Search
  • Follow NativePlanet
Share
ಮುಖಪುಟ » ಸ್ಥಳಗಳು » ವೈಶಾಲಿ » ಹವಾಮಾನ

ವೈಶಾಲಿ ಹವಾಮಾನ

ವೈಶಾಲಿಯಲ್ಲಿ ಗಂಗಾನದಿಯ ಭಾಗದಲ್ಲಿರುವಂತೆ ತೀವ್ರ ವಾತಾವರಣವಿರುತ್ತದೆ. ಬೇಸಿಗೆಯಲ್ಲಂತೂ ಸುಡು ಬಿಸಿಲಿನ ವಾತಾವರಣವಿದ್ದು ತಾಪಾಂಸ 45 ಡಿಗ್ರಿಯವರೆಗೆ ಸಾಗುತ್ತದೆ ಮತ್ತು ಚಳಿಗಾಲದಲ್ಲಿ ತಾಪಾಂಸ ಆರು ಡಿಗ್ರಿಯವರೆಗೆ ಇಳಿಯುತ್ತದೆ. ವೈಶಾಲಿಗೆ ಭೇಟಿ ನೀಡಲು ಅತ್ಯಂತ ಸೂಕ್ತ ಸಮಯವೆಂದರೆ ಚಳಿಗಾಲದಲ್ಲಿ ಅದು ಅಕ್ಟೋಬರ್ ನಿಂದ ಮಾರ್ಚ್ ತಿಂಗಳ ಅವಧಿಯಲ್ಲಿ.

ಬೇಸಿಗೆಗಾಲ

ವೈಶಾಲಿ ನಗರವು ಉಷ್ಣಾಂಸದಿಂದ ಕೂಡಿದ ನಗರವಾಗಿದ್ದು ಸೆಖೆ ಮತ್ತು ಬಿರುಬೇಸಿಗೆ ಸಾಕ್ಷಿಯಾಗುತ್ತದೆ. ಉಷ್ಣಾಂಸ 45 ಡಿಗ್ರಿಯವರೆಗೂ ಸಾಗುತ್ತದೆ. ವೈಶಾಲಿಗೆ ಈ ಸಮಯದಲ್ಲಿ ಭೇಟಿ ನೀಡುವ ಪ್ರವಾಸಿಗರು ತೆಳು ಕಾಟನ್ ಬಟ್ಟೆಯನ್ನು ಬಳಸಿಕೊಳ್ಳುವುದು ಸೂಕ್ತ.

ಮಳೆಗಾಲ

ಮಳೆಗಾಲವು ಆಗಸ್ಟ್ ತಿಂಗಳಿನಿಂದ ಆರಂಭವಾಗಿ ಅಕ್ಟೋಬರ್ ತಿಂಗಳವರೆಗೆ ಸಾಗುತ್ತದೆ. ಈ ಸಮಯದಲ್ಲಿ ಉತ್ತಮ ಮಳೆಯಾಗುತ್ತದೆ. ಮಳೆಗಾಲದ ಸಮಯದಲ್ಲಿ ವೈಶಾಲಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತದೆ.

ಚಳಿಗಾಲ

ಚಳಿಗಾಲದ ಸಮಯದಲ್ಲಿ ಇಲ್ಲಿ ಸೂರ್ಯನ ತಾಪಮಾನ ಅಷ್ಟಾಗಿ ಇರುವುದಿಲ್ಲ ಹಾಗಾಗಿ ಈ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಲು ಅತ್ಯಂತ ಸೂಕ್ತ. ಹಗಲಿನಲ್ಲಿ ವಾತಾವರಣ ಆಹ್ಲಾದಕರವಾಗಿದ್ದರೆ ರಾತ್ರಿಯ ವೇಳೆ ವಿಪರಿಮೀತ ಚಳಿಯ ವಾತಾವರಣವಿರುತ್ತದೆ.