ರಾಜ್ ಅಂಗನ್ಅನ್ನು ಗೋಲ್ ಮಹಲ್ ಎಂದು ಕರೆಯಲಾಗಿದ್ದು ಇದು ಸುಂದರವಾದ ಗೋಪುರ ಶೈಲಿಯ ರಚನೆಯನ್ನು ಹೊಂದಿದೆ. ಮಹಾರಾಣ ಉದಯ್ ಸಿಂಗ್ ಇದನ್ನು 1572ರಲ್ಲಿ ಕಟ್ಟಿಸಿದರು. ಹಲವು ವಿಚಾರಗಳ ಮೇಲೆ ಪ್ರವಚನ ನೀಡುತ್ತಿದ್ದ ರಾಜನಿಗೆ ಅನುಕೂಲವಾಗಲೆಂದು ನಿರ್ಮಿಸಿದ ವರಾಂಡವಿದು. ತಾಜ್ ಮಹಲ್ನ್ನು ಹೋಲುವ ವಾಸ್ತುಶಿಲ್ಪ ಇದು. ಹಾಲ್ನಲ್ಲಿ ಮೇವಾರದ ಹಿಂದಿನ ರಾಜರುಗಳ ಚಿತ್ರವನ್ನು ಪ್ರವಾಸಿಗರು ನೋಡಬಹುದು. ಮಹಾರಾಣ ಪ್ರತಾಪ ಸಿಂಗ್ ಬಳಸುತ್ತಿದ್ದ ಸಾಮಗ್ರಿಗಳನ್ನು ಈ ಅರಮನೆಯಲ್ಲಿ ಪ್ರದರ್ಶನಕ್ಕಿಡಲಾಗಿದೆ ಮತ್ತು ಇಲ್ಲಿನ ಒಂದು ಹಾಲ್ಅನ್ನು ಈತನ ಕುದುರೆಯಾದ ಚೇತಕ್ಗೆ ಮೀಸಲಿಡಲಾಗಿದೆ.