ಸೋಲ ಕಂಬಿ ದೇವಾಲಯವು ಗುಪ್ತರ ಕಾಲಕ್ಕೆ ಸೇರಿದ್ದು. ಇದು ಕುರ್ವಾರಿಯ ಬದೊಹದಲ್ಲಿದೆ. ಇಲ್ಲಿನ ಕೊಳದ ಉತ್ತರ ಭಾಗದಲ್ಲಿ ಈ ದೇವಾಲಯವು ನಿಶ್ಯಬ್ಧವಾಗಿ ನಿಂತಂತೆ ಭಾಸವಾಗುತ್ತದೆ. ಈ ದೇವಾಲಯವು ಸಮತಟ್ಟಾದ ಛಾವಣಿ ಮತ್ತು ಹದಿನಾರು ಕಂಬಗಳನ್ನು ಹೊಂದಿರುವುದರಿಂದ ಸೋಲ ಕಂಬಿ ಎಂದು ಹೆಸರು ಪಡೆದಿದೆ. ಈ ದೇವಾಲಯವು 8 ಅಡಿ ಎತ್ತರದಲ್ಲಿದ್ದು ಇದರ ಬುನಾದಿ 1.5 ಅಡಿಯಷ್ಟಿದೆ. ದಶಾವತಾರ ದೇಗುಲ ಮತ್ತು ಸತ್-ಮಧಿ ದೇಗುಲಗಳು ಇದರ ಸನಿಹದಲ್ಲಿರುವುದರಿಂದ ಪ್ರವಾಸಿಗರು ಇಲ್ಲಿಗೂ ಭೇಟಿ ನೀಡಬಹುದು.