ಮುಂಡಕಯಮ್ ಘಾಟ್ ಇರುವುದು ವಾಗಮೋನ್ನಿಂದ ಸುಮಾರು 8 ಕಿ.ಮೀ ದೂರದಲ್ಲಿ. ಸೂರ್ಯೋದಯವನ್ನು ಇಲ್ಲಿಂದ ನೋಡುವುದಕ್ಕೆ ಸ್ಥಳೀಯರೂ ಬರುತ್ತಾರೆ. ಹೆಚ್ಚಿನದಾಗಿ, ಈ ಪ್ರದೇಶವು ಪಕ್ಷಿಪ್ರಿಯರಿಗೆ ಅತ್ಯಂತ ಆಕರ್ಷಣೀಯವಾಗಿರುತ್ತದೆ. ಸುತ್ತಮುತ್ತಲಿನ ಪ್ರದೇಶಗಳನ್ನು ಇಲ್ಲಿಂದ ನೋಡಬಹುದು. ನಿಸರ್ಗ ಪ್ರಿಯರಿಗೆ ಈ ಮುಂಡಕಾಯಮ್ ಘಾಟ್ ಅತ್ಯಂತ ಇಷ್ಟವಾಗುವ ತಾಣ. ಸಾಹಸಿಗರಿಗಂತೂ ಈ ತಾಣ ಆಪ್ತವಾದದ್ದು. ASSTA ಎಂಬ ವಾರ್ಷಿಕ ಹಬ್ಬವೊಂದು ಪ್ಯಾರಾಗ್ಲೈಡಿಂಗ್ಗೆಂದೇ ನಡೆಯುತ್ತದೆ. ಮುಂಡಕಾಯಮ್ ಘಾಟ್ನಲ್ಲಿ ನಡೆಯುವ ಈ ವಾರ್ಷಿಕ ಹಬ್ಬದಿಂದಾಗಿ ವಾಗಮೋನ್ ತುಂಬಾ ಜನಪ್ರಿಯವಾಗಿದೆ.