ಬಂಗಾನಾ ಲಾಥಿನ್ ಪಿಪ್ಲು ಒಂದು ಜನಪ್ರಿಯ ಪ್ರವಾಸಿ ತಾಣ. ಉನಾದ ಸೋಲಾಹ್ ಸಿಂಘಿ ಧಾರ್ನ ತಪ್ಪಲಿನಲ್ಲಿದೆ. ಬರಸಾರ್-ಹಮೀರ್ಪುರ ಮಾರ್ಗದಲ್ಲಿ ಈ ಪ್ರದೇಶವು ಕಾಣಸಿಗುತ್ತದೆ. ಇದು ಅತ್ಯಾಕರ್ಷಕ ನೋಟ ಒಳಗೊಂಡ ಗೋವಿಂದ ಸಾಗರ ಕೆರೆಯನ್ನು ಹೊಂದಿದೆ. ಇದೊಂದು ಜನಪ್ರಿಯ ಸಿಖ್ ಮಂದಿರವಾಗಿದೆ. ಪ್ರತಿ ವರ್ಷ ಸಾಕಷ್ಟು ಸಂಖ್ಯೆಯಲ್ಲಿ ಸಿಖ್ ಬಾಂಧವರು ಇಲ್ಲಿಗೆ ಭೇಟಿ ನೀಡುತ್ತಾರೆ. ಪಿಪ್ಲು ಜಾತ್ರೆ ಇಲ್ಲಿನ ಪ್ರಸಿದ್ಧ ಆಚರಣೆಗಳಲ್ಲಿ ಒಂದು. ಇದು ಪ್ರತಿ ವರ್ಷ ಜೂನ್ ತಿಂಗಳಲ್ಲಿ ಬರುವ ನಿರಜಾಲ ಏಕಾದಶಿಯಂದು ಆಚರಿಸಲ್ಪಡುತ್ತದೆ. ನೈನಾದೇವಿ ದೇವಾಲಯ, ಜೋಗಿ ಪೊಂಗಾಗಳು ಇಲ್ಲಿಗೆ ಸಮೀಪದ ಇತರೆ ಆಕರ್ಷಣೆಗಳಾಗಿವೆ.