ಕುರಿಸುಮಲ ಆಶ್ರಮದಿಂದ ಕರಿಸುಮಲ ಗುಡ್ಡದ ಕಡೆಗೆ ಹೋಗುವ ದಾರಿಯಲ್ಲಿ ಡೈರಿ ಫಾರಂಗಳಿವೆ. ಕರಿಸುಮಲ ಆಶ್ರಮದ ಭಕ್ತರಿಂದ ಡೈರಿ ಫಾರಂಅನ್ನು ನಿರ್ವಹಿಸಲಾಗುತ್ತಿದೆ. ಈ ಡೈರಿ ಫಾರಂ ನಿರ್ಮಾಣವಾಗಿದ್ದು, ಇಂಡೋ-ಸ್ವಿಸ್ ಪ್ರಾಜೆಕ್ಟಿನ ಅಡಿಯಲ್ಲಿ. ಕರಿಸುಮಾಲಾ ಆಶ್ರಮದಲ್ಲಿರುವ ಭಕ್ತರ ಅನುಕೂಲಕ್ಕೆಂದು ಇಲ್ಲಿ ಡೈರಿ ಫಾರಂ ಅನ್ನು ಮಾಡಲಾಗಿದೆ. ಜೆರ್ಸಿ ದ್ವೀಪದಿಂದ ಹಸುಗಳನ್ನು ಇಲ್ಲಿಗೆ ಆಮದು ಮಾಡಿಕೊಳ್ಳಲಾಗಿದೆ. ನೀವು ವಗಮೋನ್ಗೆ ಪ್ರವಾಸ ಕೈಗೊಂಡಿದ್ದರೆ ಈ ಡೈರಿ ಫಾರಂಗೆ ಒಮ್ಮೆ ಭೇಟಿ ನಿಡಲೇಬೇಕು. ಇಲ್ಲಿನ ಸಹಜ ವಾತಾವರಣವು ಪ್ರವಾಸಿಗರಿಗೆ ಅತ್ಯಂತ ಆಹ್ಲಾದಕರವಾಗಿರುತ್ತದೆ. ನಗರಗಳ ಗಜಿಬಿಜಿಯಿಲ್ಲದ ವಾತಾವರಣ, ಸುಂದರವಾದ ಗುಡ್ಡಗಳ ತಪ್ಪಲು, ಹಸಿರಿನ ಸಿರಿ ಇವೆಲ್ಲವೂ ಪ್ರವಾಸಿಗರನ್ನು ಸೆಳೆಯುತ್ತವೆ.