ಪ್ರಖ್ಯಾತ ರಾಜ ವಿಕ್ರಮಾದಿತ್ಯನ ಹೆಸರಿನಿಂದ ಆರಂಭವಾದ ವಿಶ್ವವಿದ್ಯಾನಿಲಯ ಈ ಪುರಾತನ ನಗರದ ಒಂದು ಬಹಳ ಪ್ರಮುಖವಾದ ಸ್ಥಳವಾಗಿದ್ದು ನೋಡಲರ್ಹವಾಗಿದೆ. 1957 ರಲ್ಲಿ ನಿರ್ಮಾಣಗೊಂಡ ವಿಶ್ವವಿದ್ಯಾನಿಲಯ ಮಧ್ಯ ಪ್ರದೇಶದ ಒಂದು ಪ್ರಮುಖ ವಿಶ್ವವಿದ್ಯಾನಿಲಯವಾಗಿದೆ. ಇಲ್ಲಿ ವಿಶ್ವವಿದ್ಯಾನಿಲಯದ ವತಿಯಿಂದ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ.
ಇಲ್ಲಿನ ಗ್ರಂಥಾಲಯವನ್ನು ಮಹಾರಾಜ ಜಿವಾಜಿ ರಾವ್ ಗ್ರಂಥಾಲಯ ಎಂದು ಕರೆಯಲಾಗುತ್ತಿದ್ದು ಇದು ಇಲ್ಲಿಯ ತನಕ 1645 ಪಿ.ಎಚ್.ಡಿ ಗಳನ್ನು ಪೂರ್ಣಗೊಳಿಸಿದೆ. ಇಲ್ಲಿನ ಇನ್ನೊಂದು ನೋಡಲರ್ಹ ಸ್ಥಳವೆಂದರೆ ಇಲ್ಲಿನ ಮುದ್ರಣಾಲಯ ಇದನ್ನು 1961 ರಲ್ಲಿ ಆರಂಭಿಸಲಾಯಿತು. ಈ ವಿಶ್ವವಿದ್ಯಾನಿಲಯ 500 ಕ್ಕೂ ಹೆಚ್ಚು ಆನ್ ಲೈನ್ ರಿಸರ್ಚ್ ಜರ್ನಲ್ಸ್ ಗೆ ಸಂಪರ್ಕ ಸಾಧಿಸಿದೆ. ಈ ವಿಶ್ವವಿದ್ಯಾನಿಲಯವು ತನ್ನದೇ ಆದ ಇಲಾಖೆಯನ್ನು ಹೊಂದಿದ್ದು ಇದು ಹೊಸ ಕಟ್ಟಡಗಳ ನಿರ್ಮಾಣ ಮತ್ತು ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸುತ್ತದೆ.
ಹಲವು ಪ್ರಖ್ಯಾತ ವ್ಯಕ್ತಿಗಳು ಈ ವಿಶ್ವವಿದ್ಯಾನಿಲಯವನ್ನು ತಮ್ಮ ವಿದ್ಯಾಭ್ಯಾಸವನ್ನು ಇಲ್ಲೇ ಪೂರ್ಣಗೊಳಿಸಿದ್ದಾರೆ. ಈ ಪಟ್ಟಿಯಲ್ಲಿ ಹಲವು ವಿಜ್ಞಾನಿಗಳು, ಶಿಕ್ಷಣ ತಜ್ಞರು ಹಾಗೂ ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರೂ ಇದ್ದಾರೆ.