Search
  • Follow NativePlanet
Share
ಮುಖಪುಟ » ಸ್ಥಳಗಳು » ವರ್ಕಲಾ » ಆಕರ್ಷಣೆಗಳು » ಶರ್ಕರಾ ದೇವಿ ದೇವಾಲಯ

ಶರ್ಕರಾ ದೇವಿ ದೇವಾಲಯ, ವರ್ಕಲಾ

4

ಶರ್ಕರಾ/ಸರ್ಕರಾ ದೇವಿ ದೇವಾಲಯ ಕೆರಳದಲ್ಲಿರುವ ಪ್ರಮುಖ ಯಾತ್ರಾ ಸ್ಥಳ. ಇಲ್ಲಿ ಪೂಜಿಸಲ್ಪಡುವ ದೇವತೆ ಭದ್ರಕಾಳಿ ದೇವಿ. ಈ ವಿಗ್ರಹವು ಉತ್ತರದ ದಿಕ್ಕಿಗೆ ಮುಖ ಮಾಡಿದೆ. ಈ ದೇವಾಲಯದ ಛಾವಣಿಯು ಕಂಚಿನಿಂದ ಮುಚ್ಚಲ್ಪಟ್ಟಿದೆ ಹಾಗೂ ಒಳಾಂಗಣವು ಆಯತಾಕಾರದ ಶೈಲಿಯಲ್ಲಿದೆ. ಎಣಿಸಲಾಗದಷ್ಟು ಭಗವಾನ್ ಕೃಷ್ಣ, ಶ್ರೀ ರಾಮ, ತಾಯಿ ದುರ್ಗಾ, ಗಣಪತಿ, ಶ್ರೀ ವಿಷ್ಣು, ನರಸಿಂಹ ಮೂರ್ತಿ ಹಾಗೂ ಇನ್ನೊಂದು ಕಥೆಯನ್ನು ಹೆಳುವಂತಹ ಇನ್ನೂ ಹಲವಾರು ವಿಗ್ರಹಗಳನ್ನು ಇಲ್ಲಿ ಕಾಣಬಹುದು. ಶರ್ಕರಾ ದೇವಿ ದೇವಾಲಯದಲ್ಲಿ ನಡೆಯುವ ಪ್ರಮುಖ ಹಬ್ಬಗಳೆಂದರೆ, ಕಲಿಯೂಟ್ ಹಾಗೂ ಮೀನಭರಣಿ. ಈ ಸಮಯದಲ್ಲಿ ಇಲ್ಲಿಗೆ ಬರುವ ಭಕ್ತಾದಿಗಳ ಸಂಖ್ಯೆ ಅಪಾರ.

ಶರ್ಕರಾ ದೇವಿ ದೇವಾಲಯದ ಸುತ್ತ ಹಲವಾರು ಪೌರಾಣಿಕ ಪ್ರತೀತಿಗಳಿವೆ. ಬಹಳ ಹಿಂದೆ ಈಗ ದೇವಾಲಯವಿರುವ ಸ್ಥಳದಲ್ಲಿ ಕಡಿಮೆ ಜನಸಂಖ್ಯೆಯಿತ್ತು. ಒಮ್ಮೆ ಬೆಲ್ಲವನ್ನು ಮಾರುವ ವರ್ತಕರು ಈ ಮಾರ್ಗವಾಗಿ ಚಲಿಸುತ್ತಿದ್ದರು. ಅವರು ರಸ್ತೆಯ ಬದಿಯಲ್ಲಿ ವಾಸ ಸ್ಥಳವನ್ನು ನೋಡಿ ಅಲ್ಲಿಯೇ ಸ್ವಲ್ಪ ಸಮಯ ಇರಲು ನಿರ್ಧರಿಸಿದರು. ಆನಂತರ ತಮ್ಮ ಪಯಣವನ್ನು ಮುಂದುವರಿಸಲು ನಿರ್ಧರಿಸಿ, ಬೆಲ್ಲದ ಭರಣಿಯನ್ನು ತೆಗೆದುಕೊಂಡು ಹೊರಡಲು ಅನುವಾದರು. ಆದರೆ ಅವರಲ್ಲಿದ್ದ ಬೆಲ್ಲದ ಭರಣಿಗಳ ಪೈಕಿ ಒಂದು ಭರಣಿಯನ್ನು ಮೆಲೆತ್ತಲು ಸಾಧ್ಯವೇ ಆಗಲಿಲ್ಲ. ಅವರು ಅದನ್ನು ಬಲವಾಗಿ ಮೇಲೆತ್ತಲು ಪ್ರಯತ್ನಿಸಿದರು. ಆದರೆ ಅದು ಬಿರುಕು ಬಿಟ್ಟಿತು. ಬೆಲ್ಲದ ಭರಣಿ ಒಡೆದು ಬೆಲ್ಲವು ಹರಿಯಲು ಪ್ರಾರಂಭವಾಯಿತು. ಕೊನೆಗೆ ಅದು ಅಚ್ಚರಿ ಮೂಡಿಸುವ ರೀತಿಯಲ್ಲಿ ವಿಗ್ರಹವಾಗಿ ಮಾರ್ಪಟ್ಟಿತು. ನಂತರ ಈ ಘಟನೆಯನ್ನು ವೀಕ್ಷಿಸಿದ ವೃದ್ಧೆಯೊಬ್ಬಳು ಈ ಪವಾಡದದ ಬಗ್ಗೆ ಹಳ್ಳಿಗರಿಗೆ ತಿಳಿಸಿದಳು. ಹಳ್ಳಿಗರು ಒಂದು ದೇವಾಲಯವನ್ನು ಕಟ್ಟಿ ದೇವಾಲಯದ ಒಳಗಡೆ ವಿಗ್ರಹವನ್ನು ಪ್ರತಿಷ್ಠಾಪಿಸಿದರು. ಅಲ್ಲಿಂದ ದೇವತೆ ಬೆಲ್ಲದ ಮೂಲಕ ಅಭಿವ್ಯಕ್ತಗೊಂಡ ಕಾರಣ ಮಲಯಾಳಂ ನ ಶರ್ಕರಾ, ನಂತರ ಶರ್ಕರಾ ದೇವಿ ಎಂದು ಪ್ರಸಿದ್ದಿಯನ್ನು ಪಡೆಯಿತು.

ಶರ್ಕರಾ ದೇವಿ ದೇವಾಲಯದಲ್ಲಿ ನಡೆಯುವ ಪ್ರಮುಖ ಹಬ್ಬಗಳೆಂದರೆ, ಕಲಿಯೂಟ್ ಹಾಗೂ ಮೀನಭರಣಿ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat