ವಂಕಾನೇರ್ ನ ರಾಜರು ಕಲೆ, ವಾಸ್ತುಶಿಲ್ಪ ಮತ್ತು ನಿರ್ಮಾಣದ ಬಗ್ಗೆ ಯಾವ ಅದಮ್ಯ ಆಸಕ್ತಿ ಹೊಂದಿದ್ದರು ಎನ್ನುವುದು ವಂಕಾನೇರ್ ನಲ್ಲಿರುವ ರಂಜಿತ್ ವಿಲಾಸ್ ಅರಮನೆ ನೋಡಿದಾಗ ತಿಳಿದುಬರುತ್ತದೆ. 1907ರಲ್ಲಿ ಮಹಾರಾಜ ಅಮರ್ ಸಿಂಗ್ ಜೀ ಅವರು ವಿನ್ಯಾಸಗೊಳಿಸಿರುವ ಅರಮನೆಯು ವಿವಿಧ ವಾಸ್ತುಶಿಲ್ಪ ಶೈಲಿಯ ಮಿಶ್ರಣ. ಬೆಟ್ಟದ ತುದಿಯಲ್ಲಿರುವ ಈ ಭವ್ಯ ಅರಮನೆಯಿಂದ ವಂಕಾನೇರ್ ನಗರದ ಸೌಂದರ್ಯವನ್ನು ನೋಡಬಹುದಾಗಿದೆ.
ಗೋಥಿಕ್ ಕಮಾನುಗಳು, ಮೊಘಲ್ ಗುಮ್ಮಟ ಹೊಂದಿರುವ ಗಡಿಯಾರ ಗೋಪುರ, ಫ್ರಾನ್ಕೊ-ಇಟಾಲಿಯನ್ ವಿಂಡೋ ಫಲಕಗಳು, ಓರಿಯಂಟಲ್ ಅಮೃತಶಿಲೆ ಬಾಲ್ಕನಿ ಹಾಗೂ ಇತರ ಸೌಂದರ್ಯಗಳನ್ನು ತೋರಿಸುತ್ತದೆ. ಅರಮನೆಯಲ್ಲಿ ರಾಜಮನೆತನದ ಕುಟುಂಬಿಕರು ಇದ್ದಾರೆ. ಇದರ ಒಂದು ಭಾಗದಲ್ಲಿ ಮೇರುಕೃತಿಗಳು, ಶಸ್ತ್ರಾಸ್ತ್ರ ಮತ್ತು ಹಸ್ತಕೃತಿಗಳನ್ನು ಒಳಗೊಂಡಿರುವ ಮ್ಯೂಸಿಯಂ ಸಾರ್ವಜನಿಕರಿಗೆ ಯಾವಾಗಲೂ ತೆರೆದಿರುತ್ತದೆ.