Search
  • Follow NativePlanet
Share
ಮುಖಪುಟ » ಸ್ಥಳಗಳು» ಉದ್ವಾಡಾ

ಉದ್ವಾಡ : ಪಾರ್ಸಿಗಳ ಕೇಂದ್ರ!

8

ವಾಲ್ಸಾದ ಜಿಲ್ಲೆಯಲ್ಲಿನ ಸಮುದ್ರಪ್ರದೇಶದ ಪಟ್ಟಣವಾದ ಉದ್ವಾಡ ಪಾರ್ಸಿಗಳ ಮುಖ್ಯ ಕೇಂದ್ರ. ಉದ್ವಾಡ ಎಂದರೆ ‘ಒಂಟೆಗಳು ತಿರುಗಾಡುವ ಮೈದಾನ’ ಎಂದರ್ಥ. ಮುಸ್ಲಿಂರ ಆಕ್ರಮಣದಿಂದ ತಪ್ಪಿಸಿಕೊಳ್ಳಲು 10ನೆಯ ಶತಮಾನದಲ್ಲಿ ಪಾರ್ಸಿಗಳು ಭಾರತಕ್ಕೆ ಬಂದರು. ಇವರು ಭಾರತಕ್ಕೆ ವಾಲ್ಸಾದ ಮೂಲಕ ಪ್ರವೇಶಿಸಿದರು ನಂತರ ಇಲ್ಲಿ ಸಂಜನ್ ಎನ್ನುವ ಬಂದರನ್ನು ನಿರ್ಮಿಸಿದರು. ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ ಇಲ್ಲಿನ ಪವಿತ್ರ ಅಗ್ನಿ ಆತಿಷ್ ಬೆಹ್ರಾಂ.

ಇದನ್ನು ಅವರು ಇರಾನಿನಿಂದ ತಂದರಂತೆ. ಮತ್ತವರ ನಂಬಿಕೆಯ ಪ್ರಕಾರ ಇದು ಅತಿ ಹೆಚ್ಚು ಪ್ರಜ್ವಲವಾಗಿರುವ ಅಗ್ನಿ. ಇದನ್ನವರು ಸಂಜನ್ನಲ್ಲಿ ಬಂದರು ನಿರ್ಮಿಸಿದ ನಂತರ ತಂದರು. ನಂತರ ಸಂಜನದ ಮೇಲೆ ಮೊಹಮದ್ ಬಿನ್ ತುಘಲಕ್ನು ಆಕ್ರಮಣ ಮಾಡಿದ್ದರಿಂದ ಇದನ್ನು ಉದ್ವಾಡದ ಆತಾಶ್ ಬೆಹ್ರಾಂನಲ್ಲಿಟ್ಟರು. ಉದ್ವಾಡದ ಆತಶ್ ಬೆಹ್ರಾಂ ಪ್ರಪಂಚದ ಒಂಭತ್ತು ದೇವಾಲಯಗಳಲ್ಲಿ ಪವಿತ್ರ ಅಗ್ನಿಗಳಲ್ಲಿ ಒಂದು. ಇದು ನಿರಂತರವಾಗಿ ಉರಿಯುತ್ತಲೇ ಇದೆ.

ಆತಶ್ ಬೆಹ್ರಾಂನನ್ನು ಇರಾನ್ಷಾ ಎಂದು ಸಹ ಕರೆಯಲಾಗುತ್ತದೆ. ಆತಶ್ ಬೆಹ್ರಾಂನ ಸ್ಥಾಪನಾ ದಿನ ಮತ್ತು ಷಹೆನ್ಷಾಹಿಯ ಒಂಭತ್ತನೇ ತಿಂಗಳ ಒಂಭತ್ತನೇ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪ್ರತಿ ತಿಂಗಳ 20ನೆ ದಿನವನ್ನು ವೆರೆಥರಂಗ ಅಂದರೆ ‘ವಿಜಯ’ದ ದಿನವನ್ನಾಗಿ ಆಚರಿಸುತ್ತಾರೆ.  ಉದ್ವಾಡ ಸಮುದ್ರತೀರ ಮತ್ತು ಪಾರ್ಸಿ ತಿಂಡಿಗಳು ಉದ್ವಾಡದ ಕೆಲವು ಆಕರ್ಷಣೆಗಳು.

ಹವಾಮಾನ:

ಹೆಚ್ಚು ಉಷ್ಣತೆಯಿಂದ ಕೂಡಿದ ಬೇಸಿಗೆ, ಸಾಧಾರಣದಿಂದ ಅತಿ ಹೆಚ್ಚು ಮಳೆ ಬೀಳುವ ಮಳೆಗಾಲ, ಆಹ್ಲಾದಕರ ಚಳಿಗಾಲ ಇದು ಉದ್ವಾಡದ ಹವಾಮಾನ. ಈ ಪಟ್ಟಣಕ್ಕೆ ಬೇಸಿಗೆ ಕಾಲ ಮತ್ತು ಮಳೆಗಾಲಗಳಲ್ಲಿ ಪ್ರವಾಸ ಹೋಗುವುದು ಸೂಕ್ತವಲ್ಲ.

ಉದ್ವಾಡಾ ಪ್ರಸಿದ್ಧವಾಗಿದೆ

ಉದ್ವಾಡಾ ಹವಾಮಾನ

ಉತ್ತಮ ಸಮಯ ಉದ್ವಾಡಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಉದ್ವಾಡಾ

  • ರಸ್ತೆಯ ಮೂಲಕ
    ಉದ್ವಾಡವು ಮುಂಬೈನಿಂದ 200 ಕಿಮೀ ದೂರದಲ್ಲಿ ಮತ್ತು NH8 ರಿಂದ 8 ಕಿಮೀ ದೂರದಲ್ಲಿದೆ. ಉದ್ವಾಡವು ಅಹಮದಬಾದಿನಿಂದ 234 ಕಿಮೀ ದೂರದಲ್ಲಿರುವ ಸೂರತ್ನಿಂದ ಕೆಲ ಕಿಮೀಗಳ ಅಂತರದಲ್ಲಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಉದ್ವಾಡವು ರೈಲು ನಿಲ್ದಾಣವು ನಗರದ ಕೇಂದ್ರಭಾಗದಿಂದ 11 ಕಿಮೀ ದೂರದಲ್ಲಿದೆ. ಈ ನಿಲ್ದಾಣವು ಗುಜಾರತ ಮತ್ತು ಮುಂಬೈ ಮತ್ತಿತರ ನಗರಗಳೊಂದಿಗೆ ಸಂಪರ್ಕ ಹೊಂದಿದೆ. ಇಲ್ಲಿಂದ ಸೌರಾಷ್ಟ್ರ ಎಕ್ಸಪ್ರೆಸ್, ಗುಜರಾತ್ ಎಕ್ಸ್ಪ್ರೆಸ್ ಮತ್ತು ಫಿರೋಜೆಪುರ್ ಜನತಾ ಎಕ್ಸ್ಪ್ರೆಸ್ ಮುಂಬೈಗೆ ಹೋಗುತ್ತದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಉದ್ವಾಡಕ್ಕೆ ಹತ್ತಿರದ ವಿಮಾನ ನಿಲ್ದಾಣ ಸೂರತ್ನಲ್ಲಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu