ಕುಟ್ಲೆಹಾರ್ ಕೋಟೆಗಳು ಸೋಲಾ ಸಿಂಘಿ ಕೋಟೆಗಳು ಅಂತಲೂ ಜನಪ್ರಿಯವಾಗಿದೆ. ಉನಾದ ಅತ್ಯಂತ ಪ್ರಮುಖ ಪ್ರವಾಸಿ ತಾಣಗಳಲ್ಲಿ ಇದೂ ಒಂದೆನಿಸಿದೆ. ಸಮುದ್ರ ಮಟ್ಟದಿಂದ 4500 ಮೀಟರ್ ಎತ್ತರದಲ್ಲಿದೆ. ಈ ಕೋಟೆಯನ್ನು ಕಂಗ್ರಾದ ಅರಸು ಸನ್ಸಾರ್ ಚಂದ್ರ ನಿರ್ಮಿಸಿದ. ನಂತರ ಸಿಖ್ ಅರಸು ವಂಶದ ಮೊದಲ ರಾಜ ಮಹಾರಾಜ ರಂಜಿತ್ ಸಿಂಗ್ ಈ ಕೋಟೆಗಳನ್ನು1809 ರಲ್ಲಿ ಮರುನವೀಕರಿಸಿಸಿದ. ಈ ಕೋಟೆಗಳ ಛಾವಣಿಗಳನ್ನು ಕಲ್ಲಿನಿಂದ ನಿರ್ಮಿಸಲಾಗಿದೆ.
ಇಲ್ಲಿಂದ ಗೋವಿಂದಸಾಗರ ಕೆರೆಯ ರಮಣೀಯ ದೃಶ್ಯ ವೀಕ್ಷಿಸಬಹುದಾಗಿದೆ. ಅಲ್ಲದೇ ಪೊಂಗ ಆಣೆಕಟ್ಟು ಕೂಡ ದರ್ಶನಕ್ಕೆ ಸಿಗುತ್ತದೆ. ಇದಕ್ಕೆ ಸಮೀಪದ ಇತರೆ ಪ್ರವಾಸಿ ತಾಣಗಳೆಂದರೆ ರಾಯಪುರ ಪ್ಯಾಲೇಸ್ ಕೋಟೆ, ಕುಟ್ಲೇಹಾರ್ ಅರಣ್ಯ, ಬಿಲಾಸಪುರ, ಪಿಪುಲು ಹಾಗೂ ಬಂಗಾಣ. ಈ ಕೋಟೆಯು ಬಂಗಾಣ ಹಾಗೂ ಪಿಪುಲುಗಳಿಂದ ಸುಲಭವಾಗಿ ತಲುಪುವ ಅನುಕೂಲತೆಯನ್ನು ಹೊಂದಿದೆ. ಇಲ್ಲಿಂದ ಜರೋಲಾವರೆಗೆ ಬಸ್ ಮೂಲಕ ಆಗಮಿಸಬಹುದು.