Search
  • Follow NativePlanet
Share
ಮುಖಪುಟ » ಸ್ಥಳಗಳು» ವಿಜಯವಾಡಾ

ವಿಜಯವಾಡಾ : ಮಾವು ಮತ್ತು ಸಿಹಿಯ ತಾಣ

35

ಭಾರತದಲ್ಲಿನ ಪ್ರತಿಯೊಂದು ರಾಜ್ಯಗಳೂ ಒಂದಿಲ್ಲೊಂದು ಕ್ಷೇತ್ರಗಳಲ್ಲಿ ವೈಶಿಷ್ಟ್ಯತೆಗಳನ್ನು ಹೊಂದಿದೆ. ಇದರಿಂದಾಗಿ ದೇಶ ವಿದೇಶಗಳಿಂದ ಪ್ರವಾಸಿಗರನ್ನು ಹೆಚ್ಚೆಚ್ಚು ಆಕರ್ಷಿಸುತ್ತವೆ. ನಮ್ಮ ದೇಶದ ಆಂಧ್ರ ಪ್ರದೇಶ ರಾಜ್ಯವೂ ಇದಕ್ಕೆ ಹೊರತಲ್ಲ. ಇಲ್ಲಿ ಹಲವಾರು ಧಾರ್ಮಿಕ ಸ್ಥಳಗಳು ಐತಿಹಾಸಿಕ ಸ್ಮಾರಕಗಳು ನೋಡುಗರ ಮನ ಸೆಳೆಯುತ್ತವೆ. ಅದರಲ್ಲೂ ಅಣೆಕಟ್ಟಿನ ಭಾಗದಲ್ಲಿ ನಿರ್ಮಾಣವಾದ ಸರೋವರ. ಕೃಷ್ಣಾ ನದಿಯಲ್ಲಿರುವ ದ್ವೀಪ ಹಾಗೂ ಅಲ್ಲಿನ ಬೋಟಿಂಗ್ ಮೊದಲಾದ ಕ್ರೀಡೆಗಳು ಪ್ರವಾಸಿಗರ ಮನಸ್ಸಿಗೆ ಮುದ ನೀಡುತ್ತವೆ. ಜೊತೆಗೆ ಇಲ್ಲಿನ ಮಾವಿನ ಸವಿಯನ್ನು ಸವಿದವನೆ ಬಲ್ಲ! ಇಂತಹ ಕಣ್ಣಿಗೆ ತಂಪೆರೆಯುವ, ಮನಸ್ಸಿಗೆ ಉಲ್ಲಾಸ ನೀಡುವ ಆಂಧ್ರ ಪ್ರದೇಶದ ಪ್ರಮುಖ ನಗರಗಳಲ್ಲೊಂದಾದ ವಿಜಯವಾಡಕ್ಕೆ ಪ್ರವಾಸಕ್ಕಾಗಿ ಒಮ್ಮೆಯಾದರೂ ಭೇಟಿ ನೀಡಲೇಬೇಕು. ಇಲ್ಲಿನ ಪ್ರಕೃತಿ ಸೌಂದರ್ಯದ ಒಂದೊಂದು ನೋಟವೂ ವಿಭಿನ್ನವೇ. ಈ ಸೊಬಗನ್ನು ಇಲ್ಲಿಗೆ ಬಂದೇ ಅನುಭವಿಸಬೇಕು. ನಿಮ್ಮ ಮುಂದಿನ ರಜಾ ದಿನಗಳನ್ನು ವಿಜಯವಾಡದಲ್ಲಿ ಕಳೆಯಲು ವಿಜಯವಾಡದ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ವಿಜಯವಾಡ ಆಂಧ್ರ ಪ್ರದೇಶ ರಾಜ್ಯದ, ಕೃಷ್ಣ ಜಿಲ್ಲೆಯಲ್ಲಿದೆ. ಈ ಜಿಲ್ಲೆಯು ಆಂಧ್ರ ಪ್ರದೇಶ ರಾಜ್ಯದಲ್ಲಿಯೇ ಮೂರನೇಯ ಮುಖ್ಯ ಪಟ್ಟಣವಾಗಿದೆ. ವಿಜಯವಾಡ ಮೂರು ದಿಕ್ಕುಗಳಲ್ಲಿ ನೀರಿನಿಂದ ಆವೃತವಾಗಿದ್ದು ನಾಲ್ಕನೇ ಬದಿಯಲ್ಲಿ ಪರ್ವತವನ್ನು ಹೊಂದಿದೆ. ಒಟ್ಟಿನಲ್ಲಿ ವಿಜಯವಾಡವು ಒಂದು ಅದ್ಭುತ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರಾಗಿದೆ.  ಈ ಪಟ್ಟಣವು ನಗರದ  ದಕ್ಷಿಣಕ್ಕೆ ಸಾಗುವ ಕೃಷ್ಣ ನದಿಯ ದಡದಲ್ಲಿದೆ,  ವಿಜಯವಾಡದ ಪೂರ್ವಕ್ಕೆ ಬಂಗಾಳ ಕೊಲ್ಲಿ ಇದೆ ಹಾಗೂ ಪಶ್ಚಿಮಕ್ಕೆ ಇಂದ್ರಕೀಲಾದ್ರಿ ಪರ್ವತವಿದೆ. ನಗರದ ಹೊರವಲಯದಲ್ಲಿ, ಪಶ್ಚಿಮಕ್ಕೆ ಸಮೃದ್ಧ ಹಸಿರಿನ ತಾಜಾತನವನ್ನು ಹೊಂದಿರುವ ಕೊಂಡಪಲ್ಲಿ ಮೀಸಲು ಅರಣ್ಯವಿದೆ. ವಿಜಯವಾಡ ಈ ಪದದ ಅರ್ಥ ’ವಿಜಯದ ಭೂಮಿ’ ಎಂಬುದು. ನಂತರ ಈ ಪಟ್ಟಣದ ನಗರ ದೇವತೆ ಕನಕ ದುರ್ಗ, ವಿಜಯ ಎಂದು ಕರೆಯಲ್ವಡುವ ಅದೇ ಹೆಸರಿನಿಂದ ಕರೆಯಲಾಗುತ್ತದೆ. ಈ ಪಟ್ಟಣವು ಬಿಜವಾಡ ಎಂದೂ ಕೂಡ ಕರೆಯಲ್ಪಟ್ಟಿದೆ. ಈ ಹೆಸರನ್ನು ಹಿಂದೆ ಕರೆಯಲಾಗುತ್ತಿತ್ತು. ಈಗ ವಿಜಯವಾಡ ಎಂದೇ ಹೇಳಲಾಗುತ್ತದೆ. ವಿಜಯವಾಡ ದೇಶದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುವ ತಾಣಗಳಲ್ಲಿ ಒಂದು. ಈ ಪಟ್ಟಣವು ಇಲ್ಲಿನ ರಸಪೂರಿತ ಮಾವಿನ ಹಣ್ಣಿಗೆ ಹೆಸರುವಾಸಿಯಾಗಿದೆ. ಇಲ್ಲಿ ಹಲವಾರು ಅಪರೂಪದ ಸಿಹಿ ಭಕ್ಷ್ಯಗಳು ದೊರೆಯುತ್ತವೆ. ಇಂದು ವಿಜಯವಾಡವು ಆಂಧ್ರ ಪ್ರದೇಶದ ವ್ಯಾಪಾರ ಹಾಗೂ ವಾಣಿಜ್ಯ ಕೇಂದ್ರವಾಗಿದೆ. ಅಲ್ಲದೇ ಕೆಲವು ಪ್ರಮುಖ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳನ್ನೂ ಈ ನಗರದಲ್ಲಿ ಕಾಣಬಹುದು. ವಿಜಯವಾಡವು ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದು ಎನಿಸಿಕೊಂಡಿದೆ. ಅಲ್ಲದೇ ಮೆಕಿನ್ಸೆ ಕ್ವಾರ್ಟರ್ಲಿ ಪ್ರಕಾರ ಭವಿಷ್ಯದಲ್ಲಿ ವಿಜಯವಾಡವು ಗ್ಲೋಬಲ್ ಸಿಟಿ ಎಂದು ಗುರುತಿಸಿಕೊಳ್ಳುವುದರಲ್ಲಿ ಎರಡು ಮಾತಿಲ್ಲ!

ಇತಿಹಾಸದತ್ತ ಒಂದು ನೋಟ

ವಿಜಯವಾಡ ನಗರವು ಅನೇಕ ರಾಜವಂಶಗಳಾದ ಓರಿಸ್ಸಾದ ಗಜಪತಿಗಳು (ಗಜಪತೀಸ್)ನಿಂದ ಹಿಡಿದು 19ನೇ ಶತಮಾನದಲ್ಲಿ ಪೂರ್ವ ಚಾಲುಕ್ಯರೂ ಹಾಗೂ ವಿಜಯನಗರದ ಪ್ರಬಲ ರಾಜ ಕೃಷ್ಣ ದೇವರಾಯರಿಂದ ಹಲವಾರು ಏರಿಳಿತಗಳನ್ನು ಕಂಡಿದೆ. ವಿಜಯವಾಡ ನಗರದ ಹೆಸರನ್ನು ಪುರಾಣಗಳಲ್ಲಿ ಇತಿಹಾಸ ಪುಟಗಳಲ್ಲಿ ಉಲ್ಲೇಖಿಸಲಾಗಿದೆ. ಮಹಾಭಾರತದ ಮಹಾನ್ ಯೋಧ  ಅರ್ಜುನನನ್ನು ಶಿವನು ಇಂದ್ರಕೀಲಾದರಿ ಪರ್ವತದ ಮೇಲೆ ಹರಸಿದನು ಎಂದು ನಂಬಲಾಗಿದೆ. ಇನ್ನೊಂದು ಐತಿಹಾಸಿಕ ನಂಬುಗೆಯ ಪ್ರಕಾರ ರಾಕ್ಷಸನಾದ ಮಹಿಷಾಸುರ ಸಂಹಾರ ಮಾಡಿದ ನಂತರ ದೇವತೆ ದುರ್ಗಾ ಈ ಸ್ಥಳದಲ್ಲಿ ಬಂದು ನೆಲೆಸಿದಳು ಆಗಿನಿಂದ ಈ ನಗರಕ್ಕೆ ವಿಜಯವಾಡ ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ.  ಇನ್ನೊಂದು ನಂಬುಗೆಯ ಪ್ರಕಾರ, ದೇವತೆ ಕೃಷ್ಣೆಯ ಬೇಡಿಕೆಯ ಮೇರೆಗೆ, ಅರ್ಜುನನು ಪರ್ವತವನ್ನು ಇಬ್ಭಾಗಮಾಡಿ ಕೃಷ್ಣ ನದಿಯನ್ನು ಬಂಗಾಳ ಕೊಲ್ಲಿಗೆ ಸೇರುವಂತೆ ಮಾಡಿದನು ನಂತರ ವಿಜಯವಾಡ ಎಂಬ ಹೆಸರು ಬಂತು ಎಂದೂ ಕೂಡಾ ಹೇಳಲಾಗುತ್ತದೆ. ಬ್ರಿಟೀಷರು ಇಲ್ಲಿನ ಉಷ್ಣ ಹವಾಮಾನಕ್ಕೆ ತಕ್ಕಂತೆ ಬ್ಚಾಜಿವಾಡ ಎಂದೂ ಕರೆದಿದ್ದರು.

ವಿಜಯವಾಡದ ಪ್ರಮುಖ ಸ್ಥಳಗಳು

ವಿಜಯವಾಡ ನಗರವು ಹಲವಾರು ಅದ್ಭುತವಾದ ದೃಶ್ಯಗಳನ್ನು ಒಳಗೊಂಡಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿ ಹಲವಾರು ಧಾರ್ಮಿಕ ಸ್ಥಳಗಳಿದ್ದು, ಕನಕ ದುರ್ಗ ದೇವಾಲಯ, ದಕ್ಷಿಣ ಭಾರತದ ಅತ್ಯಂತ ಹಳೆಯ ವೈಷ್ಣವ ದೇವಾಲಯಗಳಲ್ಲೊಂದಾದ ಮಂಗಳಗಿರಿ, ಅಮರಾವತಿಯಲ್ಲಿರುವ ಅಮರೇಶ್ವರ ಎಂದು ಕರೆಯಲ್ವಡುವ ಶಿವ ದೇವಾಲಯ, ಗುನಾಡಲ ಮಾತಾ ಪುಣ್ಯ ಕ್ಷೇತ್ರ ಅಥವಾ ಸೇಂಟ್ ಮ್ಯಾರಿಸ್ ಚರ್ಚ್ ನ್ನು ಕಾಣಬಹುದು. ಮೊಗಲರಜಪುರಂ ಗುಹೆಗಳು, ಉಂಡವಲೈ ಗುಹೆಗಳು, ಗಾಂಧಿ ಬೆಟ್ಟದಲ್ಲಿರುವ ಗಾಂಧಿ ಸ್ಥೂಪ, ಕೊಂಡಪಲೈ ಕೋಟೆ, ಭವಾನಿ ದ್ವೀಪ, ಹಾಗೂ ರಾಜೀವ್ ಗಾಂಧಿ ಉದ್ಯಾನವನ ಇವೆಲ್ಲವೂ ಪ್ರವಾಸಿಗರು ನೋಡಲೇಬೇಕಾದ ಸ್ಥಳ. ನದಿಗೆ ಅಡ್ಡಲಾಗಿ ನಿರ್ಮಿಸಲಾದ ಪ್ರಕಾಶಂ ಅಣೆಕಟ್ಟು ಒಂದು ಸುಂದರ ಸರೋವರವನ್ನು ಸೃಷ್ಟಿಸಿದೆ. ಇಂತಹ ಸಕಲ ಸೌಂದರ್ಯವನ್ನೂ ಸವಿಯಬೇಕಾದರೆ ವಿಜಯವಾಡಕ್ಕೊಮ್ಮೆ ಭೇಟಿ ನೀಡಲೇ ಬೇಕು.

ನಗರಕ್ಕೆ ಭೇಟಿ

ವಿಜಯವಾಡ ವಿಮಾನ ನಿಲ್ದಾಣವು ನಗರದಿಂದ 20 ಕೀ.ಮಿ ಅಂತರದಲ್ಲಿ ಗನ್ನವರಂ ಎಂಬಲ್ಲಿ ನಿರ್ಮಾಣವಾಗಿದೆ. ಇಲ್ಲಿಂದ ಹೈದ್ರಾಬಾದ್ ಹಾಗೂ ವಿಶಾಖಪಟ್ಟಣಕ್ಕೆ ಪ್ರತಿ ದಿನ ವಿಮಾನ ಹಾರಾಟದ ವ್ಯವಸ್ಥೆ ಇದೆ. ಹೈದ್ರಾಬಾದ್ ಗೆ ತಲುಪಿ ಅಲ್ಲಿಂದ ಅಂತಾರಾಷ್ಟ್ರೀಯ ವಿಮಾನ ಸೌಲಭ್ಯ ಕಲ್ಪಿಸಲಾಗಿದೆ. ವಿಜಯವಾಡ ರೈಲ್ವೆ ನಿಲ್ದಾಣದಿಂದ ಭಾರತದ ಪ್ರಮುಖ ನಗರಗಳಿಗೆ ರೈಲ್ವೆ ಸೌಲಭ್ಯವಿದೆ. ಭಾರತದ ದಕ್ಷಿಣ ಹಾಗೂ ಪ್ರಮುಖ ಸ್ಥಳಗಳಿಗೆ ತಲುಪುವಂತೆ ವಿಜಯವಾಡದಿಂದ ಉತ್ತಮವಾದ ರಸ್ತೆ ಸೌಕರ್ಯವೂ ಇದೆ. ವಿಜಯವಾಡಕ್ಕೆ ಭೇಟಿ ನೀಡಲು ಉತ್ತಮವಾದ ಸಮಯವೆಂದರೆ ಅಕ್ಟೋಬರ್ ತಿಂಗಳಿನಿಂದ ಮಾರ್ಚ್ ತಿಂಗಳು. ಈ ಸಮಯದಲ್ಲಿ ಆಗತಾನೇ ಮಳೆಗಾಲವು ಮುಗಿದಿರುವುದರಿಂದ ವಾತಾವರಣವೂ ತಂಪಾಗಿರುತ್ತದೆ. ಈ ತಿಂಗಳುಗಳಲ್ಲಿ ಡೆಕ್ಕನ್ ಉತ್ಸವ, ಲುಂಬಿನಿ ಹಬ್ಬ. ದಸರಾ ಹಾಗೂ ದೀಪಾವಳಿ ಹಬ್ಬಗಳು ಅತ್ಯಂತ ವಿಜ್ರಂಭಣೆಯಿಂದ ಜರುಗುವುದರಿಂದ ಈ ಸಮಯದಲ್ಲಿ ವಿಜಯವಾಡಕ್ಕೆ ಪ್ರವಾಸಕ್ಕೆ ಬಂದರೆ ಮನಸ್ಸಿಗೆ ಖುಷಿ ಸಿಗುತ್ತದೆ.

ವಿಜಯವಾಡಾ ಪ್ರಸಿದ್ಧವಾಗಿದೆ

ವಿಜಯವಾಡಾ ಹವಾಮಾನ

ಉತ್ತಮ ಸಮಯ ವಿಜಯವಾಡಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ವಿಜಯವಾಡಾ

  • ರಸ್ತೆಯ ಮೂಲಕ
    ಎ.ಪಿ.ಎಸ್.ಆರ್.ಟಿ.ಸಿ (ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ರಾಜ್ಯದ ವಿವಿಧ ನಗರಗಳಿಗೆ ವಿಜಯವಾಡಾದಿಂದ ಸಂಪರ್ಕ ಕಲ್ಪಿಸುತ್ತದೆ. ಅಲ್ಲದೇ ಪ್ರತಿ ದಿನ ಹೈದ್ರಾಬಾದ್, ವಿಶಾಖ ಪಟ್ಟಣ ಬೆಂಗಳೂರು ಮುಂಬೈ ಮೊದಲಾದ ಪ್ರಮುಖ ನಗರಗಳಿಗೆ ಖಾಸಗಿ ಬಸ್ ಸೇವೆಯೂ ಇದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ವಿಜಯವಾಡಾ ನಗರವು ಆಂಧ್ರ ಪ್ರದೇಶದ ಒಂದು ಪ್ರಮುಖ ರೈಲ್ವೆ ನಿಲ್ದಾಣ. ಈ ನಿಲ್ದಾಣವು ದೆಹಲಿ, ಮುಂಬೈ, ಕೋಲ್ಕತಾ, ಚೆನೈ ಮತ್ತು ಬೆಂಗಳೂರು ಮೊದಲಾದ ಪ್ರಮುಖ ನಗರಗಳೂ ಸೇರಿದಂತೆ ಭಾರತದ ಎಲ್ಲಾ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ವಿಜಯವಾಡಾದಿಂದ 20 ಕೀ.ಮಿ ದೂರದಲ್ಲಿ ಗನ್ನವರಂ ವಿಮಾನ ನಿಲ್ದಾಣವಿದೆ. ಇಲ್ಲಿಂದ ವಿಶಾಖಪಟ್ಟಣ ಹಾಗೂ ಹೈದ್ರಾಬಾದ್ ನಗರಗಳಿಗೆ ವಿಮಾನ ಸೌಲಭ್ಯವಿದೆ. ಅಲ್ಲದೇ ಹೈದ್ರಾಬಾದ್ ನಿಂದ ದೇಶ ವಿದೇಶಗಳಿಗೆ ವಿಮಾನ ಸೌಲಭ್ಯವಿದೆ. ಗನ್ನವರಂ ನಿಂದ ವಿಜಯವಾಡಾಕ್ಕೆ ಸಾಕಷ್ಟು ಟ್ಯಾಕ್ಸಿಗಳು ದೊರೆಯುತ್ತವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed