ಅಣ್ಣೈ ವೆಲಂಕಣೆ ಚರ್ಚ್ ವಾಲ್ಪಾರೈಗೆ ಒಂದು ಮಹತ್ವದ ಸ್ಥಾನವನ್ನು ಕೊಟ್ಟಿದೆ. ವಾಲ್ಪಾರೈನಿಂದ 10 ಕಿ.ಮೀ. ದೂರದಲ್ಲಿ ವೆಲಂಕಣಿ ಚರ್ಚ್ ಇದ್ದು, 2003ರಲ್ಲಿ ಇದರ ನವೀಕರಣ ಕಾರ್ಯ ನಡೆದಿದೆ. ಸಪ್ಟೆಂಬರ್ ನಲ್ಲಿ ಇಲ್ಲಿ ವಾರ್ಷಿಕ ಜಾತ್ರೆ ನಡೆಯುವ ಕಾರಣ ಈ ಸಮಯದಲ್ಲಿ ಭೇಟಿ ನೀಡುವುದು ಉತ್ತಮ. ಸಪ್ಟೆಂಬರ್ 8ರಂದು ನಡೆಯಲಿರುವ ಈ ಜಾತ್ರೆ ಸ್ಥಳೀಯವಾಗಿ ಭಾರೀ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಭಕ್ತರಲ್ಲದೆ ಪ್ರವಾಸಿಗಳು ಕೂಡ ಈ ಚರ್ಚ್ ಮತ್ತು ಸುತ್ತಮುತ್ತಲಿನ ಸೌಂದರ್ಯವನ್ನು ವೀಕ್ಷಿಸಲು ಆಗಮಿಸುತ್ತಾರೆ. ಮನಶಾಂತಿ ಬಯಸುವವರಿಗೆ ಇದು ಪ್ರಶಸ್ತವಾದ ಸ್ಥಳ. ಚರ್ಚ್ ನಲ್ಲಿ ವೆಲಂಕಣಿ ಮಾತೆಯನ್ನು ಆರಾಧಿಸಲಾಗುತ್ತಿದೆ.