ಇದೊಂದು ತೂಗು ಸೇತುವೆಯಾಗಿದ್ದು, ಪೆಲ್ಲಿಂಗ್ ನಿಂದ 5 ಕಿ.ಮೀ ದೂರದಲ್ಲಿದೆ. ಇದು ಸಿಕ್ಕಿಂನಲ್ಲಿ ಕಾಣಬಹುದಾದದ ಅತಿ ಎತ್ತರದಲ್ಲಿ ಸ್ಥಿತಗೊಂಡ ಸೇತುವೆ ಕೂಡ ಹೌದು. ಅಲ್ಲದೆ ಇದು ಏಷಿಯಾದಲ್ಲೆ ಎರಡನೇಯ ಅತಿ ಆಳ ಹೊಂದಿರುವ ಸೇತುವೆ ಎಂಬ ಹೆಗ್ಗಳಿಕೆಯನ್ನು ಸಹ ಪಡೆದಿದೆ. ಇದು ಸಿಕ್ಕಿಂನ ಅತಿ ಜನಪ್ರಿಯ ಆಕರ್ಷಣೆಗಳಲ್ಲೊಂದು.
ತಾಂತ್ರಿಕತೆಯ ಅದ್ಭುತ ರಚನೆ ಇದಾಗಿದ್ದು ಪ್ರಪಂಚದಾದ್ಯಂತ ಹಲವಾರು ಪ್ರವಾಸಿಗರನ್ನು ತನ್ನತ್ತ ಸೆಳೆದಿದೆ. ಈ ಸೇತುವೆಯನ್ನು ಎರಡು ಪರ್ವತಗಳನ್ನು ಸಂಪರ್ಕಿಸುವ ರೀತಿಯಲ್ಲಿ ನಿರ್ಮಿಸಲಾಗಿದೆ.