ಕುಂಜಾರುಗಿರಿಯು ಉಡುಪಿಯಿಂದ ಆಗ್ನೇಯಕ್ಕೆ ಸುಮಾರು 6ರಿಂದ 7 ಮೈಲು ದೂರದ ಗುಡ್ಡ ಪ್ರದೇಶದಲ್ಲಿದೆ. ಈ ಪ್ರದೇಶವು ದುರ್ಗಾದೇವಿ ದೇವಸ್ಥಾನಕ್ಕೆ ಪ್ರಸಿದ್ಧವಾಗಿದ್ದು, ಇದನ್ನು ಪರಷುರಾಮನಿಂದ ನಿರ್ಮಾಣ ಮಾಡಲ್ಪಟ್ಟಿದೆ ಎಂದು ನಂಬಲಾಗಿದೆ. ಈ ಗುಡ್ಡವು ಆನೆಯನ್ನು ನೆನಪಿಸುವುದರಿಂದ, ಇದಕ್ಕೆ ಕುಂಜಾರುಗಿರಿ ಎಂದು ಹೆಸರಿಡಲಾಗಿದೆ. ಕನ್ನಡದಲ್ಲಿ ಕುಂಜಾರು ಎಂದರೆ, ಆನೆ ಎಂದರ್ಥ.ದುರ್ಗಾದೇವಿ ಮತ್ತು ಪರಶುರಾಮ ದೇಗುಲವು ಆಧ್ಯಾತ್ಮಿಕ ಶಾಂತಿಯನ್ನು ನೀಡುತ್ತದೆ. ಪವಿತ್ರ ತೀರ್ಥ ಮತ್ತು ಪಾಜಕ ಕ್ಷೇತ್ರದಿಂದಾಗಿ ಇದು ಪ್ರವಾಸಿಗರಿಗೆ ಪವಿತ್ರ ಕ್ಷೇತ್ರವಾಗಿ ಪರಿಣಮಿಸಿದೆ.ಉಡುಪಿಯಿಂದ ಕುಂಜಾರುಗಿರಿಗೆ ತಲುಪಲು ಸುಮಾರು ಒಂದು ಗಂಟೆ ಸಮಯ ಬೇಕಾಗುತ್ತದೆ. ಉಡುಪಿ ಮತ್ತು ಕುಂಜಾರುಗಿರಿಗೆ ಸೂಕ್ತ ಬಸ್ ಸೌಲಭ್ಯ ಇದೆ. ಸಾಕಷ್ಟು ಟ್ಯಾಕ್ಸಿ ಮತ್ತು ಅಟೋ ರಿಕ್ಷಾಗಳು ಕೂಡಾ ಇದೆ. ಈ ದೇಗುಲಕ್ಕೆ ಪ್ರವಾಸ ಮಾಡಲು ಇಚ್ಛೆಪಡುವ ಪ್ರವಾಸಿಗರಿಗೆ ಉಡುಪಿಯಲ್ಲಿ ಉಳಿದುಕೊಳ್ಳಲು ಲಾಡ್ಜ್ ಗಳು ಸೂಕ್ತ ದರದಲ್ಲಿ ಲಭ್ಯವಿದೆ.