ಫ್ರೆಂಚ್ ಬಂಗಲೆ ಫ್ರೆಂಚ್ ಕ್ಯಾಸಲ್ ಎಂದೂ ಕರೆಯಲ್ಪಡುತ್ತದೆ ಇದು ಇಲ್ಲಿನ ಮತ್ತೊಂದು ಪ್ರಸಿದ್ಧ ಪ್ರವಾಸಿ ಸ್ಥಳ. ಈ ಕಟ್ಟಡದ ನಿರ್ಮಾಣದ ಹಿಂದೆ ಒಂದು ಪ್ರಣಯ ಪ್ರಸಂಗವೂ ಇದೆ. ಇದನ್ನು ಮೈಸೂರಿನ ರಾಜ ಶ್ರೀನಿವಾಸ ಐಯ್ಯರ್ ಕಟ್ಟಿಸಿದನು ಹಾಗೂ ಇದನ್ನು ಇಂದಿಗೂ ಮೈಸೂರಿನ ರಾಜ ಮನೆತನದವರೇ ನಿರ್ವಹಿಸುತ್ತಿದ್ದಾರೆ. ರಾಜನು ಫ್ರೆಂಚ ಮಹಿಳೆಯನ್ನು ಮದುವೆಯಾದ ಬಳಿಕ ವಾಸಿಸಲು ಈ ಬಂಗಲೆಯನ್ನು ಕಟ್ಟಿಸಿದನು. ರಾಜನು ಆಕೆಯನ್ನು ವಿದೇಶಕ್ಕೆ ಶಿಕ್ಷಣಕ್ಕಾಗಿ ತೆರಳಿದ್ದಾಗ ಕಂಡು ಪ್ರೇಮಿಸಿದ್ದನು.
ಇದನ್ನು ಆಮದು ಮಾಡಿದ ವಸ್ತುಗಳಿಂದ ಕಟ್ಟಲಾಗಿದ್ದು ಗ್ಲಾಗ್ಸೋ ಹೆಚ್ಚಿನ ಪ್ರಮಾಣದಲ್ಲಿದೆ. ಇದರ ಗೋಡೆಗಳನ್ನು ಸುಣ್ಣದ ಕಲ್ಲುಗಳಿಂದ ಕಟ್ಟಲಾಗಿದೆ. ಇದರ ನಾಲ್ಕೂ ಮೂಲೆಗಳನ್ನು ಒಂದೊಂದು ಗೋಪುರ ಇದೆ. ಇಲ್ಲಿ ಹಿಂದಿನ ಕಾಲದಲ್ಲಿ ರೋಮನ್ ಬಾತ್ ಆಗಿ ಉಪಯೋಗಿಸಲಾಗುತ್ತಿದ್ದ ಒಣ ಬಾವಿಯೂ ಇದೆ. ಇಲ್ಲಿ ಆಳುಗಳು, ಕ್ವಾರ್ಟರ್ಸ್ ಗಳು, ಅಡುಗೆ ಮನೆಗಳು ಇದ್ದವು ಇದರ ಜೊತೆಗೆ ಧಾನ್ಯಗಳನ್ನು ಸಂಗ್ರಹಿಸಿ ಇಡಲು ಇಲ್ಲಿ ಒಂದು ಸಂಗ್ರಹಾಗಾರವೂ ಇತ್ತು. ಹೀಗಿದ್ದರೂ ಸರಿಯಾಗಿ ನಿರ್ವಹಣೆ ಮಾಡದ ಕಾರಣದಿಂದಾಗಿ ಇಂದು ಇದು ಶಿಥಿಲವಾದ ಸ್ಥಿತಿಯಲ್ಲಿದೆ.