ರಾಜಸ್ಥಾನದ ಗಡಿಭಾಗದಲ್ಲಿರುವ ಛೋಟಾ ಉದೇಪುರ್ ಗುಜರಾತ್ ನ ಪೂರ್ವಭಾಗದಲ್ಲಿರುವ ರಾಜಾಧೀನವಾಗಿದ್ದ ರಾಜ್ಯ. ಸರೋವರದ ಒಂದು ಬದಿಯಲ್ಲಿರುವ ಇಲ್ಲಿ ಹಲವಾರು ಮಂದಿರಗಳಿವೆ. ಇಲ್ಲಿರುವ ಜೈನ ಮಂದಿರವು ವಿಕ್ಟೋರಿಯನ್ ವಾಸ್ತುಶಿಲ್ಪ ಶೈಲಿಯ ಪ್ರಭಾವ ಹೊಂದಿದೆ.
ಕುಸುಮ ವಿಲಾಸ ಅರಮನೆ ಮತ್ತು ಪ್ರೇಮ್ ಭವನ ಅರಮನೆಗಳಿಗೆ ರಾಜ ಮನೆತನದ ಪೂರ್ವಾನುಮತಿ ಪಡೆದು ಭೇಟಿ ನೀಡಬಹುದು. ಇಲ್ಲಿನ ಬುಡಕಟ್ಟು ಪ್ರದೇಶದಲ್ಲಿರುವ ಬುಡಕಟ್ಟು ಮಾರುಕಟ್ಟೆಯು ಪ್ರದೇಶದ ಸಾಂಸ್ಕೃತಿಕ ಪಾರಂಪರೆಗೆ ಸಾಕ್ಷಿಯನ್ನು ಒದಗಿಸುತ್ತದೆ. ನ್ಯಾರೋ ಗೇಜ್ ರೈಲಿನಲ್ಲಿ ಪಯಣ ಮತ್ತು ಛೋಟಾ ಉದೇಪುರ್ ನಲ್ಲಿರುವ ಬುಡಕಟ್ಟು ಮ್ಯೂಸಿಯಂಗೆ ಭೇಟಿ ನೀಡಿದರೆ ಪ್ರಯಾಣ ಪೂರ್ಣಗೊಂಡಂತೆ.