ಇದು ವಿಷ್ಣುವಿನ ದೇವಾಲಯಗಳ ಸಮೂಹ. ಪ್ರತೀ ದೇವಾಲಯವು ವಿಷ್ಣುವಿನ ಒಂದೊಂದು ಅವತಾರಕ್ಕೆ ಮೀಸಲಾಗಿದೆ. ಸ್ಥಳೀಯವಾಗಿ ಇದನ್ನು ಸಾಧವತಾರ ದೇವಾಲಯ ಎಂದು ಕರೆಯುತ್ತಾರೆ. ಇದು ವಿದಿಶಾದ ಕುರವಾಯಿಯ ಬದೊಹದಲ್ಲಿನ ಕೊಳದ ಉತ್ತರ ಭಾಗದಲ್ಲಿದೆ. ಇಲ್ಲಿನ ಪ್ರಾಕೃತಿಕ ಸೌಂದರ್ಯ ನೋಡಲು ತಕ್ಕದುದಾಗಿದೆ. ಈ ದೇವಾಲಯಗಳು ಕ್ರಿಪೂ 8-10ನೇ ಶತಮಾನದ ನಡುವೆ ನಿರ್ಮಾಣಗೊಂಡಿವೆ. ಇಲ್ಲಿನ ಕೊಳದ ಪಶ್ಚಿಮ ಭಾಗದಲ್ಲಿ ಹಲವು ಸತಿ ಕಂಬಗಳ ಅವಶೇಷಗಳಿವೆ. ಇಲ್ಲಿನ ಕಂಬವೊಂದರ ನಾಲ್ಕೂ ಕಡೆ ಕೆತ್ತನೆಗಳಿದೆ. ಈ ಕೆತ್ತನೆಯಲ್ಲಿ ಹರ-ಗೌರಿಯರು ನೃತ್ಯಗಾರರು ಮತ್ತು ಸಂಗೀತಗಾರರೊಂದಿಗೆ ಕೂತಿರುವಂತೆ ಚಿತ್ರಿಸಲಾಗಿದೆ. ಇಲ್ಲೊಂದು ಪುರುಷ ವಿಗ್ರಹ ಕೂಡ ಇದ್ದು ಕೈಗಳೆರಡನ್ನೂ ಮೇಲಕ್ಕೆತ್ತಿ ಭಕ್ತಿ ಪರವಶನಾಗಿ ನಿಂತ ಭಂಗಿಯಲ್ಲಿದೆ.