ಭರ್ವೈನ್ ಒಂದು ಸುಂದರ ಹಾಗೂ ಪುಟ್ಟ ಗಿರಿಧಾಮ. ಉನಾ ಜಿಲ್ಲೆಯಿಂದ 29 ಕಿ.ಮೀ. ದೂರದಲ್ಲಿದೆ. ಕಂಗ್ರಾ-ಹೋಶಿಯಾರ್‌ಪುರ ರಸ್ತೆಯಲ್ಲಿದೆ. ಸಮುದ್ರ ಮಟ್ಟದಿಂದ ಈ ತಾಣ 3896 ಅಡಿ ಎತ್ತರದಲ್ಲಿದೆ. ಟ್ರೆಕ್ಕಿಂಗ್‌ಗೆ ಇದು ಅವಕಾಶ ಒದಗಿಸುವ ತಾಣ. ಪ್ರವಾಸಿಗರಿಗೆ ಇಲ್ಲಿ ಇದೊಂದು ಪ್ರಮುಖ ಆಯ್ಕೆ. ಈ ಗಿರಿಧಾಮದಲ್ಲಿ ಆಕರ್ಷಕ ಹಾಗೂ ಜನಪ್ರಿಯ ಚಿಂತಪುರಣಿ ದೇವಿ ದೇವಸ್ಥಾನವಿದೆ. ಕರೋಲಿ, ಪರಾಗ್‌ಪುರ, ಚಂತೋಟಾ, ನಲಸುಗಾ ಹಾಗೂ ಗರ್ಲಿ ಸೇರಿದಂತೆ ಹಲವು ಜನಪ್ರಿಯ ತಾಣಗಳು ಇದರ ಸಮೀಪವೇ ಇವೆ.