Search
  • Follow NativePlanet
Share
ಮುಖಪುಟ » ಸ್ಥಳಗಳು » ವರ್ಕಲಾ » ಹವಾಮಾನ

ವರ್ಕಲಾ ಹವಾಮಾನ

ವರ್ಕಲಾ ಎಲ್ಲಾ ಕಾಲದಲ್ಲಿಯೂ ಮಧ್ಯಮ ಹವಾಗುಣವನ್ನು ಹೊಂದಿರುತ್ತದೆ. ಆದರೆ ಚಳಿಗಾಲವು ಪ್ರಶಾಂತವಾದ, ತಂಪಾದ  ವಾತಾವರಣವಿರುವುದರಿಂದ ಈ ಸಮಯವು ಪ್ರವಾಸಕ್ಕೆ ಪ್ರಶಸ್ತವಾದ ಸಮಯ. ಬೀಚ್ ಗಳ ಪಟ್ಟಣವೆಂದೆ ಹೆಸರಾಗಿರುವ ವರ್ಕಲಾ ಪಟ್ಟಣಕ್ಕೆ ಅಲ್ಲಿನ ಬೀಚ್ ಸೌಂದರ್ಯವನ್ನು ಸವಿಯಲಿಕ್ಕೆ ಚಳಿಗಾಲವೇ ನಿಮ್ಮ ಪ್ರಯಾಣದ ಅವಧಿಯಾಗಿರಲಿ.

ಬೇಸಿಗೆಗಾಲ

ಬೇಸಿಗೆ ಕಾಲವು ಅತ್ಯಂತ ಶಾಕದಿಂದ ಕೂಡಿರುತ್ತದೆ. ಬಿಸಿಲು ಅಧಿಕ. ಉಷ್ಣಾಂಶವು ಮರ್ಕ್ಯೂರಿ ಮಟ್ಟಕ್ಕೆ ಹೆಚ್ಚಾಗುತ್ತದೆ. ಉಷ್ಣಾಂಶವು ಹಗಲಿನಲ್ಲಿ 32 ಡಿ. ಸೆ. ನಿಂದ 35 ಡಿ. ಸೆ ನಷ್ಟಿರುತ್ತದೆ. ಆದರೆ ರಾತ್ರಿಯು ಹೆಚ್ಚು ತಂಪಾಗಿರುತ್ತದೆ. ಬೇಸಿಗೆ ಕಾಲವು ಮಾರ್ಚ್ ನಲ್ಲಿ ಪ್ರಾಂರಭವಾಗಿ ಮೇ ತಿಂಗಳಿನಲ್ಲಿ ಮುಗಿಯುತ್ತದೆ. ವರ್ಷದಲ್ಲಿಯೇ ಅತೀ ಹೆಚ್ಚು ಉಷ್ಣಾಂಶವಿರುವ ತಿಂಗಳೆಂದರೆ ಮೇ ತಿಂಗಳು. ವರ್ಕಲಾಕ್ಕೆ ಪ್ರವಾಸಕ್ಕಾಗಿ ಹೋಗಲು ಬೇಸಿಗೆ ಕಾಲವು ಸೂಕ್ತವಲ್ಲ.

ಮಳೆಗಾಲ

ಮಳೆಗಾಲವು ಜೂನ್ ನಲ್ಲಿ ಆರಂಭವಾಗಿ ಸಪ್ಟೆಂಬರ್ ನಲ್ಲಿ ಮುಗಿಯುತ್ತದೆ. ಈ ಸಮಯದಲಿ ಸುರಿಯುವ ಧಾರಾಕಾರವಾಗಿ ಸುರಿಯುವ ಮಳೆಯು ಉಷ್ಣಾಂಶವನ್ನು ತಣ್ಣಗಾಗಿಸುತ್ತದೆ. ಅಕ್ಟೋಬರ್ ಹಾಗೂ ನವೆಂಬರ್ ತಿಂಗಳುಗಳಲ್ಲಿ ಹೆಚ್ಚಾಗಿ ಮಳೆ ಸುರಿಯದ ಸಮಯದಲ್ಲಿ ವರ್ಕಲಾಕ್ಕೆ ಪ್ರವಾಸಕ್ಕೆ ಹೋಗಲು ಸರಿಯಾದ ಸಮಯ.

ಚಳಿಗಾಲ

ಚಳಿಗಾಲವು ಡಿಸೆಂಬರ್ ನಲ್ಲಿ ಆರಂಭವಾಗುತ್ತಿದ್ದು ಫೆಬ್ರವರಿ ಯಲ್ಲಿ ಕೊನೆಗೊಳ್ಳುತ್ತದೆ. ಚಳಿಗಾಲದ ಸಮಯದಲ್ಲಿ ಉಷ್ಣಾಂಶ 22 ಡಿ.ಸೆ ನಿಂದ  28 ಡಿ.ಸೆ. ದಾಖಲಾಗುತ್ತದೆ. ಡಿಸೆಂಬರ್ ಹಾಗೂ ಜನವರಿ ತಿಂಗಳುಗಳಲ್ಲಿ ವರ್ಕಲಾದ ವಾತಾವರಣ ಪ್ರಶಾಂತವಾಗಿರುತ್ತದೆ. ಆದ್ದರಿಂದ ಈ ಸಮಯ ಪ್ರವಾಸಿಗರು ವರ್ಕಲಾಕ್ಕೆ ಬರಲ ಸರಿಯಾದ ಸಮಯ.