ಮಚ್ಲಾ ಮಗ್ರಾವು ಮೀನಿನ ಆಕೃತಿಯಲ್ಲೇ ಇರುವ ಸಣ್ಣದೊಂದು ಗುಡ್ಡ. ಇದನ್ನು ಏಕಲಿಂಗ್ ಗಢ ಎಂದೂ ಕರೆಯಲಾಗಿದೆ. ಗುಡ್ಡವು ಸಜ್ಜನಗಢಕ್ಕೆ ಸಮೀಪದಲ್ಲಿದೆ. ಸಿಂದಿಯಾಗಳು 1764ರಲ್ಲಿ ದಾಳಿ ಮಾಡಿದಾಗ ಇದನ್ನು ಫಿರಂಗಿಗಳನ್ನಿಡುವ ತಾಣವಾಗಿ ಉಪಯೋಗಿಸಲಾಗಿತ್ತು.
ಈ ಗುಡ್ಡವು ಸಮುದ್ರ ಮಟ್ಟದಿಂದ ಸುಮಾರು 2,469 ಅಡಿ ಎತ್ತರವಾಗಿದೆ. ಇಡೀ ನಗರವನ್ನು ಮೇಲಿನಿಂದ ನೋಡಿ ಖುಷಿಪಡಬಹುದು. ಸಿಟಿ ಪ್ಯಾಲೇಸ್, ಕಿಶನ್ ಪೋಲ್ನ ದ್ವಾರವು ಇದಕ್ಕೆ ಹೊಂದಿಕೊಂಡಿದೆ.