Search
  • Follow NativePlanet
Share
ಮುಖಪುಟ » ಸ್ಥಳಗಳು» ವಂಕಾನೇರ್

ವಂಕಾನೇರ್ : ರಾಜಮನೆತನ ವಾಸ್ತುಶಿಲ್ಪಗಳ ಆಕರ್ಷಣೆ

5

ವಂಕಾನೇರ್ ಗೆ ಆ ಪ್ರದೇಶದಿಂದಾಗಿಯೇ ಅದರ ಹೆಸರು ಬಂದಿದೆ. ಇದು ಒಂದು ಬಗ್ಗಿದ ಅಥವಾ `ನೇರ್' ನ `ವಂಕಾ' ಅಥವಾ ಮಚ್ಚು ನದಿಯ ನೀರಿನಲ್ಲಿದೆ. ವಂಕಾನೇರ್ ಜಹಾಲ ರಾಜಪುತರ ಆಡಳಿತದಲ್ಲಿದ್ದ ರಾಜಾಡಳಿತದ ಪ್ರದೇಶವಾಗಿದ್ದ ಹಿನ್ನೆಲೆಯಲ್ಲಿ ಇದನ್ನು ಜಹಾಲ್ವಾರ್ ಎಂದೂ ಕರೆಯಲಾಗುತ್ತದೆ. ರಾಜಾಡಳಿತದ ವೇಳೆ ವಂಕಾನೇರ್ ತುಂಬಾ ಆಯೋಜಿತಗೊಂಡು ಅಭಿವೃದ್ದಿಯಾಗಲು ಮಹಾರಾಣದ ಪ್ರಭು ಅಮರ್ ಸಿಂಗ್ ಜೀ ಕಾರಣ.

ಅಮರ್ ಸಿಂಗ್ ಜೀ ಅವರು ಕಲೆ ಮತ್ತು ವಾಸ್ತುಶಿಲ್ಪಕ್ಕೆ ತುಂಬಾ ಪ್ರೋತ್ಸಾಹ ನೀಡುತ್ತಿದ್ದರು. ಇಂದು ರಾಜಮನೆತನದವರು ಇರುವ ರಂಜಿತ್ ವಿಲಾಸ್ ಅರಮನೆಯನ್ನು ಎಚ್. ಎಚ್. ಅಮರ್ ಸಿಂಗ್ ಜೀ ಅವರು ನಿರ್ಮಿಸಿದ್ದರು. ಈ ಅರಮನೆಯು ಎರಡು ಭಿನ್ನ ವಾಸ್ತುಶಿಲ್ಪ ಶೈಲಿಯನ್ನು ಒಳಗೊಂಡಿದೆ. ಗೋಥಿಕ್ ಕಮಾನುಗಳು ಹಾಗೂ ಲಂಬಸಾಲುಗಳು, ಓರಿಯಂಟಲ್ ಅಮೃತಶಿಲೆ ಬಾಲ್ಕನಿ, ಮೊಘಲ್ ಗುಮ್ಮಟ ಹೊಂದಿರುವ ಗಡಿಯಾರ ಗೋಪುರ, ಫ್ರಾನ್ಕೊ-ಇಟಾಲಿಯನ್ ವಿಂಡೋ ಫಲಕಗಳು ವಿಶ್ವದ ಎಲ್ಲಾ ಮೂಲೆಗಳ ಅತ್ಯುತ್ತಮವಾದದ್ದನ್ನು ಒಂದು ಕಡೆ ಸೇರಿಸಿದರೆ ಹೇಗಾಗುತ್ತದೆ ಎನ್ನುವುದಕ್ಕೆ ಒಳ್ಳೆಯ ಉದಾಹರಣೆ.

ಈ ಅರಮನೆಯಲ್ಲಿ ವಾಹನಗಳ ಅಪೂರ್ಣ ಸಂಗ್ರಹವಿದೆ. ರಾಯಲ್ ಓಯಸಿಸ್ ಬೇಸಿಗೆ ಕಾಲದಲ್ಲಿ ಮಹಾರಾಜ ದಿನ ಕಳೆಯುತ್ತಿದ್ದ ಅರಮನೆ. ಮಚ್ಚು ಸರೋವರದ ಸಮೀಪದಲ್ಲೇ ಇರುವ ರಾಯಲ್ ಓಯಸಿಸ್ ನ ಒಳಾಂಗಣದಲ್ಲಿರುವ ಕೊಳವನ್ನು ಕಲಾತ್ಮಕ ಅಲಂಕರಣಗಳಿಂದ ಶೃಂಗರಿಸಲಾಗಿದೆ. ರಾಜಮನೆತನದ ಅರಮನೆ ಮತ್ತು ರಾಯಲ್ ಓಯಸಿಸ್ ಇಂದು ಗುಜರಾತ್ ಸರ್ಕಾರದಡಿಯಲ್ಲಿ ಪಾರಂಪರಿಕ ಹೋಟೆಲ್ ಗಳಾಗಿ ಮಾರ್ಪಟ್ಟಿವೆ. ವಂಕಾನೇರ್ ನಲ್ಲಿರುವ ಈ ಎಲ್ಲಾ ವಾಸ್ತುಶಿಲ್ಪ ಅದ್ಭುತಗಳು ರಾಜಮನೆತನದ ವೈಭವ ಮತ್ತು ಭವ್ಯತೆಯ ಪ್ರತಿಫಲನವಾಗಿದೆ.

ವಂಕಾನೇರ್ ಪ್ರಸಿದ್ಧವಾಗಿದೆ

ವಂಕಾನೇರ್ ಹವಾಮಾನ

ಉತ್ತಮ ಸಮಯ ವಂಕಾನೇರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ವಂಕಾನೇರ್

  • ರಸ್ತೆಯ ಮೂಲಕ
    ವಂಕಾನೇರ್ ರಾಜ್ ಕೋಟ್ ಗೆ ತುಂಬಾ ಹತ್ತಿರದಲ್ಲಿದೆ. ಗುಜರಾತ್ ರಾಜ್ಯ ಹೆದ್ದಾರಿ ಹಾಗೂ ರಾಜ್ ಕೋಟ್ ಮತ್ತು ಗುಜರಾತ್ ನ ಇತರ ನಗರಗಳಲ್ಲಿ ಸಾರಿಗೆ ಸೌಲಭ್ಯವನ್ನು ನೀಡುವ ಗುಜರಾತ್ ರಾಜ್ಯ ಸಾರಿಗೆ ಸಂಸ್ಥೆ ಬಸ್ ಗಳು ರಾಜ್ ಕೋಟ್ ಗೆ ರಾಜ್ಯದ ಇತರ ಭಾಗಗಳನ್ನು ಸಂಪರ್ಕಿಸುತ್ತದೆ. ರಾಜ್ಯದ ಒಳಗಡೆ ಮತ್ತು ಇತರ ರಾಜ್ಯಗಳಿಗೆ ಸಂಪರ್ಕವನ್ನು ಕಲ್ಪಿಸುವಂತಹ ಖಾಸಗಿ ಬಸ್ ಗಳಿವೆ. ರಾಜ್ ಕೋಟ್ ಮಹಾನಗರ ಪಾಲಿಕೆಯಿಂದ ನಗರದಲ್ಲಿ ಸಿಎನ್ ಜಿ ಬಸ್ ಗಳು ಓಡಾಡುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ವಂಕಾನೇರ್ ರೈಲು ನಿಲ್ದಾಣವು ಅಹ್ಮದಾಬಾದ್-ರಾಜ್ ಕೋಟ್ ಮಾರ್ಗದಲ್ಲಿದೆ. ರಾಜ್ ಕೋಟ್ ಜಂಕ್ಷನ್ ರಾಷ್ಟ್ರದ ಎಲ್ಲಾ ಭಾಗಗಳನ್ನು ರೈಲು ಮೂಲಕ ಸಂಪರ್ಕಿಸುತ್ತದೆ. ರಾಜ್ಯದ ಒಳಗಡೆ ಮತ್ತು ಹೊರಗಡೆ ಹಲವಾರು ಎಕ್ಸ್ ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳು ಲಭ್ಯವಿದೆ. ದೆಹಲಿ, ಮುಂಬಯಿ, ಕೊಲ್ಕತ್ತಾ, ಚೆನ್ನೈ ಮತ್ತು ಇತರ ಎಲ್ಲಾ ಪ್ರಮುಖ ನಗರಗಳಿಗೆ ರಾಜ್ ಕೋಟ್ ನಿಂದ ರೈಲು ಸೇವೆಯಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ನಗರದಿಂದ ಕೆಲವೇ ಕಿ.ಮೀ. ದೂರದಲ್ಲಿರುವ ರಾಜ್ ಕೋಟ್ ವಿಮಾನ ನಿಲ್ದಾಣವು ದೇಶೀಯ ವಿಮಾನ ನಿಲ್ದಾಣವಾಗಿದ್ದು, ಗುಜರಾತ್ ಮತ್ತು ಭಾರತದ ಇತರ ನಗರಗಳನ್ನು ಸಂಪರ್ಕಿಸುತ್ತದೆ. ರಾಜ್ ಕೋಟ್ ನಿಂದ ಮುಂಬಯಿಗೆ ಜೆಟ್ ಏರ್ ವೇಸ್ ಮತ್ತು ಏರ್ ಇಂಡಿಯಾದ ವಿಮಾನಗಳಿವೆ. ಅಹ್ಮದಾಬಾದ್ ಗೆ ನಿಗದಿತ ವಿಮಾನಗಳಿವೆ ಮತ್ತು ಭಾವನಗರಕ್ಕೆ ಸೇವೆ ನೀಡುವ ಸಾಧ್ಯತೆಯಿದೆ. ಬೆಂಗಳೂರಿನಿಂದ ರಾಜ್ ಕೋಟ್ ಗೆ ಜೆಟ್ ಏರ್ ಲೈನ್ಸ್ ನ ವಿಮಾನಗಳಿವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed