Search
  • Follow NativePlanet
Share

ಉಡುಪಿ – ಚಂದ್ರ ಮತ್ತು ನಕ್ಷತ್ರಗಳ ಸ್ಥಳ

72

ಉಡುಪಿಯು ಕರ್ನಾಟಕದಲ್ಲಿದ್ದು, ಕೃಷ್ಣ ದೇಗುಲ ಇಲ್ಲಿದೆ. ಮಾಧ್ವ ಸಮುದಾಯದಲ್ಲಿ ರುಚಿರುಚಿಯಾದ ಸಸ್ಯಾಹಾರವನ್ನು ತಯಾರಿಸಲಾಗುತ್ತದೆ, ಇವರು ದೇವರಿಗೆ ಪ್ರಸಾದವನ್ನು ತಯಾರಿಸುತ್ತಾರೆ ಮತ್ತು ಈ ಕಾರ್ಯವನ್ನು ಇವರು ಹಲವು ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ.

ಉಡುಪಿಯು ಬೆಂಗಳೂರಿನಿಂದ ಸುಮಾರು 400 ಕಿ.ಮೀ ದೂರದಲ್ಲಿದೆ ಮತ್ತು ಮಂಗಳೂರಿನಿಂದ ಸುಮಾರು 62 ಕಿ.ಮೀ ದೂರದಲ್ಲಿದೆ.

ಕೃಷ್ಣನ ದೇಗುಲದಿಂದಾಗಿ ಈ ಪ್ರದೇಶ ತುಂಬಾ ಪ್ರಸಿದ್ಧವಾಗಿದೆ. ಇಲ್ಲಿ ಶಿವನ ಇನ್ನೊಂದು ದೇಗುಲ ಕೂಡಾ ಇದೆ. ಯೆಲ್ಲೂರು ಸಮೀಪ ಇರುವ ಈ ದೇಗುಲ ಸುಮಾರು ೧೦೦ ವರ್ಷ ಹಳೆಯದು ಎಂದು ನಂಬಲಾಗಿದೆ. ಉಡುಪಿ ಕೃಷ್ಣ ಮಠವು ೧೩ನೇ ಶತಮಾನದಲ್ಲಿ ಮಧ್ವಾಚಾರ್ಯರಿಂದ ಸ್ಥಾಪಿಸಲ್ಪಟ್ಟಿದೆ.

ಇಲ್ಲಿನ ಬ್ರಾಹ್ಮಣರು ದೇವರಿಗೆ ಮಾಡುವ ಅಡಿಗೆಯು, ಸರಳವಾದ ಮತ್ತು ಅತ್ಯುತ್ತಮವಾದ ಆಹಾರವು ಕರ್ನಾಟಕದಲ್ಲಷ್ಟೇ ಅಲ್ಲ, ಇಡೀ ದೇಶದಲ್ಲೇ ಪ್ರಸಿದ್ಧವಾದದ್ದು. ಅವರು ಮಾಡುವ ದೋಸೆಯಂತೂ ಇನ್ನೂ ಜನಪ್ರಿಯ.

ಸ್ಥಳೀಯ ಪುರಾಣಶಾಸ್ತ್ರದಲ್ಲೊಂದು ಸುತ್ತು

ಸ್ಥಳೀಯರ ಪ್ರಕಾರ, ಹಿಂದೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 27 ನಕ್ಷತ್ರಗಳು ಚಂದ್ರನನ್ನು ಮದುವೆಯಾದ ನಂತರದಲ್ಲಿ ಚಂದ್ರನು ತನ್ನ ಕಾಮ ಆಸಕ್ತಿಯನ್ನು ಕಳೆದುಕೊಳ್ಳುತ್ತಾನೆ. ಶಿವನು ಪ್ರತಿಯೊಬ್ಬರಿಗೂ ಅಂತಿಮವಾದ ಗುರಿಯಾಗಿರುತ್ತಾನೆ. ಹಾಗೆಯೇ ಚಂದ್ರ ಮತ್ತು ನಕ್ಷತ್ರಗಳು ಶಿವನ ಲಿಂಗವನ್ನು ಸ್ಥಾಪಿಸಿ ಪೂಜಿಸತೊಡಗುತ್ತಾರೆ. ಈಗಲೂ ಈ ಲಿಂಗವನ್ನು ನಾವು ಉಡುಪಿಯಲ್ಲಿ ನೋಡಬಹುದು. ಇದೇ ರೀತಿ ಹೆಸರು ಕೂಡಾ ಬೆಳೆದು ಬಂದಿದೆ. ಉಡು ಎಂದರೆ ದೇವರು ಎಂದರ್ಥ, ಹಾಗೆಯೇ ಪ ಎಂದರೆ ನಕ್ಷತ್ರಗಳು ಎಂದು ಸಂಸ್ಕೃತದಲ್ಲಿ ಹೇಳಲಾಗುತ್ತದೆ.

ಉಡುಪಿಯ ಕೃಷ್ಣ ದೇಗುಲಕ್ಕೆ ಸಂಬಂಧಿಸಿದಂತೆ ಹಲವು ಐತಿಹ್ಯಗಳಿವೆ. ಒಂದು ಸ್ಥಳೀಯ ಐತಿಹ್ಯದ ಪ್ರಕಾರ, ೧೬ನೇ ಶತಮಾನದಲ್ಲಿ, ಕನಕದಾಸ ಎಂಬ ಕೆಳವರ್ಗದ ಭಕ್ತರು, ದೇವರ ದರ್ಶನವನ್ನು ಬಯಸಿದರು.

ಅವರನ್ನು ದೇಗುಲದ ಒಳಗೆ ಬಿಡದೇ ಇದ್ದುದಕ್ಕೆ, ಕನಕದಾಸರು ಒಂದು ಸಣ್ಣ ಕಿಂಡಿಯಿಂದ ದೇವರ ದರ್ಶನ ಪಡೆಯಲು ಪ್ರಯತ್ನಿಸಿದರು. ಆದರೆ ದೇವರ ಹಿಂಬದಿಯನ್ನು ಮಾತ್ರ ಅವರು ನೋಡಲು ಸಾಧ್ಯವಾಯಿತು. ಐತಿಹ್ಯಗಳು ಹೇಳುವ ಪ್ರಕಾರ, ಭಕ್ತನಿಗೆ ದರ್ಶನ ನೀಡಲು ದೇವರೇ ತಿರುಗಿದರು ಎಂದು ಹೇಳಲಾಗುತ್ತಿದೆ.

ಉಡುಪಿಯಲ್ಲಿ ನೋಡಲು ಏನಿದೆ?

ಸಮೀಪದಲ್ಲಿರುವ ಇತರ ತಾಣಗಳೆಂದರೆ ಮಲ್ಪೆ ಬೀಚ್ ಮತ್ತು ಯೆಲ್ಲೂರು ಶ್ರೀ ವಿಶ್ವೇಶ್ವರ ದೇಗುಲ. ಉಡುಪಿಯು ಸಮೀಪದ ಎಲ್ಲಾ ಪ್ರಮುಖ ಪಟ್ಟಣಗಳಿಗೆ ರಸ್ತೆ ಮತ್ತು ರೈಲು ಮಾರ್ಗದಿಂದ ಸಂಪರ್ಕವನ್ನು ಹೊಂದಿದೆ. ಸಮೀಪದ ವಿಮಾನ ನಿಲ್ದಾಣವೆಂರೆ ಮಂಗಳೂರು ವಿಮಾನ ನಿಲ್ದಾಣವಾಗಿದೆ.

ಕೃಷ್ಣ ಮಠಕ್ಕೆ ಹೊಂದಿಕೊಂಡಂತೆ ಗುರುಕುಲವಿದ್ದು, ಇಲ್ಲಿ ದ್ವೈತ ತತ್ವಶಾಸ್ತ್ರವನ್ನು ವೈಷ್ಣವ ಮತದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತದೆ. ಇಲ್ಲಿ ಪ್ರವಾಸಿಗರಿಗಾಗಿ ಹಲವಾರು ಹೋಟೆಲ್‌ಗಳಿದ್ದು, ಅವರ ಹಣಕಾಸಿನ ಮಿತಿಗೆ ತಕ್ಕಂತೆ ಸೇವೆ ಸಲ್ಲಿಸುತ್ತವೆ. ಇತರೆಲ್ಲಾ ಕೃಷ್ಣ ದೇಗುಲಗಳಲ್ಲಿ ಇರುವಂತೆ ಇಲ್ಲೂ ಕೂಡಾ ಮಕ್ಕಳ ಆಟಿಕೆಗಳು ಸಿಗುತ್ತವೆ. ಹೆಚ್ಚಿನದಾಗಿ ಕರಕುಶಲ ಸಾಂಪ್ರದಾಯಿಕ ಆಟಿಕೆಗಳು ಇಲ್ಲಿ ಲಭ್ಯ.

ಉಡುಪಿ ಪ್ರಸಿದ್ಧವಾಗಿದೆ

ಉಡುಪಿ ಹವಾಮಾನ

ಉತ್ತಮ ಸಮಯ ಉಡುಪಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಉಡುಪಿ

  • ರಸ್ತೆಯ ಮೂಲಕ
    ಉಡುಪಿಗೆ ಸಮೀಪದಲ್ಲಿ ಎನ್‌ಎಚ್‌೬೬ ಮತ್ತು ಎನ್‌ಎಚ್‌೧೭ ಹೆದ್ದಾರಿ ಇದೆ. ಕಾರ್ಕಳ ಮತ್ತು ಧರ್ಮಸ್ಥಳ, ಶಿವಮೊಗ್ಗ ಮತ್ತು ಶ್ರೀನಾರಿಯ ಮೂಲಕ ಉಡುಪಿಗೆ ರಾಜ್ಯ ಹೆದ್ದಾರಿಯು ಸಂಪರ್ಕವನ್ನು ಹೊಂದಿದೆ. ಸ್ಥಳೀಯ ಸಾರಿಗೆ ಬಸ್‌ಗಳು ಸಂಪರ್ಕವನ್ನು ಹೊಂದಿವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಕೊಂಕಣ ರೈಲಿಗೆ ಉಡುಪಿ ಸ್ಟೇಷನ್‌ ಇದ್ದು, ಮುಂಬೈ, ದೆಹಲಿ, ರಾಜ್‌ಕೋಟ್‌ ಮತ್ತು ಅಹ್ಮದಾಬಾದ್‌ನಂತಹ ಪ್ರಮುಖ ನಗರಗಳಿಗೆ ರೈಲ ಸೌಲಭ್ಯವಿದೆ. ಉಡುಪಿಯಿಂದ ಉತ್ತರಕ್ಕೆ ಸಾಗಿದರೆ ಕುಂದಾಪುರ ರೈಲು ಸ್ಟೇಷನ್‌ ಸಿಗುತ್ತದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಮಂಗಳೂರು ವಿಮಾನ ನಿಲ್ದಾಣವು ಉಡುಪಿಗೆ ಸಮೀಪದ್ದಾಗಿದ್ದು ಸುಮಾರು 50 ಕಿಮೀ ದೂರವಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri