ಉಜ್ಜಯಿನಿ ನಗರದಲ್ಲೇ 'ಬಡೆ ಗಣೇಶ್ ಜೀ ಕಾ ಮಂದಿರ್' (ದೊಡ್ಡ ಗಣಪತಿಯ ದೇವಸ್ಥಾನ)ದೇವಾಲಯವಿದೆ ಹಾಗೂ ಇದನ್ನು ಇಡಿ ನಗರದಲ್ಲೇ ಅತ್ಯಂತ ಸಾಂಪ್ರದಾಯಿಕ ದೇವಾಲಯ ಎಂದು ಗುರುತಿಸಲಾಗಿದೆ. ಇಲ್ಲಿನ ದೇವತೆ ಅತ್ಯಂತ ಪ್ರಭಾವಶಾಲಿ ಎಂದು ಇಲ್ಲಿನ ಸ್ಥಳೀಯರು ನಂಬುತ್ತಾರೆ ಹಾಗೂ ದೂರದ ಪ್ರದೇಶಗಳಿಂದಲೂ ಪ್ರತಿ ದಿನ ಇಲ್ಲಿ ಜನರು ಆಗಮಿಸುತ್ತಾರೆ. ಮಹಾಲಕ್ಷ್ಮೇಶ್ವರ ದೇವಾಲಯದ ಕೊಳದ ಬಳಿ ಈ ದೇವಾಲಯವಿದೆ.
ದೇವಾಲಯದೊಳಗೆ ಗಣೇಶ ದೇವರ ದೊಡ್ಡ ಮೂರ್ತಿಯಿದೆ. ಇಲ್ಲಿ ಮಾಡಿದ ಎಲ್ಲಾ ಪ್ರಾರ್ಥನೆಗಳು ಈಡೇರುತ್ತವೆ ಎಂಬ ನಂಬಿಕೆ ಇರುವ ಕಾರಣ ಈ ಮೂರ್ತಿಯನ್ನು ಬಹಳ ಶಕ್ತಿಶಾಲಿ ಎಂದು ಹೇಳಲಾಗುತ್ತದೆ. ಈ ತರಹದ ಮೂರ್ತಿಗಳು ಇಂದಿನ ಕಾಲದಲ್ಲಿ ಬಹಳ ಕಡಿಮೆಯಿದ್ದು ನೋಡಲು ಸಿಗದ ಕಾರಣ ಇದರ ನೋಟವೇ ಬಹಳ ಸಮಾಧಾನ ನೀಡುತ್ತದೆ. ದೇವಾಲಯದೊಳಗೆ ಸಂಸ್ಕೃತ ಹಾಗೂ ಖಗೋಳ ಶಾಸ್ತ್ರವನ್ನು ಕಲಿಯಬಹುದಾಗಿದೆ, ಇದನ್ನು ದೇವಾಲಯದ ಆಡಳಿತ ಆರಂಭಿಸಿದೆ.