ಉದಯಪುರ ಜಾನಪದ ಮ್ಯೂಸಿಯಂ ರಾಜಸ್ತಾನದ ಕಲಾಕೃತಿಗಳ ಬಹುದೊಡ್ಡ ಸಂಗ್ರಹವನ್ನು ಹೊಂದಿದೆ. ಸಾಂಪ್ರದಾಯಿಕ ವಸ್ತ್ರಗಳಿಂದ ಹಿಡಿದು, ಗೊಂಬೆಗಳು, ಮುಖವಾಡಗಳನ್ನೂ ಇಲ್ಲಿ ಸಂಗ್ರಹಿಸಲಾಗಿದೆ. ಆಟಿಕೆಗಳು, ಸಂಗೀತ ಉಪಕರಣಗಳು, ಜಾನಪದ ಸಂಗ್ರಹಗಳು ಮತ್ತು ಪೇಂಟಿಂಗ್ಗಳು ಈ ಮ್ಯೂಸಿಯಂನಲ್ಲಿ ನೋಡಲೇಬೇಕಾದ ಕೆಲವು ಅಂಶಗಳು.
ಉದಯಪುರದ ಚೇತಕ್ ಸರ್ಕಲ್ನ ಉತ್ತರಕ್ಕೆ ಈ ಸ್ಮಾರಕ ಇದೆ. ಇದನ್ನು ಭಾರತೀಯ ಲೋಕ ಕಲಾ ಮ್ಯೂಸಿಯಂ ಎಂದೂ ಕರೆಯಲಾಗಿದೆ.
ಇಲ್ಲ ಫ್ಯಾಬ್ರಿಕೇಟೆಡ್ ಪುರಾತನ ವಸ್ತುಗಳನ್ನು ನೋಡಬಹುದು. ದೇವತೆಗಳ ಹಲವು ಮೂರ್ತಿಗಳೂ ಇಲ್ಲಿವೆ. ಗೊಂಬೆ ಶೋಗಳನ್ನನು ಇಡೀ ದಿನ ಮ್ಯೂಸಿಯಂನಲ್ಲಿ ನಡೆಸಲಾಗುತ್ತದೆ. ಹಲವು ಸಣ್ಣ ಅವಧಿಯ ಕೋರ್ಸ್ಗಳನ್ನು ವಿವಿಧ ವಿಷಯಗಳ ಮೇಲೆ ಇಲ್ಲಿ ನಡೆಸಲಾಗುತ್ತದೆ. ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಈ ಮ್ಯೂಸಿಯಂ ತೆರೆದಿರುತ್ತದೆ.