ವಾರಂಗಲ್ ತಾರಾಲಯ ಅಥವಾ ಪ್ರತಾಪರುದ್ರ ತಾರಾಲಯ ವಾರಂಗಲ್ ನಲ್ಲಿದ್ದು ಇಲ್ಲಿನ ಜನತೆಯಲ್ಲಿ ಖಗೋಳಶಾಸ್ತ್ರದ ಬಗ್ಗೆ ಜಾಗೃತಿ ಮುಡಿಸುವ ನಿಟ್ಟಿನಲ್ಲಿ ಕಟ್ಟಲಾಗಿದೆ. ಇಲ್ಲಿ ನಿಯಮಿತವಾಗಿ ಆಯೋಜಿಸಲಾಗುವ ಪ್ರದರ್ಶನಗಳು ಶೈಕ್ಷಣಿಕ ಜಾಗೃತಿ ಮೂಡಿಸುವ ಜೊತೆ ಜೊತೆಗೆ ಜಾಗತಿಕ ಆಗುಹೋಗುಗಳ ಬಗ್ಗೆ ಬೆಳಕು ಚೆಲ್ಲುತ್ತದೆ.
ವಾರಂಗಲ್ ತಾರಾಲಯ ಜನರಲ್ಲಿ ಅದರಲ್ಲೂ ಮುಖ್ಯವಾಗಿ ಯುವಜನತೆಯಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಹೆಚ್ಚಿಸುವ ಗುರಿ ಹೊಂದಿದೆ. ಸುಡುವ ಬೇಸಗೆಯ ಮಧ್ಯಾಹ್ನದ ಸಮಯದಲ್ಲಿ ತಾರಾಲಯಕ್ಕೊಂದು ಭೇಟಿ ಬಿಸಿಯನ್ನೂ ಕಡಿಮೆಗೊಳಿಸುವ ಜೊತೆಗೆ ಇಲ್ಲಿ ಆಯೋಜಿಸಲಾಗುವ ಪ್ರದರ್ಶನಗಳು ನಿಮ್ಮನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತವೆ.