ಕಾಪು ಎಂಬುದು ಉಡುಪಿಯ ಸಮೀಪ ಇರುವ ಒಂದು ಸಣ್ಣ ಪಟ್ಟಣ. ಇದು ಕರಾವಳಿ ಪ್ರದೇಶ. ಕಾಪುವಿನಲ್ಲಿ ಪ್ರಮುಖ ಆಕರ್ಷಣೆಯೆಂದರೆ, ಲೈಟ್ ಹೌಸ್ ಮತ್ತು ಶ್ರಿ ಮಾರಿಕಾಂಬಾ ದೇವಿಯ ದೇವಸ್ಥಾನ. ಸಮೀಪದ ಪ್ರದೇಶಗಳಿಂದಷ್ಟೇ ಅಲ್ಲದೆ ನೆರೆರಾಜ್ಯಗಳಿಂದಲೂ ಕೂಡಾ ಪ್ರವಾಸಿಗರನ್ನು ಈ ದೇವಸ್ಥಾನ ಆಕರ್ಷಿಸುತ್ತದೆ.ಸಿರ್ಸಿ ಮಾರಿಕಾಂಬಾ ಜಾತ್ರೆಯು ಇಲ್ಲಿನ ಪ್ರಮುಖ ಆಕರ್ಷಣೆ ಮತ್ತು ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ದೇಗುಲದಲ್ಲಿ ಮಾರಿಕಾಂಬಾ ದೇವಿಯ ಬಹುದೊಡ್ಡ ಮೂರ್ತಿಯನ್ನು ನೀವು ಕಾಣಬಹುದು. ಕರ್ನಾಟಕದಲ್ಲೇ ಇದನ್ನು ಅತಿ ದೊಡ್ಡ ದೇಗುಲಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.ಇಲ್ಲಿನ ಲೈಟ್ ಹೌಸ್ ಪ್ರಮುಖ ಆಕರ್ಷಣೆಯಾಗಿದ್ದು ಸುಮಾರು 1901ರಲ್ಲಿ ನಿರ್ಮಿಸಲಾಗಿದೆ ಮತ್ತು ಭೂಮಿ ಮಟ್ಟದಿಂದ 27.12 ಅಡಿ ಎತ್ತರದಲ್ಲಿ ಇದೆ. ಇಲ್ಲಿ ಸಂಜೆ 4ರಿಂದ 6 ಗಂಟೆಯವರೆಗೆ ಪ್ರತಿದಿನ ದರ್ಶನ ಭಾಗ್ಯ ಲಭಿಸುತ್ತದೆ. ಲೈಟ್ ಹೌಸ್ನಿಂದ ನೋಟವು ರಮಣೀಯವಾಗಿರುತ್ತದೆ.ಕುಂದಾಪುರದಿಂದ ಕಾಪುವಿಗೆ ಸುಮಾರು 50 ಕಿ.ಮೀ ದೂವಿದೆ. ಉಡುಪಿಯಿಂದ ಮಂಗಳೂರಿನ ಕಡೆಗೆ ಎನ್ಎಚ್೧೭ರಲ್ಲಿ ಸುಮಾರು 12 ಕಿ.ಮೀ ದೂರ ನೀವು ಪ್ರಯಾಣಿಸಿ ಈ ಪಟ್ಟಣವನ್ನು ತಲುಪಬಹುದು.