ಶೋಲಯಾರ್ ನ ಮೇಲ್ಭಾಗದ ಅಣೆಕಟ್ಟಿಗೆ ಶೋಲಯಾರ್ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ವಾಲ್ಪಾರೈಯಿಂದ ಸುಮಾರು 20 ಕಿ.ಮೀ. ಪ್ರಯಾಣಿಸಿದರೆ ಶೋಲಯಾರ್ ಅಣೆಕಟ್ಟಿನ ಸೌಂದರ್ಯವನ್ನು ಕಾಣಬಹುದು. ಇದು ಏಶ್ಯಾದಲ್ಲೇ ಅತ್ಯಂತ ಆಳವಾದ ಅಣೆಕಟ್ಟಾಗಿದೆ ಮತ್ತು ವರ್ಷದುದ್ದಕ್ಕೂ ಇದು ಪ್ರವಾಸಿಗರನ್ನು ಸೆಳೆಯುತ್ತದೆ. ತಮಿಳುನಾಡಿನ ಜಲವಿದ್ಯುತ್ ಯೋಜನೆ ಕೂಡ ಈ ಅಣೆಕಟ್ಟಿಗೆ ಅಂಟಿಕೊಂಡಿದೆ. ಇಲ್ಲಿಗೆ ಭೇಟಿ ನೀಡುವವರಿಗೆ ವಿಶೇಷ ಅನುಮತಿ ಮುಖ್ಯ. ಪೊಲ್ಲಚಿಯಿಂದ ಈ ಅಣೆಕಟ್ಟು 85 ಕಿ.ಮೀ. ದೂರದಲ್ಲಿದೆ. ದಟ್ಟ ಅರಣ್ಯ, ಹುಲ್ಲುಗಾವಲು ಮತ್ತು ನೆಡುತೋಪುಗಳ ಮಧ್ಯೆ ಈ ಅಣೆಕಟ್ಟಿದೆ. ನಗರದ ಮಾಲಿನ್ಯಗಳಿಂದ ಸ್ವಲ್ಪ ಮಟ್ಟಿಗೆ ವಿಶ್ರಾಂತಿ ಬಯಸುವವರು ಇಲ್ಲಿಗೊಮ್ಮೆ ಭೇಟಿ ನೀಡಬೇಕು. ವರ್ಷದ ಎಲ್ಲಾ ಸಮಯದಲ್ಲೂ ಇಲ್ಲಿ ಪ್ರವಾಸಿಗರು ಇದ್ದೇ ಇರುತ್ತಾರೆ.