Search
  • Follow NativePlanet
Share
ಮುಖಪುಟ » ಸ್ಥಳಗಳು» ವಿದಿಶಾ

ವಿದಿಶಾ : ವೈಭವಯುತ ಸ್ಮಾರಕಗಳ ಊರು

30

ವಿದಿಶಾ ಅಥವ ಭಿಲ್ಸಾ ಹಾಗೆಂದು ಮಧ್ಯಕಾಲೀನ ಯುಗದಲ್ಲಿ ಈ ನಗರವನ್ನು ಕರೆಯಲಾಗುತ್ತಿತ್ತು. ಇದು ಐತಿಹಾಸಿಕ ಮಹತ್ವ ಪಡೆದ ಪುರಾತನ ಸ್ಮಾರಕಗಳ ನಗರ. ಪುರಾತನ ಪಟ್ಟಣವಾದ ಬೆಸನಗರ ಮತ್ತು ಉದಯಗಿರಿ ಗುಹೆಗಳು ಗುಪ್ತರ ಆಳ್ವಿಕೆಯ ವೈಭವಕ್ಕೆ ಉದಾಹರಣೆಯಾಗಿದೆ. ಈ ನಗರವು ಮಧ್ಯಪ್ರದೇಶದಲ್ಲಿದೆ. ಈ ರಾಜ್ಯದ ರಾಜಧಾನಿ ಭೋಪಾಲಕ್ಕೆ ಹತ್ತಿರದಲ್ಲಿದೆ. 2600 ವರ್ಷಗಳ ಹಿಂದೆ ವಿದಿಶಾ ಮುಖ್ಯ ವ್ಯಾಪಾರಿ ಕೇಂದ್ರವಾಗಿತ್ತು ಎಂಬುದು ಇತಿಹಾಸವನ್ನು ನೋಡಿದಾಗ ತಿಳಿದುಬರುತ್ತದೆ. ನೀವು ಹೈಸ್ಕೂಲಿನ ಪಠ್ಯಪುಸ್ತಕಗಳಲ್ಲಿ ಓದಿರುವ ಚಕ್ರವರ್ತಿ ಅಶೋಕ ಹಲವು ಸಾವಿರ ವರ್ಷಗಳ ಹಿಂದೆ ಈ ನಗರವನ್ನು ಆಳಿದ್ದ. ಈ ನಗರಕ್ಕೆ ನೀವು ಬಂದಾಗ ಅಶೋಕ ಎಂಬ ಹಿಂದಿ ಚಿತ್ರದಲ್ಲಿ ಶಾರುಖ್ ಖಾನ್ ಬಿಳಿ ಕುದುರೆಯ ಮೇಲೆ ಈ ನಗರದ ಬೀದಿಗಳಲ್ಲಿ ಸುತ್ತುತ್ತಿರುವ ದೃಶ್ಯ ನೆನಪಾಗಬಹುದು.

ಸುತ್ತಮುತ್ತಲ ಪ್ರವಾಸಿ ತಾಣಗಳು

ಪ್ರವಾಸೋದ್ಯಮ ಈ ನಗರದ ಮುಖ್ಯ ಆರ್ಥಿಕ ಚಟುವಟಿಕೆ. ವಿದಿಶಾ ಪ್ರವಾಸೋದ್ಯಮವು ಹಲವು ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವದ ಸ್ಥಳಗನ್ನು ಹೊಂದಿದೆ. ಇಲ್ಲಿ ಹಲವು ಮುಖ್ಯ ಶಿಲ್ಪಗಳು ಹಾಗೂ ಶಾಸನಗಳು, ಪಾಳುಬಿದ್ದ ಸ್ಮಾರಕಗಳು ಹಾಗೂ ಪುರಾತತ್ವ ಮಹತ್ವದ ಸ್ಥಳಗಳಿವೆ. ಇಲ್ಲಿನ ಕೆಲವು ಮುಖ್ಯ ದೇವಾಲಯಗಳೆಂದರೆ ಗಿರಿಧಾರಿ ದೇವಸ್ಥಾನ, ಉದಯೇಶ್ವರ ದೇವಾಲಯ, ದಶಾವತಾರ ದೇವಾಲಯ, ಮಾಲಾದೇವಿ ದೇವಾಲಯ, ಬಿಜರಾಮಠ ದೇವಾಲಯ, ಗಡಾರ್ಮಲ್ ದೇವಾಲಯ ಮತ್ತು ಸೋಲಾ-ಕಂಬಿ ದೇವಾಲಯ.

ಬಿಜಮಂಡಲ್ ಇಲ್ಲಿನ ಬಹುಮುಖ್ಯ ಹಾಳುಬಿದ್ದ ಸ್ಮಾರಕ. ಇದನ್ನು ಔರಂಗಜೇಬನು 1682 ರಲ್ಲಿ ಹಾಳುಮಾಡಿದನು.  ಸಿರೊಂಜ್ ಎನ್ನುವುದು ಇಲ್ಲಿನ ಪ್ರಸಿದ್ಧ ಜೈನ ಯಾತ್ರಾ ಸ್ಥಳ. ಇನ್ನೊಂದು ಬಹುಮುಖ್ಯ ಸ್ಥಳ ಹೆಲಿಯೊಡೊರಸ್ ಪಿಲ್ಲರ್ ಇದನ್ನು ಖಂಬಾ ಬಾಬಾ ಎಂದು ಕೂಡ ಕರೆಯುತ್ತಾರೆ. ಉದಯಗಿರಿಯ ಗುಹೆಗಳು ವಿದಿಶಾದ ಮತ್ತೊಂದು ಪ್ರಮುಖ ಆಕರ್ಷಣೆ. ಗ್ಯಾರಸಪುರದಲ್ಲಿನ ಶಾಲಭಂಜಿಕೆಯ ವಿಗ್ರಹ ಇಲ್ಲಿನ ಮತ್ತೊಂದು ಆಕರ್ಷಣೆ. ಲೊಹಾಂಗಿ ಪಿರ್ ಮತ್ತು ಹಿಂದೋಳ ತೋರಣ ವಿದಿಶಾದ ಐತಿಹಾಸಿಕ ಮಹತ್ವದ ಸ್ಥಳಗಳು. ಕ್ರಿಪೂ 155ರ ಜೈನ ಚಿತ್ರಗಳನ್ನು ಧರಂಪುರದಲ್ಲಿ ನೋಡಬಹುದು.

ತಲುಪುವುದು ಹೇಗೆ?

ವಿದಿಶಾಕ್ಕೆ ವಾಯು, ರೈಲು ಮತ್ತು ರಸ್ತೆ ಮಾರ್ಗದ ಮೂಲಕ ಸುಲಭವಾಗಿ ತಲುಪಬಹುದು. ಭೋಪಾಲದಲ್ಲಿರುವ ರಾಜ ಭೋಜ ವಿಮಾನನಿಲ್ದಾಣವು ಇಲ್ಲಿಗೆ ಸಮೀಪದ ನಿಲ್ದಾಣ. ವಿದಿಶಾದಲ್ಲಿ ರೈಲು ನಿಲ್ದಾಣವಿದೆ.

ಪ್ರವಾಸಕ್ಕೆ ಸೂಕ್ತ ಸಮಯ

ವಿದಿಶಾಕ್ಕೆ ಮಳೆಗಾಲ ಮತ್ತು ಚಳಿಗಾಲಗಳಲ್ಲಿ ಭೇಟಿ ನೀಡಬಹುದು. ಈ ಸಮಯಗಳಲ್ಲಿ ವಾತಾವರಣವು ಆಹ್ಲಾದಕರವಾಗಿ ಮತ್ತು ಸುಂದರವಾಗಿರುತ್ತದೆ. ಆದರೂ ಚಳಿಗಾಲದಲ್ಲಿ ಅಂದರೆ ಅಕ್ಟೋಬರ್-ಮಾರ್ಚ್ ಮಧ್ಯದ ಸಮಯ ಪ್ರವಾಸಕ್ಕೆ ಸೂಕ್ತ ಸಮಯ.

ವಿದಿಶಾ ಪ್ರಸಿದ್ಧವಾಗಿದೆ

ವಿದಿಶಾ ಹವಾಮಾನ

ಉತ್ತಮ ಸಮಯ ವಿದಿಶಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ವಿದಿಶಾ

  • ರಸ್ತೆಯ ಮೂಲಕ
    ವಿದಿಶಾ ಸುತ್ತಲ ಎಲ್ಲ ನಗರಗಳೊಂದಿಗೆ ರಸ್ತೆ ಸಂಪರ್ಕ ಹೊಂದಿದೆ. ಇಲ್ಲಿ ಟ್ಯಾಕ್ಸಿ ಸೌಲಭ್ಯ ಮತ್ತು ಸರಕಾರದ ಮತ್ತು ಖಾಸಗಿ ಬಸ್ಸುಗಳ ಸೌಲಭ್ಯವಿದೆ. ಭೋಪಾಲದಿಂದ ನಿಯಮಿತ ಬಸ್ ಸಂಚಾರವಿದೆ. ಬಸ್ಸುಗಳು ಉದಯಪುರದಿಂದ ವಿದಿಶಾಗೆ ಕೂಡ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ವಿದಿಶಾದಲ್ಲಿ ರೈಲ್ವೇ ನಿಲ್ದಾಣವಿದೆ. ದೆಹಲಿ-ಚೆನೈ ಮಾರ್ಗದಲ್ಲಿನ ಮುಖ್ಯ ನಿಲ್ದಾಣವಿದು. ಈ ನಿಲ್ದಾಣವು ಭಾರತದ ಎಲ್ಲ ಮುಖ್ಯ ನಿಲ್ದಾಣಗಳೊಂದಿಗೆ ಸಂಪರ್ಕ ಹೊಂದಿದೆ. ವಿದಿಶಾ ಮತ್ತು ಭೋಪಾಲದ ನಡುವೆ ನಿಯಮಿತ ರೈಲು ಸಂಚಾರವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಭೋಪಾಲದ ರಾಜ ಭೋಜ ವಿಮಾನ ನಿಲ್ದಾಣವು ಇಲ್ಲಿಗೆ ಸಮೀಪದಲ್ಲಿದೆ. ಈ ನಿಲ್ದಾಣವು ದೆಹಲಿ, ಮುಂಬೈ, ಗ್ವಾಲಿಯರ್ ಮತ್ತು ಇಂದೋರ್ಗಳೊಂದಿಗೆ ಸಂಪರ್ಕ ಹೊಂದಿದೆ. ದುಬೈ ಮತ್ತು ಷಾರ್ಜಗಳೊಂದಿಗೆ ಕೂಡ ಈ ನಿಲ್ದಾಣ ಸಂಪರ್ಕ ಹೊಂದಿದೆ. ವಿದಿಶಾ ವಿಮಾನನಿಲ್ದಾಣದಿಂದ 56ಕಿಮೀ ದೂರದಲ್ಲಿದೆ. ಟ್ಯಾಕ್ಸಿ ಬಾಡಿಗೆ ಸುಮಾರು 1500 ರೂಗಳಷ್ಟಾಗುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri