ಕೃಷ್ಣಾ ನದಿಯಲ್ಲಿ ಭವಾನಿ ದ್ವೀಪವನ್ನು ಕಾಣಬಹುದಾಗಿದ್ದು ಇದು ಸುಮಾರು 130 ಎಕರೆ ಪ್ರದೇಶದಷ್ಟು ವ್ಯಾಪಿಸಿದೆ. ಭವಾನಿ ದ್ವೀಪವು ಪ್ರಕಾಶಂ ಅಣೆಕಟ್ಟಿನ ಸಾಮಿಪ್ಯದಲ್ಲಿಯೇ ಇದ್ದು ಇಲ್ಲಿನ ಸೊಬಗನ್ನು ವರ್ಣಿಸುವುದೇ ಅಸಾಧ್ಯ. ಇದು ಕೃಷ್ಣಾ ನದಿಯ ಅತೀ ದೊಡ್ಡ ದ್ವೀಪವಾಗಿದೆ. ಇದೊಂದು ಸಮಯ ಕಳೆಯುವುದಕ್ಕೆ ಉತ್ತಮ ಸ್ತಳವಾಗಿದ್ದು ಮೂಲಭೂತ ಸೌಕರ್ಯಗಳನ್ನು ಹೊಂದಿದ್ದು ಈಜುಕೊಳ ಹಾಗೂ ಬೋಟಿಂಗ್ ವ್ಯವಸ್ಥೆಯಿದೆ.
ಆಂಧ್ರ ಪ್ರದೇಶದ ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆಯು ಈ ಸ್ಥಳವನ್ನು ಚೆನ್ನಾಗಿ ನಿರ್ವಹಿಸುತ್ತಿದ್ದು, ಪ್ರವಾಸಿಗರಿಗಾಗಿ ದುರ್ಗಾ ಘಾಟ್ ನಲ್ಲಿ ಬೋಟಿಂಗ್ ವ್ಯವಸ್ಥೆಯನ್ನೂ ಒದಗಿಸಿದೆ. ಅಲ್ಲದೇ ಈ ದ್ವೀಪದಲ್ಲಿ ಸಾಹಸ ಕ್ರೀಡೆ ಹಾಗೂ ಜಲ ಕ್ರೀಡೆಗಳಿಗೂ ಅವಕಾಶ ಕಲ್ಪಿಸಲಾಗಿದೆ. ಪ್ರವಾಸಕ್ಕೆ ಯೋಗ್ಯವಾದ ಸ್ಥಳ ಇದಾಗಿದ್ದು ನಿಮ್ಮ ಮೋಜಿನ ಸಮಯವನ್ನು ಇಲ್ಲಿ ಕಳೆಯಬಹುದು.