Search
  • Follow NativePlanet
Share
ಮುಖಪುಟ » ಸ್ಥಳಗಳು » ವರ್ಕಲಾ » ಆಕರ್ಷಣೆಗಳು » ಜನಾರ್ಧನ ಸ್ವಾಮಿ ದೇವಾಲಯ

ಜನಾರ್ಧನ ಸ್ವಾಮಿ ದೇವಾಲಯ, ವರ್ಕಲಾ

1

ಜನಾರ್ಧನ ಸ್ವಾಮಿ ದೇವಾಲಯವು ಭಾರತದ ಪ್ರಸಿದ್ಧ ವೈಷ್ಣವ ದೇವಾಲಯಗಳಲ್ಲೊಂದು.  ಇದನ್ನು ’ದಕ್ಷಿಣದ ಬನಾರಸ್’ ಎಂದು ಕರೆಯಲಾಗುತ್ತಿದ್ದು, ಈ ದೇವಾಲಯವು 2000 ವರ್ಷ ಹಳೆಯದಾದ ದೇವಾಲಯವಾಗಿದೆ. ಈ ದೇವಾಲಯವನ್ನು  ಪಾಪನಾಶಂ ಬೀಚ್ ನ ಹತ್ತಿರದಲ್ಲಿ ಕಾಣಬಹುದು. ಒಂದು ಪುರಾತನ ಹೇಳಿಕೆಯ ಪ್ರಕಾರ ಈ ದೇವಾಲಯದಲ್ಲಿರುವ ಹಳೆಯ ಗಂಟೆಯೊಂದನ್ನು ಡಚ್ ನಾವೆಯ ನಾವಿಕ ನೀಡಿದ್ದಾನೆಂದೆ ಹೇಳಲಾಗುತ್ತಿದ್ದು ಇದು ಇಲ್ಲಿ ಬರುವ ಹಲವಾರು ಪ್ರವಾಸಿಗಳ ಆಸಕ್ತಿ ಕೆರಳಿಸುವ ಅಂಶವಾಗಿದೆ.

ಶ್ರೀ ಕೃಷ್ಣನು ಈ ಜನಾರ್ಧನ ಸ್ವಾಮಿ ದೇವಾಲಯದ ದೇವರು. ಪ್ರತಿ ವರ್ಷ ಆಚರಿಸುವ ಅರತ್ತು ಹಬ್ಬವು ಇಲ್ಲಿ ಆಚರಿಸಲಾಗುವ ಸಂಭ್ರಮದ ಹಬ್ಬ. ಹಿಂದೂ ತಿಂಗಳಾದ ಮೀನಂ ತಿಂಗಳಿನಲ್ಲಿ ಹತ್ತು ದಿನಗಳ ಕಾಲ ಈ ಹಬ್ಬವನ್ನು ಆಚರಿಸಲಾಗುತ್ತದೆ. ಅರ್ತ್ತು /ಅರತ್ತು ಹಬ್ಬದ ಆಚರಣೆಯ ಸಂದರ್ಭದಲ್ಲಿ ಸಹಸ್ರಾರು ಭಕ್ತಾದಿಗಳು ದೇಶದ ಮೂಲೆ ಮೂಲೆಗಳಿಂದ ಇಲ್ಲಿಗೆ ಆಗಮಿಸುತ್ತಾರೆ. ಈ ದೇವಾಲಯವು ಹಿಂದುಗಳಿಗೆ ಮಾತ್ರ ಮೀಸಲಾಗಿದೆ. ಇಲ್ಲಿನ ಮುಖ್ಯ ದೇವಾಲಯದ ಒಳಗಡೆ ಹಿಂದು ಧರ್ಮಕ್ಕೆ ಸೇರದವರು ಪ್ರ ವೇಶಿಸುವಂತಿಲ್ಲ. ಈ ದೇವಾಲಯದ ಹೊರವಲಯಗಳಿಗೆ ಅವರು ತಿರುಗಾಡಬಹುದಷ್ಟೇ. ಹಿಂದುಗಳು ಈ ದೇವಾಲಯದ ಒಳಗೆ ಪ್ರಾರ್ಥನೆಯನ್ನು ಸಲ್ಲಿಸಬಹುದಾಗಿದೆ. ದೇವಾಲಯದ ಕೊಳದಲ್ಲಿರುವ ನೀರನ್ನು ತಲೆಯ ಮೇಲೆ ಹಾಕಿಕೊಂಡರೆ ಸಕಲ ಪಾಪಗಳೂ ಪರಿಹಾರವಾಗುತ್ತವೆ ಎಂಬ ನಂಬಿಕೆ ಜನರದ್ದು.

ದಕ್ಷಿಣ ಭಾರತದ ವಾಸ್ತು ಶಿಲ್ಪದ ಶೈಲಿಯಲ್ಲಿ ಈ ದೇವಾಲಯವನ್ನು ಕಟ್ಟಲಾಗಿದೆ. ಹಾಗೂ ವರ್ಕಲಾ ರೈಲ್ವೆ ನಿಲ್ದಾಣದಿಂದ 3 ಕೀ.ಮಿ ದೂರದಲ್ಲಿ ಜನಾರ್ಧನ ದೇವಾಲಯವನ್ನು ಕಾಣಬಹುದಾಗಿದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri