಲಿಕಟ,  ಗೋಬಿಂದ್ ಪುರ್ ಮತ್ತು ಸುತನುತಿ ಎಂಬ ಈ ಮೂರು ಗ್ರಾಮಗಳನ್ನು  ಒಗ್ಗೂಡಿಸಿ, ಬ್ರಿಟಿಷ್ ಆಡಳಿತಗಾರನಾದ ಜಾಬ್ ಚಮೋಚ್ಕ್ (Job Chamock) ನು ಕಲ್ಕತ್ತಾ ಅಥವಾ ಕೊಲ್ಕತ್ತಾ ಎಂದು ಕರೆಯಲ್ಪಡುವ ಈ ನಗರವನ್ನು ಕಟ್ಟಿದನು.  ರಾಜಧಾನಿ ನಗರವಾದ ಕೊಲ್ಕತ್ತಾ ವು ಹೂಗ್ಲಿ ನದಿಯ ದಂಡೆಯಲ್ಲಿದ್ದು, ಈ ನಗರವು ದೇಶದ ಸಾಂಸ್ಕೃತಿಕ ರಾಜಧಾನಿ ಎಂದೂ ಕರೆಯಲ್ಪಡುತ್ತದೆ.  

ಇದೊಂದು ಅತ್ಯಂತ ಪ್ರಮುಖವಾದ ಪ್ರವಾಸೀ ಕೇಂದ್ರವಾಗಿದ್ದು, "City of joy" ಎಂದು ಉಚಿತವಾಗಿಯೇ ಕರೆಯಲ್ಪಟ್ಟಿದೆ. ಹಲವಾರು ಗಣ್ಯ ವ್ಯಕ್ತಿಗಳಿದ್ದ ಈ ನಗರವು ವಿಕ್ಟೋರಿಯಾ ಸ್ಮಾರಕ, ಭವ್ಯವಾದ ಹೌರಾ ಸೇತುವೆ, ಭಾರತೀಯ ಮ್ಯುಸಿಯಂ, ಅಮೃತಶಿಲೆಯ ಅರಮನೆ, ಕಾಲಿಘಾಟ್ ದೇವಸ್ಥಾನ, ಬಿರ್ಲಾ ತಾರಾಲಯ, ವಿಲಿಯಂ ಕೋಟೆ ಮತ್ತು ಇನ್ನೂ ಅನೇಕ ಮಹತ್ತರವಾದ ಪ್ರವಾಸೀ ಆಕರ್ಷಣೆಗಳನ್ನು ಹೊಂದಿದೆ.  

ಇಲ್ಲಿನ ಪಾರಂಪರಿಕ ಕಟ್ಟಡಗಳು ಮತ್ತು ಸ್ಮಾರಕಗಳು ಬ್ರಿಟಿಷರ ವಾಸ್ತುಶಿಲ್ಪವನ್ನು ಪ್ರತಿನಿಧಿಸಿದರೆ, ಇಲ್ಲಿನ ಹಳೆಯ ಜಮೀಂದಾರ ಬರಿಗಳು ಮತ್ತು ಹವೇಲಿಗಳು ಪಶ್ಚಿಮ ಬಂಗಾಳದ ವಾಸ್ತು ಶೈಲಿಯನ್ನು ಪ್ರತಿನಿಧಿಸುತ್ತವೆ.

ಪಶ್ಚಿಮ ಬಂಗಾಳದ ಕಲೆ ಮತ್ತು ಸಂಸ್ಕೃತಿ

ರಬೀಂದ್ರನಾಥ್ ಠಾಗೋರ್ ರವರ ಪ್ರಸಿದ್ಧ ಸಾಲುಗಳಾದ "ಯಾಕ್ಲಾ ಚಾಲೊ ರೆ" ನಿಂದ ಮೊದಲ್ಗೊಂಡು, ಇಂದು ಅಂತರರಾಷ್ಟ್ರೀಯ ಮಟ್ಟಕ್ಕೆ ಏರುತ್ತಿರುವ ಗಂಧರ್ವಲೋಕದ ಬೌಲ್ ಸಂಗೀತದವರೆಗೆ, ಬಂಗಾಳದ ಕಲೆಯು ವೈವಿಧ್ಯಮಯವಾದ ನೃತ್ಯಗಳು, ಚಿತ್ರಕಲೆಗಳು, ಕೆತ್ತನೆಗಳು ಮತ್ತು ಇತರ ಕಲಾ ಪ್ರಕಾರಗಳನ್ನು ಹೊಂದಿದೆ.  ಬಂಗಾಳೀ ಕಳೆಯ ಸಾoಪ್ರದಾಯಿಕತೆಯು ವಿಶ್ವವ್ಯಾಪಿಯಾಗಿ ಪ್ರಧಾನ ಆಕರ್ಷಣೆಯಾಗಿದೆ.  ಬಂಗಾಳದ ಕೈಮಗ್ಗ ಉತ್ಪನ್ನಗಳು ಮತ್ತು ಬಟ್ಟೆಬರೆಗಳು ತಮ್ಮದೇ ಅದ ಕಥಾನಕವನ್ನು ಹೊಂದಿವೆ.  ಪಶ್ಚಿಮ ಬಂಗಾಳದ ಕಲೆಯನ್ನು ಕಂಡುಕೊಳ್ಳಲು ಶಾoತಿಕೇತನವು ಪ್ರವಾಸಿಗರ ಪ್ರಥಮ ಆಯ್ಕೆಯಾಗಿದೆ.

ಅಡ್ಡಾ ಸಂಸ್ಕೃತಿಯು (Adda culture) ಈ ರಾಜ್ಯದಲ್ಲಿ ವಾಸಿಸುವ ಜನರ ನಿತ್ಯ ಜೀವನದ ನಾಡಿಮಿಡಿತವಾಗಿದೆ.  ಜನರು ಗುಂಪಾಗಿ ಜತೆಗೂಡಿ ಮಾತುಕತೆಯಲ್ಲಿ ತೊಡಗುತ್ತಾರೆ.  ಈ ಗುಂಪುಗಳನ್ನು ಪಶ್ಚಿಮ ಬಂಗಾಳದ ಪ್ರತಿಯೊಂದು ನಗರ ಮತ್ತು ಪಟ್ಟಣಗಳ ಬೀದಿಗಳ ಕ್ರಾಸಿಂಗ್ ಗಳಲ್ಲಿ ಕಾಣಬಹುದು.

ಸಿಹಿಯಿಂದ ಖಾರದವರೆಗೆ - ಪಾಚಕ ಅಡುಗೆಗಳು

ಇಂದು ಬಂಗಾಳಿ ಅಡುಗೆಗಳು ಪ್ರಪಂಚದಾದ್ಯಂತ ಬಾಣಸಿಗರ ಪ್ರಥಮ ಆಯ್ಕೆಯಾಗಿದೆ.  ವೈವಿಧ್ಯತೆಯನ್ನು ಕೇವಲ ಇಲ್ಲಿನ ಮೇಲ್ಮೈ ಲಕ್ಷಣಗಳಲ್ಲಿ ಮಾತ್ರವೇ ಅಲ್ಲ, ಬದಲಾಗಿ ಇಲ್ಲಿನ ಅಡುಗೆಗಳಲ್ಲೂ ಅದನ್ನು ಕಾಣಬಹುದು.  ಮುಘಲೈ (Mughalai) ಅಡುಗೆಗಳಾದ ಬಿರಿಯಾನಿ ಮತ್ತು ಮುಘಲೈ  ಪರೋಟ ಗಳಂತಹ ಬಾಯಲ್ಲಿ ನೀರೂರಿಸುವ ಸವಿಯಾದ ತಿನಿಸುಗಳಿಂದ  ಹಿಡಿದು, ಬಂಗಾಳಿ ಅಡುಗೆಯ ಸಾಂಪ್ರದಾಯಿಕ ಖಾದ್ಯಗಳಾದ ಮಚೆರ್ ಜ್ಹೊಲ್  (Macher Jhol) ಅಥವಾ ಮೀನಿನ ಸಾಂಬಾರ್ ನವರೆಗೂ ಅಡುಗೆ ವೈವಿಧ್ಯಗಳನ್ನು ಕಾಣಬಹುದು.

ಜಾತ್ರೆಗಳು ಮತ್ತು ಹಬ್ಬಗಳು

ಜಾತ್ರೆಗಳು ಅಥವಾ ಮೇಳಗಳು ಮತ್ತು ಹಬ್ಬಗಳು ಪಶ್ಚಿಮ ಬಂಗಾಳದ ಪ್ರವಾಸೋದ್ಯಮದ ಮಹತ್ವದ ಭಾಗಗಳಾಗಿವೆ.  ದುರ್ಗಾ ಪೂಜಾ, ಕಾಳಿ ಪೂಜಾ, ಸರಸ್ವತಿ ಪೂಜಾ, ಲಕ್ಷ್ಮೀ ಪೂಜಾ, ಜಗಧಾತ್ತ್ರಿ ಪೂಜಾ ಗಳು ಪ್ರಸಿದ್ಧವಾದ ಹಬ್ಬಗಳಾಗಿದ್ದು, ಈ ಸಂದರ್ಭದಲ್ಲಿ ಶಕ್ತಿ ಮಾತೆ ಅಥವಾ ಸ್ತ್ರೀ ಶಕ್ತಿಯ ವಿವಿಧ ರೂಪಗಳನ್ನು ಆರಾಧಿಸಲಾಗುತ್ತದೆ.  ಗಂಗಾ ಸಾಗರ ಮೇಳವು ಪ್ರತೀ ವರ್ಷವೂ ಕೂಡ ಸಹಸ್ರಾರು ಭಕ್ತಾದಿಗಳನ್ನು ಆಕರ್ಷಿಸುತ್ತದೆ.  ಆದಾಗ್ಯೂ, ಇಲ್ಲಿನ ವಿಶ್ವ ಸಂಸ್ಕೃತಿಯ ಅಸ್ತಿತ್ವವು, ಎಲ್ಲಾ ವರ್ಗಗಳಿಗೆ, ಜಾತಿಗಳಿಗೆ, ಮತ್ತು ಧರ್ಮಗಳಿಗೆ ಸೇರಿದ ಜನರನ್ನು ಒಗ್ಗೂಡಿಸುತ್ತದೆ ಹಾಗೂ ಇವರೆಲ್ಲರೂ ಕೂಡಿ ಎಲ್ಲಾ ಹಬ್ಬಗಳನ್ನೂ ಸಹ ಏಕತೆರನಾದ ಉತ್ಸಾಹದಿಂದ ಆಚರಿಸುತ್ತಾರೆ.

ಪಶ್ಚಿಮ ಬಂಗಾಳದ ಪ್ರವಾಸೋದ್ಯಮ 

ಪಶ್ಚಿಮ ಬಂಗಾಳದ ಪ್ರವಾಸೋದ್ಯವು ನಿಮ್ಮನ್ನು ಬೆರಗಾಗಿಸುವಂತಹ ಪ್ರಾಚೀನತೆ ಮತ್ತು ಅರ್ವಾಚೀನತೆಗಳ ಸಮ್ಮಿಶ್ರಣದ ರೋಚಕ   ಪ್ರಪಂಚವನ್ನು ನಿಮ್ಮ ಮುಂದೆ ತೆರೆದಿಡುತ್ತದೆ.  ಸುಂದರ್ ಬನ್ಸ್, ಬಕ್ಖಲಿ, ಮೂರ್ತಿ, ಬಿರ್ಭುಮ್ ನಂತಹ ವನ್ಯ ಜೇವಿಗಳ ಅದ್ಭುತ ಲೋಕ, ತಾರಾಪೀಠನಲ್ಲಿಯ ಧಾರ್ಮಿಕ ಬಾಗುವಿಕೆ ಅಥವಾ ನಮನ, ಪ್ರಕೃತಿ ಸೌಂದರ್ಯದ ರೋಮಾಂಚನವನ್ನು ಅನುಭವಿಸುತ್ತಾ ಡಾರ್ಜಲಿಂಗ್ ಮತ್ತು ಮೊಂಗ್ಪೊಂಗ್  ಗಳ ಮೂಲಕ ಸಾಗುವ ಪಯಣ, ಕೊಲ್ಕತ್ತಾ, ಮುರ್ಷಿದಾಬಾದ್, ಮತ್ತು ಶಾಂತಿನಿಕೇತನ್ ಗಳಿಗೊಂದು ಪಾರಂಪರಿಕ ಭೇಟಿ; ಅಂತೂ ಪಶ್ಚಿಮ ಬಂಗಾಳದ ಪ್ರವಾಸವು ರೋಮಾಂಚಕಾರಿಯಾಗಿರುವುದರಲ್ಲಿ ಸಂದೇಹವೇ ಇಲ್ಲ.

ಪಶ್ಚಿಮ ಬಂಗಾಳದ ಹವಾಮಾನ

ಪಶ್ಚಿಮ ಬಂಗಾಳದ ಹವಾಮಾನವು ದಕ್ಷಿಣದಲ್ಲಿ ಉಷ್ಣವಲಯದ ಸ್ವರೂಪವನ್ನು ಹೊಂದಿದ್ದು ಉತ್ತರದಲ್ಲಿ ಉಪಉಷ್ಣವಲಯದ ಹವಾಮಾನ ಪರಿಸ್ಥಿತಿಯನ್ನು ಹೊಂದಿದೆ.  ಈ ರಾಜ್ಯವು ನಾಲ್ಕು ಪ್ರತ್ಯೇಕ ಕಾಲಾವಧಿಗಳನ್ನು ಹೊಂದಿದ್ದು, ಬೇಸಿಗೆಗಳು ಬಿಸಿ ಮತ್ತು ತೇವವಾಗಿಯೂ ಮತ್ತು ಚಳಿಗಾಲವು ತಂಪಾಗಿಯೂ ಇರುತ್ತದೆ.  ಮಳೆಯ ಸ್ವರೂಪವು ರಾಜ್ಯಾದ್ಯಂತ ವಿಭಿನ್ನತೆಯಿಂದ ಕೂಡಿರುತ್ತದೆ.       

ಪಶ್ಚಿಮ ಬಂಗಾಳ ಸ್ಥಳಗಳು

  • ಕೊಲ್ಕತ್ತಾ 82
  • ಸಿಲಿಗುರಿ 15
  • ಮುಕುಟಮಣಿಪುರ 7
  • ದುರ್ಗಾಪುರ 24
  • ಹಲ್ದಿಯಾ 4
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat