ಫತೇಹ್ ಸಾಗರ ಕೆರೆಯಲ್ಲಿರುವ ನೆಹರು ಗಾರ್ಡನ್, ಸುಂದರವಾದ ಒಂದು ದ್ವೀಪ. ಭಾರತದ ಪ್ರಧಾನಿ ಜವಾಹರಲಾಲ್ ನೆಹರು ನೆನಪಿಗೆ ಈ ದ್ವೀಪಕ್ಕೆ ನೆಹರು ಉದ್ಯಾನ ಎಂದು ಹೆಸರಿಡಲಾಗಿದೆ. ಅವರ ಹುಟ್ಟುಹಬ್ಬದ ನೆನಪಿಗೆ 1967 ನವೆಂಬರ್ ಹದಿನಾಲ್ಕರಿಂದ ಸಾರ್ವಜನಿಕ ಪ್ರವೇಶಕ್ಕೆ ತೆರೆಯಲಾಯಿತು. ಉದಯಪುರದಲ್ಲಿ ಪ್ರಸಿದ್ಧ ಪ್ರವಾಸಿ ತಾಣ ಇದು. ಈ ಕೆರೆಯು ಸುಮಾರು 4.5 ಎಕರೆಯಷ್ಟು ವಿಸ್ತಾರವಾಗಿ ಹರಡಿಕೊಂಡಿದೆ. ಪಾರ್ಕ್ನಲ್ಲಿ ಒಂದು ಸಣ್ಣ ಕೊಳ, ಹೂವಿನ ಉದ್ಯಾನ ಮತ್ತು ಕಾರಂಜಿಗಳಿವೆ.
ಪ್ರವಾಸಿಗರು ಉದ್ಯಾನದ ಸಮೀಪವಿರುವ ರೆಸ್ಟೋರಾಂಟಿಗೆ ಕೂಡಾ ಭೇಟಿ ನೀಡಬಹುದು.